ಚಾಮರಾಜನಗರದಿಂದ ಬೀದರವರೆಗೆ ದುಡಿದ ನಿಜಾಚರಣೆ ಯೋಗಿ

ಡಾ ಸಂಗಮೇಶ ಕಲಹಾಳ
ಡಾ ಸಂಗಮೇಶ ಕಲಹಾಳ

ಕೊಪ್ಪಳ

ಬಸವಾದಿ ಶರಣರ ತತ್ವಗಳನ್ನು ನುಡಿಯಲ್ಲಿ ನಡೆಯಲ್ಲಿ ಶರಣ ವೀರಭದ್ರಪ್ಪ ಕುರಕುಂದಿ ನಿರಂತರವಾಗಿ ಸ್ವತಃ ಕುಟುಂಬ ಸಮೇತ ನಿಷ್ಠೆಯಿಂದ ಪಾಲಿಸುತ್ತ ಬಂದವರು.

“ಅರಿವು ಆಚಾರ ಅನುಭಾವ”, ” ಶಿವಾನುಭವ”, “ಶರಣ ಸಂಗಮ” ಇತ್ಯಾದಿ ಕಾರ್ಯಕ್ರಮಗಳ ಮೂಲಕ ನೂರಾರು ಗ್ರಾಮಗಳಲ್ಲಿ ಶರಣತತ್ವ ಪ್ರಸಾರ ಮಾಡಿದರು.

ಲಿಂಗಾಯತದಲ್ಲಿ ಜನನದಿಂದ ಮರಣದವರೆಗಿನ ಸಂಸ್ಕಾರಗಳನ್ನು ಮಾಡುವ ವಿಧಾನಗಳು, ಆಚರಣೆಗಳು ತನ್ನದೇ ವೈಶಿಷ್ಟ್ಯವನ್ನು ಹೊಂದಿವೆ. ಈ ವಿಶಿಷ್ಟ ಆಚರಣೆಗಳೇ “ನಿಜಾಚರಣೆಗಳು”. ಶರಣತತ್ವದಲ್ಲಿ ಸರಳ, ಸುಲಭ, ವೈಚಾರಿಕ, ವೈಜ್ಞಾನಿಕ ಆಧಾರದ ಮೇಲೆ ಇರುವ ಈ ನಿಜಾಚರಣೆಗಳನ್ನು ಚಾಮರಾಜನಗರ ಜಿಲ್ಲೆಯಿಂದ ಹಿಡಿದು ಬೀದರವರೆಗೆ ಸ್ವತಃ ನಿಂತು ನಡೆಸಿಕೊಡುತ್ತಿದ್ದರು. ನಿಜಾಚರಣೆಗೆ ಹೊಸ ಅಯಾಮಗಳನ್ನು ನೀಡಿದ್ದಾರೆ.

ವಿಶೇಷವಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ನೂರಾರು ಗ್ರಾಮಗಳಲ್ಲಿ ಸಾವಿರಾರು ಬಸವತತ್ವ ಕುಟುಂಬಗಳನ್ನು ಕಟ್ಟಿಕೊಟ್ಟಿದ್ದಾರೆ. ಇದೇ ಕಾರಣಕ್ಕಾಗಿ ಅವರು ” ನಿಜಾಚರಣೆ ಯೋಗಿ” ಆಗಿದ್ದಾರೆ.

ಸಾವಿರಾರು ಕುಟುಂಬಗಳಿಗೆ ಮಾರ್ಗದರ್ಶಕರಾಗಿ, ಗುರುವಾಗಿ, ನಿಜಜಂಗಮರಾಗಿ, ಕ್ರಿಯಾಮೂರ್ತಿಯಾಗಿ, ಅಣ್ಣನವರಾಗಿ, ತಂದೆಸ್ವರೂಪರಾಗಿ ನುಡಿ, ನಡೆ, ಸಂಗ, ಸಹವಾಸಗಳೆಲ್ಲವೂ ಬಸವತತ್ವಮಯವಾಗಿದ್ದು “ಬಸವಸ್ವರೂಪಿ” ಗಳೇ ಆಗಿದ್ದಾರೆ.

ಪ್ರಾಯೋಗಿಕ ಮತ್ತು ಪ್ರಾತ್ಯಕ್ಷಿಕವಾಗಿ ನಿಜಾಚರಣೆಗಳನ್ನು ಆಚರಣೆ ಮಾಡುವ ಮತ್ತು ಆಚರಿಸುವ ಕೈಂಕರ್ಯದಲ್ಲಿ ಅವರು ನಿರ್ವಹಿಸಿದ ಜವಾಬ್ದಾರಿ ಲಿಂಗಾಯತ ಧರ್ಮಕ್ಕೆ ಅರ್ಥ ಮತ್ತು ಘನತೆ ತಂದುಕೊಟ್ಟಿದ್ದಾರೆ.

ಶರಣತತ್ವ ಸಿದ್ಧಾಂತಗಳಿಗಾಗಿ ಅವರು ನಿರ್ವಹಿಸಿದ ಜವಾಬ್ದಾರಿಗಳನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲ್ಲ ಬಸವ ಅನುಯಾಯಿಗಳ ಆದ್ಯ ಕರ್ತವ್ಯವಾಗಿದೆ.

Share This Article
1 Comment
  • ಶರಣ ವೀರಭದ್ರಪ್ರ ಕುರಕುಂದ ಅಣ್ಣವರ ಲಿಂಗಪ್ರಾಣವು ಪ್ರಾಣಲಿಂಗಗೊಂಡು ಮಹಾಲಿಂಗದೊಳು ಐಕ್ಯಗೊಳ್ಳಲಿ ಎಂದು ಪ್ರಾರ್ಥಿಸಿದ್ದೆವೆ, ಶರಣಾರ್ಥಿ.

Leave a Reply

Your email address will not be published. Required fields are marked *