ಚಿತ್ರದುರ್ಗ :
ಶರಣ ಸಂಸ್ಕೃತಿ ಉತ್ಸವ ೨೦೨೬ರ ಅಂಗವಾಗಿ ಚಿತ್ರದುರ್ಗ ನಗರದ ಶ್ರೀ ಮುರುಘಾಮಠದಲ್ಲಿ ದಿನಾಂಕ ೧೩.೧೦.೨೦೨೬ ಇಂದು ಬೆಳಿಗ್ಗೆ ೧೧.೩೦ ಗಂಟೆಗೆ ಶ್ರೀ ಮಠದ ಆವರಣದಲ್ಲಿ ೧೨ನೇ ಶತಮಾನದ ಬಸವಾದಿ ಶರಣರ ವಚನಕಂಠ ಪಾಠ ಸ್ಪರ್ಧೆ ಹಾಗೂ ವೇಷಭೂಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಂಜೆ ೫.೩೦ ಗಂಟೆಗೆ ಎಸ್‌ಜೆಎಂಐಟಿ ಕ್ರೀಡಾಂಗಣದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಜಮುರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಎಸ್.ಜೆ.ಎಂ ವಿದ್ಯಾಪೀಠದ ಅದೀನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಖೋಖೋ, ವಾಲಿಬಾಲ್, ಕ್ರಿಕೆಟ್, ಕಬ್ಬಡಿ, ಥ್ರೋಬಾಲ್ ಸ್ಪರ್ಧೆಗಳನ್ನು ಈ ಕ್ರೀಡಾಕೂಟದಲ್ಲಿ ಏರ್ಪಡಿಸಿದೆ.
ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾಮಿಗಳು ಉದ್ಘಾಟನಾ ಕಾರ್ಯಕ್ರಮದ ಸಮ್ಮುಖವನ್ನು ವಹಿಸಲಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
