ಇಳಕಲ್ಲ:
ನಿತ್ಯದ ಲಿಂಗ ಧ್ಯಾನ, ಲಿಂಗ ನಿಷ್ಠೆ ನಮ್ಮನ್ನು ಸುಜ್ಞಾನಿಗಳನ್ನಾಗಿ, ಸುಸಂಸ್ಕೃತರನ್ನಾಗಿಯೂ ಮಾಡುವುದರ ಜತೆಗೆ ನಮ್ಮನ್ನು ಸತ್ಯಶುದ್ಧ ಶರಣರನ್ನಾಗಿ ಮಾಡಬಲ್ಲುದು ಎಂದು ಪೂಜ್ಯ ಗುರುಮಹಾಂತ ಶ್ರೀಗಳು ಹೇಳಿದರು.
ಅವರು ಇಲ್ಲಿನ ಶ್ರೀಮಠದ ದಾಸೋಹ ಭವನದಲ್ಲಿ ಮಹಾಂತ ಜೋಳಿಗೆಯ ಶಿವಶಿಲ್ಪಿ ಡಾ. ಮಹಾಂತ ಶಿವಯೋಗಿಗಳವರ ೮ನೇ ಶರಣೋತ್ಸವ ನಿಮಿತ್ತ ಬೆಳಗ್ಗೆ ೭-೩೦ ರಿಂದ ೯ ಗಂಟೆಯವರೆಗೆ ಏರ್ಪಡಿಸಲಾಗಿದ್ದ ೩ ದಿನಗಳ ಇಷ್ಟಲಿಂಗ ಯೋಗ, ಅದರ ಕ್ರಮ, ಇಷ್ಟಲಿಂಗದ ವೈಜ್ಞಾನಿಕತೆ ಕುರಿತ ಪ್ರಾತ್ಯಕ್ಷಿಕೆಯ ಸಾನಿಧ್ಯ ವಹಿಸಿ ಪೂಜಾ ವಿಧಿವಿಧಾನ ಕುರಿತು ಆಶೀರ್ವಚನ ನೀಡಿದರು.

ಲಿಂಗ ಶಿವಯೋಗದಲ್ಲಿ ನನಗೆ ಒಳ್ಳೆಯದಾಗಲಿ ಎಂದು ಲಿಂಗದಲ್ಲಿ ಕೇಳಬಹುದು, ಇತರರಿಗೂ ಒಳ್ಳೆಯದಾಗಲಿ ಎಂದೂ ಕೇಳಬಹುದು, ಆದರೆ ಇನ್ನೊಬ್ಬರಿಗೆ ಕೇಡ ಬಯಸುವುದನ್ನು ಕೇಳಿದರು ಅದು ನಮ್ಮ ಮಾತನ್ನು ಕೇಳದು, ಅದು ಫಲಿಸದು, ಆದ್ದರಿಂದ ನಾವು ಯಾರಿಗೆ ಒಳ್ಳೆಯದನ್ನು ಮಾಡಲಾಗದಿದ್ದರೂ ಕೇಡನ್ನು ಬಯಸಲೂ ಬಾರದು ಎಂದು ಹೇಳಿದರು.
ಸುಮಾರು ೨೦೦ಕ್ಕೂ ಹೆಚ್ಚು ಭಕ್ತಾದಿಗಳು ಲಿಂಗ ಪ್ರಾತ್ಯಕ್ಷಿಕೆಯ ಸಹಜ ಶಿವಯೋಗದಲ್ಲಿ ಪಾಲ್ಗೊಂಡು ಶ್ರೀಗಳ ದರ್ಶನಾಶೀರ್ವಾದ ಪಡೆದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
