ಇದಕ್ಕೆ ಪ್ರತಿಯಾಗಿ ಲಿಂಗಾಯತರು ಕುರುಬರ ಜತೆ ಸೇರಿ ರೇವಣಸಿದ್ಧರ ಜಯಂತಿ ಆಚರಿಸಬೇಕು.
ದಾವಣಗೆರೆ
(ರೇಣುಕಾಚಾರ್ಯ ಜಯಂತಿಗೆ ಶರಣ ತತ್ವ ಚಿಂತಕ ವಿಶ್ವೇಶ್ವರಯ್ಯ ಬಸವಬಳ್ಳಿ ಅವರ ಪ್ರತಿಕ್ರಿಯೆ.)
1) ನೀವು ನೋಡಿದ ಹಾಗೆ ರೇಣುಕಾಚಾರ್ಯರ ಜಯಂತಿ ಆಚರಣೆ ಶುರುವಾಗಿದ್ದು ಯಾವಾಗ? ಜಯಂತಿ ಆಚರಣೆಯ ಪ್ರಮಾಣ ಹೆಚ್ಚುತ್ತಿದೆಯೇ?
ವೈಚಾರಿಕ ವೈಜ್ಞಾನಿಕ ನೆಲೆವೀಡಾದ ಕರ್ನಾಟಕದಲ್ಲಿ ಮೌಡ್ಯ ಕಂದಚಾರದ ಅಟ್ಟಹಾಸದ ಪ್ರತೀಕದಂತೆ ಈ ರೇಣುಕಾಚಾರ್ಯ ಜಯಂತಿ ಪ್ರಾರಂಭ ಆಗಿದೆ.
ರೇಣುಕಾಚಾರ್ಯ ಜಯಂತಿ ಜನ ಸಾಮಾನ್ಯರು ಇರಲಿ ರೇಣುಕಾಚಾರ್ಯರ ವಾರಸುದಾರ ಮಠಗಳಲ್ಲೂ ನಡೆಯುತಿತ್ತೋ ಇಲ್ಲವೋ ಯಾರಿಗೂ ಗೊತ್ತಿರಲಿಲ್ಲ. ರೇಣುಕಾಚಾರ್ಯ ಜಯಂತಿ ಆರಂಭ ಆಗಿದ್ದು ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿದ್ದು ಮಾತ್ರ ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ.
ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್ ಆರ್ ಬೊಮ್ಮಾಯಿ ಬಹಳ ಅಪರೂಪದ ವೈಚಾರಿಕ ವ್ಯಕ್ತಿ ಆಗಿದ್ದರು. ಅಂತವರ ಪರಿಸರದಲ್ಲಿ ಬೆಳೆದ ಬಸವರಾಜ ಬೊಮ್ಮಾಯಿ ಈ ರೀತಿಯಲ್ಲಿ ಅಧಿಕಾರಕ್ಕೆ ತಮ್ಮ ಬೌದ್ಧಿಕ ದಿವಾಳಿತನಕ್ಕೆ ಒಳಗಾಗಿರುವುದು ದುರಂತ.
2) ರೇಣುಕಾಚಾರ್ಯರ ಜಯಂತಿಯನ್ನು ಜನಪ್ರಿಯಗೊಳಿಸುವ ಪ್ರಯತ್ನ ನಡೆಯುತ್ತಿದೆಯೇ? ಇದಕ್ಕೆ ಕಾರಣವೇನು? ಇದರ ಹಿಂದಿನ ಉದ್ದೇಶವೇನು?
ಸರ್ಕಾರದ ವತಿಯಿಂದ ಆರಂಭವಾದ ಈ ಕಾಲ್ಪನಿಕ ರೇಣುಕಾಚಾರ್ಯ ಜಯಂತಿಯನ್ನು ಜನ ಸಾಮಾನ್ಯರ ಮೇಲೆ ಬಲವಂತವಾಗಿ ಹೇರಲು ಅದನ್ನು ಜನಪ್ರಿಯ ಮಾಡುವ ಕೆಲಸ ಮಾಡುತಿದ್ದಾರೆ.
ಈ ಕಾಲ್ಪನಿಕ ಪಾತ್ರದ ಅಸ್ತಿತ್ವ ಇದ್ದರೆ ಮಾತ್ರ ವೀರಶೈವರ ಅಸ್ತಿತ್ವ, ಇದು ಅವರ ಪ್ರಯತ್ನದ ಹಿಂದಿನ ದುರಾಲೋಚನೆ.
5) ರೇಣುಕಾಚಾರ್ಯರ ಜಯಂತಿಯ ಹಿಂದೆ ಯಾರಿದ್ದಾರೆ, ಯಾವ ಸಂಘಟನೆಗಳಿವೆ? ಅವರಿಗೆ ಯಾವ ರೀತಿ ಜನಬೆಂಬಲವಿದೆ?
ರೇಣುಕಾಚಾರ್ಯ ಜಯಂತಿಯ ಹಿಂದೆ ಸಹಜವಾಗಿಯೇ ಪಟ್ಟಭದ್ರರು, ಸನಾತನಿಗಳು ಮತ್ತು ಶರಣರ ವಿರೋಧಿಗಳು ಇದ್ದಾರೆ.
4) ರೇಣುಕಾಚಾರ್ಯರ ಜಯಂತಿಯ ಕಾರ್ಯಕ್ರಮಗಳಲ್ಲಿ ಬರುತ್ತಿರುವ ಸಂದೇಶವೇನು?
ಶರಣರ ಅನುಯಾಯಿಗಳು ಹೆಚ್ಚು ಹೆಚ್ಚು ವಿಚಾರವಂತರು ಆದರೆ ಅದರಿಂದ ಸನಾತನಿಗಳಿಗೆ ತೊಂದರೆ. ಅದಕ್ಕೆ ಮುಗ್ದ ಜನರಿಗೆ ಬಲೆ ಹಾಕಿ ಶರಣರ ಅನುಯಾಯಿಗಳನ್ನು ವಿಭಾಗ ಮಾಡಬೇಕಾಗಿದೆ.
6) ಈ ಬೆಳವಣಿಗೆಯನ್ನು ಲಿಂಗಾಯತರು ಹೇಗೆ ನೋಡಬೇಕು? ಹೇಗೆ ಪ್ರತಿಕ್ರಿಯೆ ನೀಡಬೇಕು?
ಈ ರೇಣುಕಾಚಾರ್ಯ ಜಯಂತಿಗೆ ಪ್ರತಿಯಾಗಿ ಲಿಂಗಾಯತರು ರೇವಣಸಿದ್ಧರ ಜಯಂತಿ ಆಚರಿಸಬೇಕು. ರೇವಣಸಿದ್ಧರ ಕುಲ ಕುರುಬ ಸಮುದಾಯದ ಜೊತೆ ರೇವಣಸಿದ್ಧರ ನಿಜ ಇತಿಹಾಸ ಹುಡುಕಾಟ ಮಾಡಿ ಜನರಿಗೆ ತಿಳಿಸಿದರೆ, ರೇಣುಕಾಚಾರ್ಯ ಅವರ ಟೊಳ್ಳು ಕಥೆ ಜನರಿಗೆ ಗೊತ್ತಾಗಿ ಜನರೇ ರೇಣುಕಾಚಾರ್ಯ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ.
ಈ ವರ್ಷದ ಕೆಲವು ಭಾಗಗಳಲ್ಲಿ ರೇವಣಸಿದ್ಧರ ಜಯಂತಿ ಪ್ರಾರಂಭ ಆಗಿದೆ. ಮುಂದಿನ ದಿನಗಳಲ್ಲಿ ಈ ಸನಾತನಿ ಸಂಘಟನೆಗಳು ಅದಕ್ಕೆ ವಿರಾಟ್ ರೂಪ ನೀಡಿ ಬೆಳೆಸಬಹುದು. ಕಾಲ್ಪನಿಕ ರೇಣುಕಾಚಾರ್ಯ ಜಯಂತಿ ಬೆಳೆದಷ್ಟೂ ಜನಸಾಮಾನ್ಯರಿಗೆ ಸತ್ಯ ತಿಳಿದು ಅವರು ಅವರು ದೂರ ಸರಿಯಬಹುದು. ಈ ಬಲವಂತದ ಜಯಂತಿ ಬೆಳೆದಷ್ಟೂ ಲಿಂಗಾಯತರಲ್ಲಿ ಜಾಗೃತಿ ಮೂಡುತ್ತದೆ.