“ಶಿಖಂಡಿ,” “ನಾಯಿ,” “ಹಂದಿಗಳ” ಜೊತೆ ಚರ್ಚೆ ಒಲ್ಲೆ: ಕನ್ನೇರಿ ಸ್ವಾಮಿ 6

ಬಸವ ಮೀಡಿಯಾ
ಬಸವ ಮೀಡಿಯಾ

ಬನಹಟ್ಟಿ

ಲಿಂಗಾಯತರು ಹಿಂದೂಗಳು ಎಂದು ವಾದಿಸುತ್ತಾ ವಿಭೂತಿ ಬದಲು ಕುಂಕುಮ ಹಾಕುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಕನ್ನೇರಿ ಸ್ವಾಮಿಯನ್ನು ಬಹಿರಂಗ ಚರ್ಚೆಗೆ ಬರಲು ಅನೇಕ ಲಿಂಗಾಯತ ಪೂಜ್ಯರು, ಚಿಂತಕರು ಕರೆದಿದ್ದಾರೆ.

ಅಂತವರನ್ನು “ಶಿಖಂಡಿ”, “ನಾಯಿಗಳು” ಎಂದು ಕರೆದು ಅವರೊಡನೆ ಚರ್ಚೆ ಮಾಡಲು ಕನ್ನೇರಿ ಸ್ವಾಮಿ ಹಿಂಜರಿದಿದ್ದಾರೆ.

ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡುತ್ತ ಲಿಂಗಾಯತ ಧರ್ಮಕ್ಕೆ ಹೋರಾಡುತ್ತಿರುವವರು ತಾವು ಮೊದಲು ಹಿಂದೂಗಳೆಂದು ಒಪ್ಪಿಕೊಂಡರೆ ಹಿಂದೂ ಸಮಾವೇಶಗಳನ್ನು ನಿಲ್ಲಿಸುವುದಾಗಿ ಹೇಳಿದರು.

ಆದರೆ ಇದಕ್ಕೆ ಪ್ರತಿಯಾಗಿ ತಮ್ಮ ಜೊತೆ ಚರ್ಚೆ ಮಾಡಲು ಕೆಲವು “ನಾಯಿಗಳನ್ನು ಛೂ ಬಿಟ್ಟಿದ್ದಾರೆ” ಎಂದು ಕನ್ನೇರಿ ಸ್ವಾಮಿ ಆಪಾದಿಸಿದರು.

ನಮ್ಮ ಕೂಡ ಯುದ್ಧ ಮಾಡಬೇಕಾದರೆ ಸಮಾನ ಯೋಗ್ಯತೆಯವರು ಬೇಕು. ಇದೇ ಕಾರಣಕ್ಕೆ ಭೀಷ್ಮ “ಶಿಖಂಡಿ” ವಿರುದ್ಧ ಯುದ್ಧ ಮಾಡಲಿಲ್ಲ, ಎಂದು ಹೇಳಿದರು.

“ಹಳೆ ನಾಯ್ಗಳು ರಗಡ್ ಬರ್ತಾವೆ. ನಾಯ್ಗಳು ಬೊಗಳಿದ್ರೆ ಗುಡ್ಡಕೇನು ಫರಕ ಆಗೂದೈತಿ, ನಾಯಿಗಳೇ ದಣಿತಾವು,” ಎಂದು ಹೇಳಿದರು.

“ನಾನು ಅವಕ್ಕ ಉತ್ತರ ಕೊಡೋದಿಲ್ಲ ಝಾಡಿಸಿ ಒಂದು ಒಗದೀರ್ತೀನಿ, ಮುಂದೆ ಒಂದು ತಿಂಗಳು ಅವು ವದರಾಡ್ತವ. ನಾನು ಮತ್ತೆ ಝಾಡಿಸಿ ಒಂದು ಒಗದೀರ್ತೀನಿ, ಹಂದಿಗಳು ಜೋರು ಒದರಾಕ ಹತ್ಯಾವು ಅಂತಂದ್ರ ಅವಕ್ಕ ಹೊಡೆತ ಬೇಶ್ ಬಿದ್ದಾವು ಅಂತ ತಿಳ್ಕೊಬೇಕು,” ಎಂದು ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *