ಆರ್ಯರು, ವೈದಿಕತೆ ಮತ್ತು ಲಿಂಗಾಯತ ಧರ್ಮ
(ಕಲಬುರ್ಗಿ ಕಲಿಸಿದ್ದು ಅಂಕಣಗಳ ಸಂಗ್ರಹ)
1) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
2) ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ
3) ವೈದಿಕರು ನಮ್ಮ ಇತಿಹಾಸ ಅಳಿಸಿದರು
4) ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
5) ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ
6) ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು
ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ
ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವಷ್ಟು ಸಮತಾ ಭಾವನೆ ಬೆಳೆಯಿತು.
ವೈದಿಕ ಧರ್ಮದ ಅಸಂಖ್ಯಾತ ದೇವರುಗಳ ಬದಲು ಶರಣರು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಪೂಜೆಯ ಆಚರಣೆ ತಂದು ಕಲ್ಲಿನ ದೇಗುಲಗಳನ್ನುತಿರಸ್ಕರಿಸಿದರು.
ಸೋಹಂ ತತ್ವದ ಮೂಲಕ ಮೋಕ್ಷ ಸಂಪಾದನೆ ವೈದಿಕ ಧರ್ಮದ ಮುಖ್ಯ ದ್ಯೇಯ. ಇದಕ್ಕೆ ಪ್ರತಿಯಾಗಿ ಶರಣರು ಕಾಯಕ, ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಿದರು.
ಶರಣರು ಸಂಸ್ಕೃತದ ಬದಲು ಕನ್ನಡ, ಹಳಗನ್ನಡದ ಬದಲು ಜನಭಾಷೆ ನಡುಗನ್ನಡ ಬಳಸಿದರು. ಆರ್ಯರ ಪುರಾಣಗಳ ಬದಲು ಚನ್ನಯ್ಯ, ಅಕ್ಕರಂತಹ ಸ್ಥಳೀಯ ಮಹಾತ್ಮರ ಚರಿತ್ರೆ ಬರೆದರು .
900 ವರ್ಷದ ಇತಿಹಾಸದಲ್ಲಿ ಒಬ್ಬ ಶರಣ ಕವಿಯೂ ರಾಮಾಯಣ, ಮಹಾಭಾರತಗಳನ್ನು ಬರೆಯಲಿಲ್ಲ. ಬದಲಿಗೆ ಅವು ವಿದ್ಯೆಯಲ್ಲ, ಸೋದರ ವಧೆಯ ಕಥೆಯೆಂದು ಟೀಕಿಸಿ ದೂರವುಳಿದರು.
(‘ಲಿಂಗಾಯತ: ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ’
ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)