(ಬಸವ ಜಯಂತಿಯನ್ನು ರೇಣುಕಾ ಜಯಂತಿಯ ಜೊತೆ ಆಚರಿಸಬೇಕೆಂದು ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿರುವ ಸುತ್ತೋಲೆಗೆ ಲಿಂಗಾಯತ ಮಠಾಧೀಶರ ಒಕ್ಕೂಟದ ಪರವಾಗಿ ಭಾಲ್ಕಿ ಶ್ರೀಗಳ ಪ್ರತಿಕ್ರಿಯೆ.)
ಭಾಲ್ಕಿ
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಶರಣ ಶಂಕರ ಬಿದರಿ ಅವರು ಏಪ್ರಿಲ್ 2ರಂದು ಒಂದು ಸುತ್ತೋಲೆ ಹೊರಡಿಸಿ, ರೇಣುಕಾಚಾರ್ಯರ, ಬಸವೇಶ್ವರರ ಮತ್ತು ಎಲ್ಲ ಅಮರಗಣಂಗಳ ಜಯಂತಿ ಆಚರಿಸಲು ಆದೇಶ ನೀಡಿರುವುದು, ಸಮಸ್ತ ಲಿಂಗಾಯತ ಸಮಾಜಕ್ಕೆ ಆಘಾತ ಉಂಟು ಮಾಡಿದೆ.
ಕರ್ನಾಟಕ ಸರಕಾರವೇ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇಂತಹ ಮಹಾಪುರುಷರ ಜೊತೆ ಪೌರಾಣಿಕ, ಕಾಲ್ಪನಿಕ ರೇಣುಕಾಚಾರ್ಯರ ಜಯಂತಿ ಆಚರಿಸುವುದು ಇತಿಹಾಸಕ್ಕೆ ಮಾಡುವ ಬಹುದೊಡ್ಡ ದ್ರೋಹವೆಂಬುದು ವೀರಶೈವ-ಲಿಂಗಾಯತ ಮಹಾಸಭೆಯ ಅಧ್ಯಕ್ಷರು ಮರೆಯಬಾರದು.
ಶರಣ ಶಂಕರ ಬಿದರಿ ಅವರು ಬಸವತತ್ವ ಅರಿತುಕೊಂಡವರು, ಬಸವಾಭಿಮಾನಿಗಳು, ಬಸವತತ್ವದ ದಂಡನಾಯಕರಾದ ಇಳಕಲ್ಲ ಮತ್ತು ಗದಗ ಹಿರಿಯ ಶ್ರೀಗಳ ಆತ್ಮೀಯ ಶಿಷ್ಯರಾಗಿದ್ದವರು. ಅವರು ಇಂತಹ ನಿರ್ಧಾರ ತೆಗೆದುಕೊಂಡಿರುವುದು ಇಡೀ ಲಿಂಗಾಯತ ಸಮಾಜಕ್ಕೆ ಬೇಸರ ತಂದಿದೆ.
ಅವರ ಈ ನಿರ್ಧಾರ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ಇದನ್ನು ಹಿಂದೆ ಪಡೆಯಬೇಕೆಂದು ಕೋರುತ್ತೇವೆ.
ವಿಶ್ವಗುರು ಬಸವಣ್ಣನವರ ಜಯಂತಿಗೆ ಶತಮಾನದಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಇದನ್ನು ಆಚರಿಸಲು ಹರ್ಡೇಕರ್ ಮಂಜಪ್ಪನವರು ಮತ್ತು ಇನ್ನಿತರ ಮಹನೀಯರು ಪಡೆದಿರುವ ಪರಿಶ್ರಮ ಮರೆಯುವಂತಹದ್ದಲ್ಲ. ತಮ್ಮ ಈ ನಿರ್ಧಾರ ಅವರ ಪರಿಶ್ರಮ, ತ್ಯಾಗಕ್ಕೆ ಚ್ಯುತಿ ತರುವಂತಹದ್ದು.
ಈಗಾಗಲೇ ರೇಣುಕಾಚಾರ್ಯರನ್ನು ನಂಬುವ ಸದ್ಧಕ್ತರು ಫಾಲ್ಗುಣ ಶುದ್ಧ ತ್ರಯೋದಶಿ ದಿನದಂದು ಅವರ ಜಯಂತಿ ಆಚರಿಸುತ್ತಿದ್ದಾರೆ. ಆದರೆ ಅದನ್ನು ಬಸವ ಜಯಂತಿಗೆ ತಳುಕು ಹಾಕುವುದು ಅನೈತಿಹಾಸಿಕ ಮತ್ತು ಅಕ್ಷಮ್ಯವಾದದ್ದು.
ತಮ್ಮ ಒಂದು ತಪ್ಪು ಹೆಜ್ಜೆ ಸಮಾಜದ ನೂರಾರು ವರ್ಷಗಳ ಭವಿಷ್ಯ ಕೆಡಿಸುತ್ತದೆ. ಇದು ಶರಣ ಚರಿತ್ರೆಯ ಇತಿಹಾಸದಲ್ಲಿ ಕಪ್ಪುಚುಕ್ಕಿಯಾಗಿ ನಿಮ್ಮ ಹಣೆಪಟ್ಟಿಗೆ ಅಂಟಿಕೊಳ್ಳುತ್ತದೆ. ಇದನ್ನು ಅರಿತುಕೊಂಡು, ತಿಳಿದು ತಿಳಿಯಲಾರದಕ್ಕೂ ಆದ ಈ ತಪ್ಪನ್ನು ವೀರಶೈವ-ಲಿಂಗಾಯತ ಮಹಾಸಭೆ ಸರಿಪಡಿಸಬೇಕು.
ಇಲ್ಲದಿದ್ದರೆ ಭವ್ಯ ಪರಂಪರೆಯ ಇತಿಹಾಸ ಇರುವ ಲಿಂಗಾಯತ ಸಮಾಜ ನಿಮ್ಮನ್ನು ಎಂದು ಕ್ಷಮಿಸುವುದಿಲ್ಲ. ಬಸವಾಭಿಮಾನಿಗಳಾದ ಶ್ರೀ ಶಂಕರ ಬಿದರಿ ಅವರು ಈ ನಿರ್ಧಾರ ಹಿಂದೆ ಪಡೆಯುತ್ತಾರೆ ಎಂದು ನಾವು ನಂಬಿದ್ದೇವೆ.

ಶಂಕರಬಿದರಿಯವರಿಗೆ ವಯಸ್ಸಿನ ಹಿರಿಯರಾದರೂ ಲಿಂಗಾಯತ ಧರ್ಮದ ವಿಚಾರಗಳನ್ನ ಅರಿಯದಿರುವುದು ದುರಂತವೇ ಸರಿ. ಅಥವಾ ಅರಿವು ಮರೆವಿನ ಜಾಣ ಪೆದ್ದಾಟವೋ ತಿಳಿಯದು. ಒಬ್ಬ ಅನುಭವಿ ಅಧಿಕಾರಿಯಾಗಿದ್ದ ಇವರು ಲಿಂಗಾಯತ ತತ್ವಸಿದ್ದಾಂತಗಳನ್ನ ತಿಳಿದು ಸಹ ಮತ್ತು ಬಸವಣ್ಣನವರ ವಿಚಾರಗಳನ್ನ ಅರಿತಿದ್ದರು ಇಂತಹ ಅವಿವೇಕದ ನಿರ್ಧಾರ ಪ್ರಕಟಿಸಿರುವುದು ಖಂಡನೀಯ. ಕೂಡಲೇ ಈ ನಿರ್ಧಾರ ವಾಪಸ್ಸ್ ಫಡೆಯಬೇಕು ಇಲ್ಲದಿದ್ದಲ್ಲಿ ಬಸವಜಯಂತಿಯ ದಿನದಂತೆ ವಿರೋಧಿಸಬೇಕಾಗುತ್ತದೆ
ದಯವಿಟ್ಟು ಚರ್ಚೆಗೆ ಬನ್ನಿ ಶರಣರೇ
We are support to Shankar Bidari sir
ತಾವು ಶಂಕರ್ ಬಿದರಿ ಅವರಿಗಿಂತ ಚೆನ್ನಾಗಿ ಬಸವಣ್ಣ ಹಾಗೂ ಲಿಂಗಾಯತರನ್ ಅರಿತುಕೊಂಡಿರಿವಿರಿ ಅಂತ ನಿಮಗೆ ಅನಿಸುತ್ತಿದೆಯೇ ಶರಣರೇ
ಬಿದರಿ ಸಾಹೇಬರು ಯಾವ ಲಿಂಗಾಯತ ಸ್ವಾಮೀಜಿಗಿಂತ ಕಡಿಮೆ ಬದುಕು ಸವೆಸಿಲ್ಲ ಲಿಂಗಾಯತರಿಗಾಗಿ….ನಾವೇ ಮೂರ್ಖರು ಲಿಂಗಾಯತರು ಬಿದರಿಯವರಿಗೆ ರಾಜಕೀಯ ಅವಕಾಶ ಕೊಡಲಿಲ್ಲ ಸಮಾಜ ಸೇವೆಗಾಗಿ….ಅವರು ವಿಧಾನ್ ಸೌಧ ಪ್ರವೇಶಿಸಿದ್ದರೆ ಅದು ಮತ್ತೊಂದು ಅನುಭವ ಮಂಟಪವಾಗುತ್ತಿತು..
ಶಂಕರ ಬಿದರಿಯವರು ಐ.ಪಿ. ಎಸ್ ಅಧಿಕಾರಿ ಆಗಿದ್ದು
ಇತಿಹಾಸ ಪುರುಷ ಬಸವಣ್ಣನವರನ್ನು ಅರಿತವರು
ಬಸವ ತತ್ವ ಕುರಿತು ಪುಂಖಾನುಪುಂಖ ಮಾತನಾಡಿದವರು
ಇಂಥವರು ಪುರಾಣ ಕಲ್ಪಿತ ರೇಣುಕಾಚಾರ್ಯ ಬಸವ
ತತ್ವಕ್ಕೆ, ಲಿಂಗಾಯತ ಧರ್ಮಕ್ಕೆ ಸಂಬಂಧಪಡದ ಕಪೋಲಕಲ್ಪಿತ ವ್ಯಕ್ತಿಯನ್ನು ಬಸವ ಜಯಂತಿ ಅಂದು
ಸಮೀಕರಿಸುವ ನಿಮ್ಮ ನಡೆ ನಿಮ್ಮನ್ನು ಪ್ರಶ್ನಿಸುವಂತೆ
ಮಾಡಿದೆ . ಬಸವ ವಾಣಿಯಂತೆ ” ನುಡಿಯಲ್ಲಿ ಎಚ್ಚೆತ್ತು
ನಡೆಯಲ್ಲಿ ತಪ್ಪಿದಡೆ ” ಕಟ್ಟಿದ ಇಷ್ಟಲಿಂಗ ಸರ್ಪವಾಗಿ
ಕಾಡಿತ್ತು ಜೋಕೆ?.
ಬರಿ ಹೇಳಿಕೆ ಕೊಡೋದು ಬಿಟ್ಟು ಲಿಂಗಾಯತ ವಿರೋಧಿ ವೀರಶೈವ ಮಹಾಸಭೆಯ ಕುತಂತ್ರದ ವಿರುದ್ಧ ಹೈಕೋರ್ಟ್ ನಲ್ಲಿ ಕೇಸ್ ಹಾಕಬೇಕು, ಕಾನೂನಿನ ಮೂಲಕ ಇವರಿಗೆ ಪಾಠ ಕಲಿಸಬೇಕು
ಶಂಕರ್ ಬಿದರಿಯವರು ಜಾಗತಿಕ ಲಿಂಗಾಯತ ಮಹಾಸಭೆಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬರಲು ಒಪ್ಪಿದ್ದ ವಿಚಾರ ಸಮಸ್ತ ಲಿಂಗಾಯತರಿಗೆ ಸಂತಸತಂದು ಡಾ. ಜಾಮದಾರ್, ಕೊಂಗ್ವಾಡ್ ರೋಂದಿಗೆ ಇನ್ನೊಬ್ಬ ಪ್ರಭಲ ನಾಯಕನ ಸೇರ್ಪಡೆಯೋಂದಿಗೆ, ಸಮುದಾಯ ಇನ್ನುಮುಂದೆ ಒಗ್ಗಟ್ಟಾಗಿ ಬಸವಾದಿಶರಣರ ಆಶಯದೊಂದಿಗೆ ಪ್ರಭಲವಾಗುವ ನಂಬಿಕೆ ಮೂಡಿತು. ಆದರೆ ಬಿದರಿಯವರ ಈ ನಡೆ ಎಲ್ಲರಿಗೂ ನಿರಾಶೆ ಉಂಟುಮಾಡಿದೆ.
ಬಿದರಿ ಸಾಹೇಬರು ಯಾವ ಲಿಂಗಾಯತ ಸ್ವಾಮೀಜಿಗಿಂತ ಕಡಿಮೆ ಬದುಕು ಸವೆಸಿಲ್ಲ ಲಿಂಗಾಯತರಿಗಾಗಿ….ನಾವೇ ಮೂರ್ಖರು ಲಿಂಗಾಯತರು ಬಿದರಿಯವರಿಗೆ ರಾಜಕೀಯ ಅವಕಾಶ ಕೊಡಲಿಲ್ಲ ಸಮಾಜ ಸೇವೆಗಾಗಿ….ಅವರು ವಿಧಾನ್ ಸೌಧ ಪ್ರವೇಶಿಸಿದ್ದರೆ ಅದು ಮತ್ತೊಂದು ಅನುಭವ ಮಂಟಪವಾಗುತ್ತಿತು…
ಎಲ್ಲಾದರೂ ವನ್ನು ಒಗ್ಗಟ್ಟಿಸುವ ಕಾರ್ಯವನ್ನು ಇದು ಒಂದು ಸಂಕೇತವಾಗಿದೆ. ಧರ್ಮ ಒಡಿಯೋರು ಸಾವಿರಾರು ಪೂಜ್ಯರು ಇರುತ್ತಾರೆ.. ಧರ್ಮವನ್ನು ಸೇರಿಸುವುದು ಒಬ್ಬರಿರುತ್ತಾರೆ. ಅವರೇ ಶಂಕರ್ ಬಿದ್ರೆ ಅವರು.
100 ಜನ ಲಿಂಗಾಯತ ನಾಯಕ ಯಡಯೂರಪ್ಪ ನವರಿಗೆ ಸಮ ಬಿದರಿ ಸಾಹೇಬರು …..ಯಡಿಯೂರಪ್ಪನವರಿಗೆ ಕೊಟ್ಟ ಒಂದು ಅವಕಾಶ ಬಿದರಿ ಸಾಹೇಬರಿಗೆ ಸಮಾಜ ಕೊಡಲಿ …ಬದಲಾವಣೆ ಪ್ರತ್ಯಕ್ಷವಾಗಿ ಕಾಣುವಿರಿ…..ಜೈ ಬಸವಣ್ಣ
ಇತಿಹಾಸದ ಅರಿವು ಇಲ್ಲದ ವಾಸ್ಥವದ ಜ್ಞಾನವಿಲ್ಲದೆ ಇಂಥಹ ಹೇಳಿಕೆಗಳನ್ನು ನೀಡಿ ತವೂ ಮತ್ತು ಸಮಾಜವನ್ನು ಗೊಂದಲಕೆ ಎಡೆಮಾಡಿಕೊಡುವುದು ಒಂದು ಅವಿವೇಕಿತನವಾಗುತ್ತದೆ