ಶಾಲೆಗಳಲ್ಲಿ ಸೌಹಾರ್ದತೆ ಮೂಡಿಸಲು ಕನ್ನಡ ಪ್ರಾಧಿಕಾರದಿಂದ 10 ರೂಪಾಯಿ ಪುಸ್ತಕಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ರಾಜ್ಯದ ಶಾಲಾ–ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ಪರಸ್ಪರ ಸೌಹಾರ್ದ ಮೂಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಪುಸ್ತಕಗಳನ್ನು ಪ್ರಕಟಿಸಿ ವಿತರಿಸುವ ಜತೆಗೆ ಸೌಹಾರ್ದ ಸಮಾವೇಶಗಳನ್ನು ಹಮ್ಮಿಕೊಳ್ಳಲು ಕಾರ್ಯಯೋಜನೆ ರೂಪಿಸಿದೆ.

‘ಸರ್ವಜನಾಂಗದ ಶಾಂತಿಯ ತೋಟ’ ಪರಿಕಲ್ಪನೆಯಡಿ ಈ ಯೋಜನೆಯನ್ನು ಪ್ರಾಧಿಕಾರ ಹಮ್ಮಿಕೊಂಡಿದೆ. ಬೇರೆ ಬೇರೆ ಸಮುದಾಯದವರು, ಧರ್ಮದವರು ಒಟ್ಟಿಗೆ ಬದುಕಿರುವುದು ಹಾಗೂ ಅವರು ನೀಡಿದ ಕೊಡುಗೆಗಳನ್ನು ತಿಳಿಸುವುದು ಈ ಯೋಜನೆಯ ಉದ್ದೇಶ.

‘ಕರ್ನಾಟಕ ಸೌಹಾರ್ದ ಸಂಸ್ಕೃತಿ’ ಮಾಲಿಕೆಯಡಿ ತಲಾ 72 ಪುಟಗಳ ನೂರು ಪುಸ್ತಕಗಳನ್ನು ಪ್ರಕಟಿಸಲು ಪ್ರಾಧಿಕಾರ ಮುಂದಾಗಿದೆ. ಈ ಪುಸ್ತಕಗಳನ್ನು ತಲಾ ₹10ಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಿದೆ, ಎಂದು ಪ್ರಜಾವಾಣಿ ವರದಿ ಮಾಡಿದೆ.

ಮೈಲಾರಲಿಂಗ ಸೇರಿ ವಿವಿಧ ಮಹಾ ಪುರುಷರು, ಮಲೆ ಮಹದೇಶ್ವರ ಬೆಟ್ಟ, ಮೇಲುಕೋಟೆ ಸೇರಿ ಹಲವು ಐತಿಹಾಸಿಕ ಸ್ಥಳಗಳ ಬಗ್ಗೆ ಪ್ರಾಧಿಕಾರವು ಪುಸ್ತಕ ಪ್ರಕಟಿಸಲಿದೆ. ಇದರ ಜತೆಗೆ ಜೈನ, ಬೌದ್ಧ ಸೇರಿ ವಿವಿಧ ಧರ್ಮಗಳು ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆಯೂ ಪುಸ್ತಕಗಳನ್ನು ಹೊರತರಲಿದೆ.

ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಪುಸ್ತಕ ಪ್ರಕಟಣೆ ಕಾರ್ಯ ಪೂರ್ಣಗೊಳಿಸುವ ಗುರಿಯನ್ನು ಪ್ರಾಧಿಕಾರ ಹೊಂದಿದೆ, ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

Share This Article
2 Comments
  • ಉತ್ತಮ ವಿಚಾರ ಸರ್.ಆಗಲಿ ಒಳ್ಳೆಯದಾಗಲಿ

  • ಆಗಲೇಬೇಕಾಗಿರುವ ಕೆಲಸ.ಪ್ರತಿ ಜಿಲ್ಲೆಯಲ್ಲೂ ಸೌಹಾರ್ದತ ತಾಣಗಳಿವೆ. ಶಾಂತರಸರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಈ ಕುರಿತ ಯೋಜನೆಯನ್ನು ಹಮ್ಮಿಕೊಂಡಿದ್ದರು. ಕಾರ್ಯವೂ ಪ್ರಗತಿಯಲ್ಲಿತ್ತು. ಮುಂದೇನಾಯಿತೊ ಗೊತ್ತಿಲ್ಲ.

Leave a Reply

Your email address will not be published. Required fields are marked *