ಶರಣ ಸಂಸ್ಕೃತಿ ಉತ್ಸವದಲ್ಲಿ ಸಹಜ ಶಿವಯೋಗ, ಯೋಗ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಚಿತ್ರದುರ್ಗ

ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸಹಜ ಶಿವಯೋಗ ಕಾರ್ಯಕ್ರಮ, ಯೋಗ ಶಿಬಿರ ಯಶಸ್ವೀಯಾಗಿ ನಡೆಯುತ್ತಿವೆ.

ಗುರುವಾರ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಎರಡನೆಯ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿದರು.

ಶ್ರದ್ಧೆ ಭಕ್ತಿಯಿಂದ ಶಿವಯೋಗ ಮಾಡಬೇಕು. ಶಿವಯೋಗ ಮಾಡಿದರೆ ಅತಿಯಾದ ಬಯಕೆ ನಿಯಂತ್ರಣಕ್ಕೆ ಬರುತ್ತದೆ. ನಮ್ಮಲ್ಲಿ ಸಂತೃಪ್ತ ಭಾವನೆ ಬೆಳೆಯುತ್ತದೆ.

ಜಪ ಮಾಡಿದರೆ ಮನದ ದುರಾಸೆಯ ದಾಹ ಅಳಿಯುತ್ತದೆ. ದುರಾಸೆ ಹೋಗಿ ಸದಾಶಯ ಬರಬೇಕು.

ಶಿವಯೋಗ ಮಾಡುವುದರಿಂದ ಸಾಧನೆ ಮಾಡಬಹುದು. ಆಸ್ತಿಗಾಗಿ, ಹಣಕ್ಕಾಗಿ ಜಗಳ, ಕೊಲೆ, ಕೋರ್ಟ್ ಕಚೇರಿಗೆ ಅಲೆಯುತ್ತಾರೆ. ಆಸೆ ಬಿಟ್ಟರೆ ಸಂತೃಪ್ತಿ ಬದುಕು ನಡೆಸಬಹುದು. ಸಮಾಜದ ಜಾತಿ ನಿರ್ಮೂಲನೆ ಮಾಡುವ ಶಕ್ತಿ ಇಷ್ಟಲಿಂಗದಲ್ಲಿದೆ ಎಂದು ತಿಳಿಸಿದರು.

ಯೋಗ ಶಿಬಿರ

ಮುರುಘಾ ಮಠದಲ್ಲಿ ನಡೆಯುತ್ತಿರುವ ೩ನೇ ದಿನದ ಯೋಗ ಶಿಬಿರದಲ್ಲಿ ವೈದ್ಯ ಶ್ರೀ ಚೆನ್ನಬಸವಣ್ಣನವರು ಮಾತನಾಡಿ, ಯೋಗವೆಂದರೆ ವ್ಯಾಯಾಮವಲ್ಲ. ದೇಹ ಹಾಗು ಮನಸ್ಸಿನ ಶುದ್ಧೀಕರಣ. ಮಂಡಿನೋವು, ಪಾದನೋವು, ನರಮಂಡಲಗಳ ಮೀನು ಖಂಡಗಳಿಗೆ ರಕ್ತ ಸಂಚರಿಸುವ ಯೋಗವನ್ನು ಅಭ್ಯಾಸ ಮಾಡಿಸಿದರು.

ನಗುಮುಖದಿಂದ ಯೋಗವನ್ನು ಆಭ್ಯಾಸ ಮಾಡಬೇಕು. ನಗು ನಗುತ್ತಾ ಯೋಗ ಮಾಡುವುದರಿಂದ ನಮ್ಮ ದೇಹದಲ್ಲಿ ಅದ್ಭುತವಾದ ಶಕ್ತಿ ಸಂಚಾರವಾಗುತ್ತದೆ. ಕೀಲುಗಳು ಕ್ರಿಯಾಶೀಲವಾಗಿ ಶರೀರದಲ್ಲಿ ಅದ್ಭುತವಾದ ಪ್ರಾಣಕಾಂತ ಚೈತನ್ಯ ಶಕ್ತಿ ಬರುತ್ತದೆ.

ಶರೀರದಲ್ಲಿ ಹಲವಾರು ಗ್ರಂಥಿಗಳು ಇರುತ್ತವೆ ಅವು ಕ್ರಿಯಾಶೀಲವಾಗಲು ಸೂಕ್ಷ್ಮ ಯೋಗದ ಅಭ್ಯಾಸ ತುಂಬಾ ಸಹಕಾರಿ.

ಪ್ರತಿನಿತ್ಯ ಶಿವಯೋಗವನ್ನು ಅಭ್ಯಾಸ ಮಾಡಿ. ಇಷ್ಟಲಿಂಗ ಜಾತಿಯ ಸಂಕೇತವಲ್ಲ, ಇದು ನೀತಿಯ ಸಂಕೇತ. ಆಧ್ಯಾತ್ಮಿಕ ಶಕ್ತಿಯ ಕೇಂದ್ರ ಬಿಂದು ಎಂದರು ಬಸವಣ್ಣನವರು ಎಲ್ಲರಿಗೂ ಇಷ್ಟಲಿಂಗವನ್ನು ಹಂಚಿದ್ದಾರೆ.

ಆಧ್ಯಾತ್ಮಿಕ ಆನಂದವನ್ನು ಅನುಭವಿಸಲು ಶಿವಯೋಗ ಸಹಕಾರಿಯಾಗುತ್ತದೆ. ಚಿತ್ರದುರ್ಗದಲ್ಲಿ ಸಾಕಷ್ಟು ಯೋಗ ಸಂಸ್ಥೆಗಳಿವೆ. ಎಲ್ಲಾ ಯೋಗ ಸಂಸ್ಥೆಗಳನ್ನು ಒಗ್ಗೂಡಿಸುವ ಕೆಲಸವನ್ನು ಡಾ. ಬಸವಕುಮಾರ ಸ್ವಾಮೀಜಿಗಳು ಮಾಡಿದ್ದಾರೆ. ಯೋಗ ಒಕ್ಕೂಟದ ನಾವೆಲ್ಲರೂ ಒಗ್ಗಟ್ಟಿನಿಂದ ಯೋಗಾಭ್ಯಾಸ ಮಾಡಬೇಕು.

ಶರಣು ಎಂದರೆ ಸರ್ವಾಂಗ ಲಿಂಗವಾಗುವುದು ನಮ್ಮ ಆತ್ಮಶರಣ ಸತಿಲಿಂಗ ಪತಿಯಾಗಿ ಅದ್ಭುತ ಆನಂದವನ್ನು ಅನುಭವಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಶಿವಯೋಗ. ಸಗಣಿಯ ಹುಳವಾಗಿ ಬದುಕುವುದಕ್ಕಿಂತ ಮಹಾ ಶರಣನಾಗಿ ಬದುಕಬೇಕು ಎಂದು ನುಡಿದರು.

ಈ ಸಂದರ್ಭದಲ್ಲಿ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಹರಗುರು ಚರಮೂರ್ತಿಗಳು, ಜಿಲ್ಲಾ ಯೋಗ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *