ವಿವಾದವೆಬ್ಬಿಸಿದ್ದ ವಿಶ್ವ ಹಿಂದೂ ಪರಿಷತ್ (ವಿ.ಎಚ್.ಪಿ) ಕಾರ್ಯಕ್ರಮಕ್ಕೆ ಡಾ.ಬಸವಲಿಂಗ ಪಟ್ಟದ್ದೇವರು ಗೈರಾದರು.
ಕಾರ್ಯಕ್ರಮಕ್ಕೆ ಶೀಗಳು ಹೋಗುವುದನ್ನು ಈ ಮುಂಚೆ ಪ್ರತಿಭಟಿಸಿದ್ದ ವಿಶ್ವ ಕ್ರಾಂತಿ ದಿವ್ಯ ಪೀಠದ ಓಂಪ್ರಕಾಶ್ ರೊಟ್ವೆ, “ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಶ್ರೀಗಳು ಹೋಗಲಿಲ್ಲ,” ಎಂದು ಖಚಿತ ಪಡಿಸಿದರು.
ವಿ.ಎಚ್.ಪಿಯ ಕೃಷ್ಣಾ ಜನ್ಮಾಷ್ಟಮಿ, ಸ್ಥಾಪನಾ ದಿವಸ ಮತ್ತು ಷಷ್ಠಿಪೂರ್ತಿ ಸಮಾರಂಭ ಪಟ್ಟಣದ ಪುರ ಭವನದಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯಿತು. ಈ ಕಾರ್ಯಕ್ರಮದ ಪೋಸ್ಟರ್ ಗಳಲ್ಲಿ ಮತ್ತು ರಸ್ತೆ ಬದಿಯ ಬೋರ್ಡ್ ಗಳಲ್ಲಿ ಭಾಲ್ಕಿ ಶ್ರೀಗಳ ಫೋಟೋ ಬಳಕೆಯಾಗಿದ್ದು ನೋಡಿ ಹಲವಾರು ಮಠದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು.
“ಅಜ್ಜಾವರಿಗೆ ಇಂದು ಪ್ರವಚನ ಕಾರ್ಯಕ್ರಮವಿದೆ, ಅದಕ್ಕೆ ಬೇರೆ ಎಲ್ಲೂ ಹೋಗುವ ಪ್ರಶ್ನೆಯೇ ಇಲ್ಲ, ಕಾರ್ಯಕ್ರಮದಲ್ಲಿ ಅನುಮತಿಯಿಲ್ಲದೆ ಪೋಸ್ಟರ್, ಫೋಟೋ ಬಳಸಿಕೊಂಡಿದ್ದಾರೆ,” ಎಂದು ನೆನ್ನೆ ಬಸವ ಮೀಡಿಯಾದೊಂದಿಗೆ ಮಾತನಾಡುತ್ತ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದ್ದರು.
