ಶರಣರ ಶಕ್ತಿ ಬಿಡುಗಡೆ ಮುಂದೂಡಿಕೆ; ಚಿತ್ರದಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ

ಎಂ. ಎ. ಅರುಣ್
ಎಂ. ಎ. ಅರುಣ್

ಚಿತ್ರದ ಕ್ಲೈಮಾಕ್ಸ್ನಲ್ಲಿ ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ದೇವಿ ಪ್ರಕಟವಾಗಿ ಕೈಲಾಸಕ್ಕೆ ಬಾ ಎಂದು ಕರೆಯುವ ದೃಶ್ಯದಲ್ಲಿ ಬದಲಾವಣೆ

ಬೆಂಗಳೂರು

ಬಸವ ಅನುಯಾಯಿಗಳ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದ ಶರಣರ ಶಕ್ತಿ ಚಲನ ಚಿತ್ರದ ಬಿಡುಗಡೆಯನ್ನು ಅಕ್ಟೋಬರ್ 18ರಿಂದ ಮುಂದೂಡಲಾಗಿದೆ.

ಚಿತ್ರ ನಿರ್ದೇಶಕ ದಿಲೀಪ್ ಶರ್ಮ ‘ತಾಂತ್ರಿಕ ಕಾರಣಗಳಿಂದ’ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ವಿಡಿಯೋ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಚಿತ್ರ ತಂಡದ ಮಂಜುನಾಥ ಗೌಡಪಾಟೀಲ್ ಅಕ್ಟೋಬರ್ 7ರಂದು ಬೆಂಗಳೂರಿನಲ್ಲಿ ಲಿಂಗಾಯತ ಮುಖಂಡರಿಗೆ ಚಿತ್ರ ತೋರಿಸಿದ ಬಳಿಕ 15 ಮುಖ್ಯ ಬದಲಾವಣೆ ಮಾಡಬೇಕೆಂಬ ಸಲಹೆ ಬಂದಿದೆ. ಈ ಎಲ್ಲಾ ಬದಲಾವಣೆ ಮಾಡಲು ನಿರ್ದೇಶಕರು ಒಪ್ಪಿಕೊಂಡಿದ್ದಾರೆ, ಎಂದು ಹೇಳಿದರು.

ಚಿತ್ರದಲ್ಲಿ ಮಂಜುನಾಥ ಗೌಡಪಾಟೀಲ್ ಅವರು ಬಸವಣ್ಣನವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊನ್ನೆ ಹುಬ್ಬಳ್ಳಿ ಬಸವ ಕೇಂದ್ರದಲ್ಲಿ ಪ್ರೊ ಜಿ.ಬಿ. ಹಳ್ಯಾಳ, ಕರವೀರ ಶೆಟ್ಟರ, ಗೊಂಗಡಶೆಟ್ಟಿ ಎಂ.ವಿ. ಮುಂತಾದ ಮುಖಂಡರ ಜೊತೆ ಮತ್ತೆ ಚರ್ಚೆ ನಡೆಯಿತು. ಚಿತ್ರದಲ್ಲಿ ಬದಲಾಯಿಸಬೇಕಾದ ಅಂಶಗಳನ್ನು ಮತ್ತೆ ಗುರುತಿಸಲಾಯಿತು. ಅದಾದ ಮೇಲೆ ಚಿತ್ರದ ಬಿಡುಗಡೆ ಮುಂದೂಡಲಾಗಿದೆ ಎಂದು ದಿಲೀಪ್ ಶರ್ಮ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ, ಎಂದು ಹೇಳಿದರು.

ಶರಣರ ಶಕ್ತಿ ಚಿತ್ರದಲ್ಲಿ ಮಹತ್ತರ ಬದಲಾವಣೆ ಮಾಡಲಾಗುತ್ತಿದೆ ಎಂದು ಮಂಜುನಾಥ ಗೌಡಪಾಟೀಲ್ ತಿಳಿಸಿದರು.

ಚಿತ್ರದ ಕ್ಲೈಮಾಕ್ಸ್ನಲ್ಲಿ ಚನ್ನಬಸವಣ್ಣನವರ ಇಷ್ಟಲಿಂಗದಲ್ಲಿ ದೇವಿ ಪ್ರಕಟವಾಗಿ ಕೈಲಾಸಕ್ಕೆ ಬಾ ಎಂದು ಕರೆಯುವ ದೃಶ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದು ಶರಣ ತತ್ವಕ್ಕೆ ವಿರುದ್ದವಾಗಿ ಬಸವ ಧರ್ಮವನ್ನು ಪೌರಾಣಿಕರಿಸುವ ಪ್ರಯತ್ನ ಎಂದು ಹಲವಾರು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

“ಈಗ ಆ ದೃಶ್ಯದಲ್ಲಿ ದೇವಿ ಬದಲು ಬರಿ ಬೆಳಕು ಬರುವ ಹಾಗೆ ಮಾಡಲಾಗುವುದು. ಚನ್ನಬಸವಣ್ಣನವರು ಲಿಂಗೈಕ್ಯರಾಗುವ ದೃಶ್ಯದಲ್ಲಿ ಸಂದರ್ಭಕ್ಕೆ ಹೊಂದುವ ವಚನಗಳನ್ನು ಬಳಸಿಕೊಳ್ಳಲಾಗುವುದು,” ಎಂದು ಹೇಳಿದರು.

ಚಿತ್ರದ ಭಾಗಗಳನ್ನು ಮತ್ತೆ ಡಬ್ ಮಾಡಿ ಬಸವ ಸಂಘಟನೆಗಳು ಆಕ್ಷೇಪಣೆ ಮಾಡಿರುವ ದೃಶ್ಯಗಳನ್ನು ಸರಿ ಪಡಿಸಲಾಗಿವುದು. ಮತ್ತೆ ಹೊಸ ಚಿತ್ರೀಕರಣ ಮಾಡದೇ ಇವೆಲ್ಲಾ ಬದಲಾವಣೆ ಮಾಡಲಾಗುವುದು, ಎರಡು ಗಂಟೆ ಚಿತ್ರದ ಅವಧಿಯಲ್ಲೂ ಬಹಳ ಕಡಿತವಾಗುವುದಿಲ್ಲ ಎಂದು ಹೇಳಿದರು.

ಸಾಕಷ್ಟು ಬದಲಾವಣೆಯ ಕೆಲಸವಿರುವುದರಿಂದ ಅಕ್ಟೋಬರ್ 18ರಿಂದ ಬಿಡುಗಡೆ ಮುಂದೂಡುವುದು ಅನಿವಾರ್ಯ. ಹೊಸ ಬಿಡುಗಡೆಯ ದಿನವನ್ನು ಸದ್ಯದಲ್ಲೇ ಘೋಷಿಸಲಾಗುವುದು. ಚಿತ್ರ ಬಿಡುಗಡೆ ಮುನ್ನ ಮತ್ತೆ ಭಾಲ್ಕಿ ಶ್ರೀ, ಗದಗಿನ ಶ್ರೀ ಮತ್ತು ಇಳಕಲ್ ಶ್ರೀಗಳಿಗೆ ತೋರಿಸಿ ಅವರ ಒಪ್ಪಿಗೆಯಿಂದಲೇ ಬಿಡುಗಡೆ ಮಾಡಲಾಗುವುದು ಎಂದರು.

ನಿರ್ದೇಶಕ ದಿಲೀಪ್ ಶರ್ಮ ಬಸವ ಮೀಡಿಯಾದ ಕರೆ ಸ್ವೀಕರಿಸಿಸಲಿಲ್ಲ.

Share This Article
3 Comments
  • ಒಳ್ಳೆಯ ನಿರ್ಧಾರ. ಬಸವ ಭಕ್ತರ ಮನ ಒಪ್ಪವಂಗೆ ಇದ್ಧಲ್ಲಿ ಎಲ್ಲಾ ಶರಣ ಬಂಧುಗಳು ತಪ್ಪದೆ ವೀಕ್ಷಣೆ ಮಾಢೋಣ

  • ಒಳ್ಳೆಯ ಬೆಳವಣಿಗೆ ಯಾರೆ ಇರಲಿ ಯಾವುದೇ ಇಂತಹ ಇತಿಹಾಸ ಹಿನ್ನೆಲೆಯಲ್ಲಿರವ ವ್ಯೆಕ್ತಿಗಳ ಚಲನಚಿತ್ರ ನಿಮಿ೯ಸುವಾಗ ಪೂರ್ವಾಪರ ವಿಚಾರ ಮಾಡಿ ಚಿತ್ರ ನಿಮಿ೯ಸಿದರೆ ಇಂತಹ ಅದ್ವಾನಗಳು ಸಂಭವಿಸುವುದಿಲ್ಲ.

  • These all one type of trick to get publicity of that movie as experienced man telling this is marketing gimic of the movie team , Any how we get good response,good change as per our Basavanna vachana neeti idia ‘s Basavaadi sharana’s,

Leave a Reply

Your email address will not be published. Required fields are marked *