ದಾವಣಗೆರೆ
ಬಸವ ಜಯಂತಿ ದಿನ ಕಾಲ್ಪನಿಕ ರೇಣುಕಾಚಾರ್ಯ ಅವರ ಭಾವ ಚಿತ್ರ ಪ್ರದರ್ಶನ ಮಾಡುವ ಶಂಕರ್ ಬಿದರಿ ಅವರ ನಿರ್ಧಾರ ಹಾಸ್ಯಾಸ್ಪದವಲ್ಲವೇ.
ಶಂಕರ್ ಬಿದರಿಯವರೇ ಬಸವಣ್ಣನವರಿಗೂ ಕಾಲ್ಪನಿಕ ರೇಣುಕಾಚಾರ್ಯಗೂ ಏನಾದರೂ ಸಂಬಂಧ ಇದೆಯೇ?
ಬಸವ ಜಯಂತಿ ದಿನ ಶರಣರ ಭಾವಚಿತ್ರ ಪ್ರದರ್ಶನ ಮಾಡುವ ನಿಮ್ಮ ಸಲಹೆ ಸರಿಯಾದುದಾಗಿದೆ. ಆದರೆ ಹುಟ್ಟಿಯೇ ಇಲ್ಲದ ಯಾವುದೇ ತತ್ವ ಆದರ್ಶಗಳನ್ನು ಜನರಿಗೆ ನೀಡದ ಕಪೋಲ ಕಲ್ಪಿತ ಪುರಾಣಗಳಲ್ಲಿ ಹುಟ್ಟಿದ ಪುರಾಣದಲ್ಲಿಯೇ ಸತ್ತ ರೇಣುಕಾಚಾರ್ಯರ ಫೋಟೋ ಬಸವ ಜಯಂತಿ ದಿನ ಪ್ರದರ್ಶನ ಮಾಡುವ ನಿಮ್ಮ ನಿಲುವು ಅತ್ಯಂತ ಖಂಡನಾರ್ಹ.
ವಿಶ್ವದ ವಿದ್ವಾಂಸರು ಬಸವಣ್ಣನವರ ವಿಚಾರಗಳಿಗೆ ಮಾರು ಹೋಗಿದ್ದಾರೆ ಅವರನ್ನು ಒಪ್ಪುತಿದ್ದಾರೆ.
ರೇಣುಕಾಚಾರ್ಯ ಕಥೆಯನ್ನು ಕೇಳಿದರೆ ಜಗತ್ತಿನ ವಿದ್ವಾಂಸರು ಮನೋರಂಜನೆ ಪಡೆದು ನಕ್ಕು ನಲಿಯಬಹುದೇ ವಿನಃ ಯಾವುದೇ ಕಾರಣಕ್ಕೂ ಅವರನ್ನು ಒಪ್ಪಿಕೊಳ್ಳುವುದೇ ಇಲ್ಲ ಇಂಥಹ ವ್ಯಕ್ತಿಯನ್ನು IPS ಉತ್ತೀರ್ಣರಾದ ನೀವು ಒಪ್ಪುವುದು ನಿಮ್ಮ ಜ್ಞಾನಕ್ಕೆ ಅವಮಾನ.
ವಿದ್ಯಾವಂತರಾದ ನಿಮ್ಮಿಂದ ಇಂತಹ ಅವೈಜ್ಞಾನಿಕ ನಿರ್ಧಾರ ಮಾಡಿರುವುದು ಖಡಾಖಂಡಿತವಾಗಿ ತಪ್ಪು.
ಕರ್ಣದಲ್ಲಿ ಜನಿಸಿದವರುಂಟೇ ಎಂದು ನೈಸರ್ಗಿಕವಾಗಿ ಹುಟ್ಟದೇ ಇರುವವರನ್ನು ತಿರಸ್ಕರಿಸಿದ ಬಸವಣ್ಣನವರ ಜಯಂತಿ ದಿನ ಜಡ ಶಿಲೆಯಿಂದ ಹುಟ್ಟಿದ ರೇಣುಕಾಚಾರ್ಯ ಭಾವ ಚಿತ್ರ ಪ್ರದರ್ಶನ ಹಾಸ್ಯಾಸ್ಪದ ಹಾಗೂ ಬಸವ ದ್ರೋಹದ ಕೆಲಸ.
ಶಂಕರ್ ಬಿದರಿ ಸಾಹೇಬರೆ ದಯಮಾಡಿ ನಿಮ್ಮ ಆದೇಶ ಹಿಂಪಡೆದು ಬಸವಣ್ಣನವರಿಗೆ ಗೌರವ ಕೊಟ್ಟು ನೀವೂ ಸಹ ನಿಮ್ಮ ಘನತೆ ಉಳಿಸಿಕೊಳ್ಳಿ. ಬಸವಾಭಿಮಾನಿಗಳು ಬೀದಿಗೆ ಇಳಿದಾರು ಎಚ್ಚರ.