“770 ಅಮರಗಣಂಗಳು ನಮ್ಮ ಧರ್ಮ ಸಾಹಿತ್ಯ ಸೃಷ್ಟಿಸಿದ ಪೂಜ್ಯರು, ಅವರ ಸಾಲಿಗೆ ರೇಣುಕಾಚಾರ್ಯರನ್ನು ಸೇರಿಸಿರುವುದು ಬಸವಣ್ಣನವರಿಗೆ ಮಾಡಿರುವ ಅವಮಾನ.”
ಬೆಂಗಳೂರು
ಲಿಂಗಾಯತರು ಪೂಜಿಸುವ 770 ಅಮರಗಣಂಗಳ ಪಟ್ಟಿಗೆ ರೇಣುಕಾಚಾರ್ಯರನ್ನು ಸೇರಿಸುವ ನಿರ್ಧಾರವನ್ನು ಶಂಕರ ಬಿದರಿಯವರು ತೆಗೆದುಕೊಂಡಿದ್ದಾರೆ.
ಅವರು ಶನಿವಾರ ನೀಡಿರುವ ಸ್ಪಷ್ಟನೆಯೊಂದರ ಪ್ರಕಾರ ಈಗ ‘ಲಿಂಗಾಯತರ ಧಾರ್ಮಿಕ ಮುಖಂಡರ’ ಸಂಖ್ಯೆ 771ಕ್ಕೆ ಏರಿದೆ.
ಬಸವ ಜಯಂತಿಗೆ ರೇಣುಕಾ ಜಯಂತಿ ಜೋಡಿಸಲು ಆದೇಶಿಸಿ ಏಪ್ರಿಲ್ 2 ಕಳಿಸಿದ್ದ ಸುತ್ತೋಲೆ ದೊಡ್ಡ ವಿವಾದವೆಬ್ಬಿಸಿದ ಮೇಲೆ ಅವರು ಫೇಸ್ಬುಕ್ ನಲ್ಲಿ ಮೂರು ಪುಟಗಳ ಸ್ಪಷ್ಟನೆ ನೀಡಿದರು.
ಮೊದಲನೇ ಪುಟದಲ್ಲಿ ಬಸವೇಶ್ವರರಿಗೆ 770 ಶರಣ ಸಹಯೋಗಿಗಳಿದ್ದಾರೆ, ಎಲ್ಲಾ 770 ಶರಣರ ಜಯಂತಿಗಳನ್ನು ಬಸವ ಜಯಂತಿಯ ದಿನದಂದು ಮಾತ್ರ ಆಚರಿಸಲು ವೀರಶೈವ ಮಹಾಸಭೆಯು ನಿರ್ಧರಿಸಿದೆ, ಎಂದು ಬರೆದಿದ್ದಾರೆ.
ಎರಡನೇ ಪುಟದಲ್ಲಿ “ರೇಣುಕಾಚಾರ್ಯರನ್ನು ಸಹ ಬಸವೇಶ್ವರರೊಂದಿಗೆ ಜಯಂತಿ ಆಚರಿಸಲಾಗುವ 771 ಧಾರ್ಮಿಕ ಮುಖಂಡರ ಪಟ್ಟಿಯಲ್ಲಿ ಸೇರಿಸಲು ನಾವು ನಿರ್ಧರಿಸಿದ್ದೇವೆ,” ಎಂದು ಬರೆದಿದ್ದಾರೆ.
ಅಂದರೆ ಒಂದನೇ ಪುಟದಿಂದ ಎರಡನೇ ಪುಟಕ್ಕೆ ಬರುವಷ್ಟರಲ್ಲಿ ಲಿಂಗಾಯತರ ಧಾರ್ಮಿಕ ಮುಖಂಡರ ಸಂಖ್ಯೆ ರೇಣುಕಾಚಾರ್ಯರ ಸೇರ್ಪಡೆಯಿಂದ 770ರಿಂದ 771ಕ್ಕೆ ಏರಿದೆ.
ಈ ನಿರ್ಣಯವನ್ನು ವೀರಶೈವ ಮಹಾಸಭೆಯ 2017ರ ನಿರ್ಧಾರಕ್ಕೆ ಅನುಗುಣವಾಗಿ ತೆಗೆದುಕೊಳ್ಳಲಾಗಿದೆ ಎಂದೂ ಬಿದರಿ ಹೇಳಿದ್ದಾರೆ. ಇಷ್ಟಲಿಂಗ ಪೂಜೆ ಮಾಡುವ, ಪಂಚಾಚಾರ, ಷಟ್ ಸ್ಥಲ ಮತ್ತು ಆಷ್ಟಾವರಣಗಳ ತತ್ವಗಳನ್ನು ಪಾಲಿಸುವವರೆಲ್ಲರೂ ಒಂದೇ ಎಂದು 2017ರಲ್ಲಿ ವೀರಶೈವ ಮಹಾಸಭೆ ನಿರ್ಣಯ ತೆಗೆದುಕೊಂಡಿದೆ, ಎಂದು ಸ್ಪಷ್ಟನೆಯಲ್ಲಿ ಬರೆದಿದ್ದಾರೆ.
ಇಬ್ಬರೂ ಒಂದೇ ಎಂದು ವೀರಶೈವ ಮಹಾಸಭೆ ಪರಿಗಣಿಸಿದರೂ ಬಸವ ಜಯಂತಿಗೆ ರೇಣುಕಾ ಜಯಂತಿ ಜೋಡಿಸಲು ಕಾರಣವೇನು ಎಂದು ಬಸವ ಮೀಡಿಯಾ ಕೇಳಿದಾಗ ಬಿದರಿಯವರಿಂದ ಸ್ಪಷ್ಟ ಉತ್ತರ ಬರಲಿಲ್ಲ.
ಹಿರಿಯ ವಿದ್ವಾಂಸ ಪಂಚಾಕ್ಷರಿ ಹಳೇಬೀಡು ಅವರು 770 ಅಮರಗಣಂಗಳು ಚಾರಿತ್ರಿಕ ವ್ಯಕ್ತಿಗಳು, ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ಅನುಭಾವಿಗಳು. ನಮ್ಮ ಧರ್ಮ ಸಾಹಿತ್ಯ ಸೃಷ್ಟಿಸಿದ ಪೂಜ್ಯರು.
12ನೇ ಶತಮಾನದ ನಂತರ ಅಸಂಖ್ಯಾತ ಶರಣರು ಧರ್ಮಕ್ಕೆ ದುಡಿದಿದ್ದಾರೆ. ಸಿದ್ಧಲಿಂಗೇಶ್ವರರು ದೊಡ್ಡ ಪಡೆಯನ್ನೇ ಕಟ್ಟಿದರು. ಆದರೆ ಅವರು ಯಾರನ್ನೂ ಅಮರಗಣಂಗಳ ಸಾಲಿಗೆ ಸೇರಿಸಿಲ್ಲ.
ಅಂತಹ ಪವಿತ್ರವಾದ 770 ಅಮರಗಣಂಗಳ ಸಾಲಿಗೆ ಕಾಲ್ಪನಿಕ ರೇಣುಕಾಚಾರ್ಯರನ್ನು ಸೇರಿಸಿ ಆ ಸಂಖ್ಯೆಯನ್ನು 771ಕ್ಕೆ ಏರಿಸಿರುವುದು ವಿಡಂಬನೆ. ಇದು ಶರಣ ಪರಂಪರೆಗೆ, ಬಸವಾದಿ ಶರಣರಿಗೆ ಮಾಡಿರುವ ಅವಮಾನ, ಎಂದು ಪಂಚಾಕ್ಷರಿ ಹೇಳಿದರು.
ಅಸಂಖ್ಯಾತ ಶರಣರು ಧರ್ಮಕ್ಕೆ ದುಡಿದಿದ್ದಾರೆ. ಆದರೆ ಅವರು ಯಾರನ್ನೂ ಅಮರಗಣಂಗಳ ಪಟ್ಟಿಗೆ ಸೇರಿಸಿಲ್ಲ. ಅಮರಗಣಂಗಳು ಅಷ್ಟು ಪವಿತ್ರರು.
ಬಿದರಿ ಅವರ ಏಪ್ರಿಲ್ 2ರ ಸುತ್ತೋಲೆಗೆ ಬಹಳ ತೀಕ್ಷ್ಣ ಪ್ರತಿಕ್ರಿಯೆ ಬಂದಿದೆ. ಲಿಂಗಾಯತ ಮಠಾಧೀಶರ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳಗಳಂತಹ ಸಂಘಟನೆಗಳು ಹಾಗೂ ವೈಯಕ್ತಿಕವಾಗಿ ಪ್ರಮುಖರು, ಜನಸಾಮಾನ್ಯರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ಜನ ಬಿದರಿಯವರಿಗೆ ಕರೆ ಮಾಡಿ ಪ್ರತಿಭಟಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸುತ್ತೋಲೆಗೆ ನಿರಂತರವಾಗಿ ಟೀಕೆ ಬರುತ್ತಿದೆ. ಇದರಿಂದ ಗಲಿಬಿಲಿಗೊಂಡು ಬಿದರಿ ತಮ್ಮ ಫೇಸ್ಬುಕ್ ಪುಟದಲ್ಲಿ ಸ್ಪಷ್ಟನೆ ನೀಡಿರುವ ಹಾಗೆ ಕಾಣಿಸುತ್ತದೆ.
ತಮ್ಮ ಸ್ಪಷ್ಟನೆಯಲ್ಲಿ “ನಮ್ಮ ನಿರ್ಧಾರದ ಟೀಕೆಯನ್ನು ನಾವು ಸೂಕ್ತ ಗೌರವ, ಮರ್ಯಾದೆಯಿಂದ ಮತ್ತು ನಮ್ಮನ್ನು ಟೀಕಿಸುವವರ ಬಗ್ಗೆ ಪ್ರೀತಿಯಿಂದ ಸ್ವೀಕರಿಸುತ್ತೇವೆ. ನಮ್ಮನ್ನು ನಿಂದಿಸುವವರು ನಮ್ಮ ಸಹೋದರರು ಎಂದು ಭಾವಿಸುವ ಶ್ರೀ ಬಸವೇಶ್ವರರ ತತ್ವವನ್ನು ನಾವು ಅನುಸರಿಸುತ್ತೇವೆ,” ಎಂದೂ ಬಿದರಿ ಬರೆದುಕೊಂಡಿದ್ದಾರೆ.



ಅಯ್ಯಯ್ಯೋ ಬಿಡ್ರಪ್ಪ ಲಿಂಗಾಯತ ಇವರಲ್ಲಿ ಒಗ್ಗಟ್ಟು ಇಲ್ಲಾ ಮತ್ತು ಲಿಂಗಾಯತ ಧರ್ಮವನ್ನು ಲಿಂಗಾಯತ ಇವರೇ ಹಾಳುಮಾಡುತಾರೆ, ಯಾವ ಕಾರಣಕ್ಕೂ ಶಂಕರಾಬಿದರಿಯವರ ಆದೇಶ ಪಾಲಿಸ ಬಾರದು
೯೦೦ ವರ್ಷಗಳ ನಂತರ ೭೭೧ನೇಯವರಾಗಿ ಸೇರಿಸುವ ಔಚಿತ್ಯ ಕಂಡದ್ದೆಲ್ಲಿ? ಅವರ ಅನುಯಾಯಿ ಪಂಚಾಚಾರ್ಯರು ಇದನ್ನು ಒಪ್ಪುವರೆ. ಬಸವಣ್ಣ ನವರನ್ನು ಧರ್ಮಗುರು ಎಂದು ಒಪ್ಪುವರೆ. ಹಿಂದುಗಳಲ್ಲ ಎಂದು ಒಪ್ಪಿಕೊಳ್ಳುತ್ತಾರ? ಯಾವುದೂ ಸಾಧ್ಯವಿಲ್ಲ. ಬಸವಣ್ಣನವರ ಇತಿಹಾಸ ತಿರುಚಿ ಲಿಂಗಾಯತ ಧರ್ಮವನ್ನೇ ನಾಶಮಾಡುವ ಮನೋಭಾವದವರಿಂದ ಒಳ್ಳಯದನ್ನು ಬಯಸುವುದು ನಮ್ಮ ಮೂರ್ಖತನ ಆಲ್ಲವೆ. ದಯಮಾಡಿ ನಿಮ್ಮ ನಿರ್ಣಯ ಹಿಂಪಡೆದು ಶಾಂತಿ,ಸಮಾದಾನದಿಂದ ಜಯಂತಿ ನಡೆಯಲು ಸಹಕರಿಸಿ.
ಬಿದರಿಯವರ ಮುಂದಿನ ಸಂಶೋಧನೆ.
ವಿಶ್ವಕರ್ಣ ಲಿಂಗಾಯತರ 771 ನೇ ಧಾರ್ಮಿಕ ಗುರು
ದಾರುಕಾಚಾರ್ಯ ಲಿಂಗಾಯತರ 772ನೇ ಧಾರ್ಮಿಕ ಗುರು
ಘಂಟಾಕರ್ಣ ಲಿಂಗಾಯತರ 773 ನೇ ಧಾರ್ಮಿಕ ಗುರು
ಧೇನುಕರ್ಣ ಲಿಂಗಾಯತರ 774 ನೇ ಧಾರ್ಮಿಕ ಗುರು
ರೇಣುಕಾಚಾರ್ಯ ಲಿಂಗಾಯತರ 775 ನೇ ಧಾರ್ಮಿಕ ಗುರು
😂😂😂😂😂
ಹುಚ್ಚು ಹಿಡಿದವರನ್ನು ಆಸ್ಪತ್ರೆಗೆ ಸೇರಿಸಬಹುದು ಅರೆಹುಚ್ಚರನ್ನು ಎಲ್ಲಿ ಸೇರಿಸಬೇಕು ?
ಇನ್ನುಳಿದ ನಾಲ್ಕುಜನರನ್ನು ಸೇರಿಸಿ ಬಿಡಿ….
ಬಸವಾದಿ ಪ್ರಮಥರು 770… ಸಂಶೋಧನೆ ಮಾಡಿದರೆ 1000 ಆಗಬಹುದು ಆದರೆ ಪಂಚಾಚಾರ್ಯರು ಯಾವತ್ತು ಬರವಾದಿ ಪ್ರಮಥರಾಗಲ್ಲ… ಅವರನ್ನು ನಾವು ಒಪ್ಪುವುದಿಲ್ಲ.
Km nagasundaramurthy s/- kp mahadevappa hosa Mata bidi #305 kuderu 571316 chamarajanagar district
Sir monne jati ganati nodidira nivella nanu lingayata ne… lingayata dalli estu jati idave sir…matte yake odedu jati ganati madadru sarakaradavru….nanna prasne iste….sarakarakke kelo dhairya ideya nimma e veerashaiva mattu lingayata dharmada nayakrige…..
ಇವರು ಏನೇ ಹೇಳಿದರು ಬಸವ ಜಯಂತಿ ಬಿಟ್ಟು ಬೇರೆ ಯಾರ ಜಯಂತಿ ಮಾಡಬೇಡಿ ಬಸವಾದಿ ಶಿವ ಶರಣರ ತತ್ವ ಪಾಲ್ಲಿ ಸೋಣ🙏💐
” ” ಧರ್ಮವು ನಂಬಿಕೆಯ ವಿಷಯ ವಾಗಿದೆ. ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಬಾರದು.”
ಈ ರೀತಿ ಹೇಳಿದ ಬೀದರಿಯವರೇ, 60 ವರುಷಕ್ಕೆ ಅರಳು ಮರಳು ಅನ್ನುವಂತೆ ನಿಮಗೆ ಬುದ್ದಿ ಸ್ಥಿಮಿತದಲ್ಲಿ ಉಳಿದಂತೆ ಕಾಣುವುದಿಲ್ಲ. ಹೇರಬಾರದು ಅನ್ನುತ್ತಾ ಕಾಲ್ಪನಿಕ ಕಥಾ ವ್ಯಕ್ತಿಯನ್ನು ಬೇರೆಯವರ ಮೇಲೆ ಏಕೆ ಹೆರುತಿದ್ದೀರಿ?
ನಿಮ್ಮ ಬುದ್ದಿ ಸ್ತಿಮಿತ ಆಗಿದ್ದರೆ, ಕಲಲ್ಲಿ ಹುಟ್ಟುತ್ತಾರೆ ಅನ್ನುವುದನ್ನು ನಂಬುವ ನಿಮ್ಮಂತವರನ್ನು ದೊಡ್ಡ ಹುದ್ದೆಗೆ ನೇಮಕ ಮಾಡಿದ್ದ ಅಯೋಗ್ಯ ಯಾರು?
ಇದೇ ರೀತಿ ಹುಚ್ಚು ಹುಚ್ಚು ಹೇಳಿಕೆ ಕೊಡುವುದಾದರೆ ಧಾರವಾಡ ದ ಹುಚ್ಚಾಸ್ಪತ್ರೆಯಲ್ಲಿ ಒಮ್ಮೆ ತೋರಿಸಿ ಕೊಳ್ಳಿರಿ. ಇಲ್ಲವೆ ದುಗ್ಗಾನಿ ವೈದ್ಯರು ಚೆನ್ನಾಗಿ ಚಿಕಿತ್ಸೆ ಕೊಡುತ್ತಾರಂತೆ, ಒಮ್ಮೆ ಹೋಗಿ ತೋರಿಸಿ ಕೊಳ್ಳಿರಿ.
IAS ಜೊತೆ IPS. ಕಾಂಪಿಟೇಶನ್ ಗೆ ಬಿದ್ದಂತಿದೆ.
ಎಲ್ಲಿಯ ಐತಿಹಾಸಿಕ ಬಸವರಸರು , ಎಲ್ಲಿಯ ಕಲ್ಲೋದ್ಬವ ಕಾಲ್ಪನಿಕ ರೇಣುಕಾಚಾರಿ. ಪಂಚಾಮೃತದಲ್ಲಿ ತೌಡು ಸೇರಿಸುವ ಕೆಲಸವನ್ನು ಬಿದರಿಯವರು ಕೈ ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಇರುವ ಮೂರು ಕಾಸಿನ ಕಿಮ್ಮತ್ತನ್ನೂ ಕಳಕೋತಾರೆ. ಜೈ ಬಸವೇಶ್ವರ.
When you people celebrating 770 sharanar function,what is problem of adding Sri Renukacharya gurugalu,,Sri Basavanna told, Avanarava a Avanarava don’t tell ,eva nammava eva nammava Endu. So All Lingayath must join and celebrate
೭೭೦ ಅಮರಗಣಂಗಳು ಬಸವಣ್ಣನವರ ಮಹಾಮನೆಯ ಅನುಭವ ಮಂಟಪದಲ್ಲಿ ಭಾಗವಹಿಸಿದ ಶರಣರು ಮತ್ತು ಧರ್ಮ ಪ್ರಚಾರಕರು. ಕಾರಣ ಆ ಎಲ್ಲಾ ೭೭೦ ಅಮರಗಣಂಗಳ ಜಯಂತಿ ಪ್ರತ್ಯೇಕವಾಗಿ ಆಚರಿಸುವ ಬದಲಿಗೆ ಬಸವ ಜಯಂತಿಯಂದು ಒಟ್ಟಿಗೆ ಆಚರಿಸುವುದು ಸೂಕ್ತ. ಆದರೆ ಈ ರೇಣುಕಾಚಾರ್ಯರು ಬಸವಣ್ಣನವರ ಸಮಕಾಲೀನವರಲ್ಲ, ಮತ್ತು ಇವರು ಲಿಂಗೋದ್ಧವ ಎಂದು ಹೇಳುತ್ತಿರುವುದು, ಇವರಿಂದ ಲಿಂಗಾಯತ ಧರ್ಮದ ಪ್ರಚಾರ ಮಾಡಿದ ಯಾವ ದಾಖಲೆಗಳಿಲ್ಲ. ಕಾರಣ ಇವರನ್ನು ೭೭೧ ನೇ ಅಮರಗಣಂಗಳೆಂದು ಲಿಂಗಾಯತರು, ಬಸವಾನುಯಾಯಿಗಳು ಒಪ್ಪುವುದಿಲ್ಲ.
ನಮ್ಮ ಒಳಜಗಳದಿಂದ ಸರಕಾರದಲ್ಲಿ ಯಾವ ಸ್ಥಾನ ಪಡೆದಿದ್ದೇವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಗೌರವ ಇಲ್ಲದಂತಾಗುತ್ತದೆ. ಇಲ್ಲಿ ರಾಜಕಾರಣ ಬಂದರೆ ಅನೇಕ ಪಂಗಡಗಳಾಗಿ ಒಡೆದು ಹಾಳಾಗುತ್ತದೆ. ಲಿಂಗಧರಿಸಿದವರೆಲ್ಲರೂ ಲಿಂಗವಂತರು. ಶಿವನ ಆರಾಧನೆಯಿಂದ ಶೈವರು. ಲಿಂಗಮಧ್ಯೆ ಜಗತ್ಸರ್ವಂ . ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ ಎಂದ ಬಸವಣ್ಣನವರ ವಚನನವನ್ನು ಮರೆತು ಬಾಳಲು ಹೊರಟ್ಟಿದ್ದೇವೆ. ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೆ ವಿಶ್ವಕ್ಕೆ ಶಾಂತಿ. ಒಗ್ಗಟ್ಟಿನಲ್ಲಿ ಬಲವಿದೆ.
ಯರನ್ನೂ ನಂಬಿಸಬಹುದು ಅರೆತಿಳುವಳಿಕೆ ಇರುವ ಹುಂಬರನ್ನು ಸಮಜಾಯಿಸುವುದು ಕಷ್ಟದ ಕೆಲಸ. ಇವರನ್ನು ಕಡೆಗಣಿಸಿ ದೂರತಳ್ಳುವುದೊಂದೇ ಮಾರ್ಗ. ಈಹುಂರಿಗೆ ಸಾಥಕೊಡುವವರೂ ಇರುತ್ತಾಇರುತ್ತಾರೆ. ಅವರಿಂದ ನಾವು ಜಾಗ್ರತೆ ವಹಿಸಬೇಕು.
ಅವರ ಶಿಕ್ಷಣಕ್ಕೆ ಹಾಗೂ ಅವರು ಅನುಭವಿಸಿದ ಅಧಿಕಾರಿ ಸ್ಥಾನಕ್ಕೆ … ಅಯೋಗ್ಯರ ಹಾಗೆ ವರ್ತಿಸುತ್ತಿದ್ದಾರೆ…… ಇಡೀ ಪ್ರಾಚೀನ ಕಾಲದ ಕರ್ನಾಟಕ ರಾಜ್ಯದ 12ನೆಯ ಶತಮಾನದಲ್ಲಿ ನಡೆದ ಬ್ರಾಹ್ಮಣರ ವಿರುದ್ಧ,,,,ಮನು ವಾದಿಗಳ ವಿರೋಧದ ನಡುವೆ ನಡೆದ ಬಸವಾದಿ ಶಿವ ಶರಣರ ಕಲ್ಯಾಣ ಕ್ರಾಂತಿಯ ನೆನಪುಗಳ ಬಗ್ಗೆ ……. ಈ ಅವಿವೇಕಿ ಬಿದರಿ ಎನ್ನುವ ips ನೌಕರಿ ಮಾಡೆತೀ ಗೊತ್ತಾಗುತ್ತಿಲ್ಲವೆ….ವಯಸ್ಸಾದ ಶಾಮನೂರು ಮತ್ತು ಸರ್ಕಾರಿ ಕೆಲಸದಿಂದ ವಯಸ್ಸಾದ ಅರು ಮರುವಿನ ಬಿದರಿ ಸಾಹೇಬರಿಗೆ ಏಕೆ ಗೊತ್ತಾಗುತ್ತಿಲ್ಲ…….ಖಂಡು ಕಂಡು ಸಮಾಜದ ವಿರುದ್ಧ ಹೋಗುತ್ತಿದ್ದಾರೆ……ಇಷ್ಟು ದೊಡ್ಡ ಲಿಂಗಾಯತ ಧರ್ಮದ ಜನ, ಶರಣರಾದ ಲಿಂಗಾಯತ ಧರ್ಮದ ಬಸವ ಭಕ್ತರು ಮತ್ತು ಅನುಯಾಯಿಗಳು….ಹುಚ್ಚರೋ…….ಈ ಬಿದರಿಯವರು ಎಲ್ಲರನ್ನೂ ಹುಚ್ಚುರನ್ನಾಗಿ ಮಾಡುತ್ತಿದ್ದಾರೆ…. ತಾವೇ ಹಚ್ಚರೋ …… ಎಂಬುದನ್ನು ಬಸವ ಭಕ್ತರು ಸರಿಯಾಗಿ ಉತ್ತರ ನೀಡಬೇಕು…… ಜೈ ಬಸವಣ್ಣನವರು….. ಜೈ ಸಂವಿಧಾನ …. ಬಸವಣ್ಣನವರ ಬಗ್ಗೆ ಮತ್ತು ಬಸವಾದಿ ಶರಣರ ವಿರುದ್ಧ ಆಸೆಯಂತೆ ಬಿದರಿ ಅವರು ಹೋಗುತ್ತಿದ್ದಾರೆ…….ಬಸವ ಧರ್ಮದ ಭಕ್ತರು ಕಠೋರವಾಗಿ ಟಿಕೀಸಿ …ಇವರ ಕುತಂತ್ರದ ಹೇಳಿಕೆಗೆ ಎಚ್ಚರವಾಗಿರಬೇಕು… ಅವರನ್ನು ನಿಂದಿಸಬೇಕು…