ನಂಜನಗೂಡು
ವಿಶ್ವಬಸವಸೇನೆ ಸಂಘಟನೆ ವತಿಯಿಂದ ಹಂಗಳಪುರ ಬೋರಮ್ಮನವರ ಮಗ ಸುರೇಶಣ್ಣನವರ ಮನೆಯಲ್ಲಿ ಮನೆ ಮನದ ಮಾಸಿಕ ಅನುಭಾವ ಸಂಗಮ ಕಾರ್ಯಕ್ರಮ ನಡೆಯಿತು.
ಬಸವ ಧ್ವಜಾರೋಹಣಗೈದು ಶರಣೆ ಹಂಗಳಪುರ ಬೋರಮ್ಮನವರು ಚಾಲನೆ ನೀಡಿದರು.
ಶ್ರೀ ಬಸವಯೋಗಿಪ್ರಭುಗಳು ಇಷ್ಟಲಿಂಗ ಪೂಜಾ ಮಹತ್ವ ತಿಳಿಸಿದ್ದಲ್ಲದೆ ಮತ್ತು ಇಷ್ಟಲಿಂಗ ಪೂಜೆ ಕಾರ್ಯಕ್ರಮ ನೆರವೇರಿಸಿದರು.
ಕಾ.ಸು.ನಂಜಪ್ಪನವರಿಂದ ಮಹಾಲಿಂಗ ಎಂಬುದರ ಬಗ್ಗೆ ವಿಸ್ತಾರವಾಗಿ ಅನುಭಾವ ವಿಚಾರ ನಡೆಯಿತು.
ದೇವನೂರು ಪ್ರಶಾಂತಣ್ಣನವರಿಂದ ಬಸವಣ್ಣನವರ ಇಷ್ಟಲಿಂಗದ ಶಿವಯೋಗವು ಸಕಲ ಸಮಸ್ಯೆಗಳಿಗೆ ಪರಿಹಾರ ಮಾರ್ಗವಾಗಿರುವ ಬಗ್ಗೆ ವಚನಾಧಾರಿತವಾಗಿ ಭಕ್ತರ ಪ್ರಶ್ನೋತ್ತರ ಚಿಂತನದೊಂದಿಗೆ ತಿಳಿಸಿದರು.
ಮಹಿಳೆಯರು ವಚನಗಳಲ್ಲಿರುವ ವೈಜ್ಞಾನಿಕ, ಆಧ್ಯಾತ್ಮಿಕದ ಹಲವು ವಿಷಯಗಳ ಬಗ್ಗೆ ಸಂವಾದ ಮಾಡಿದರು.
ಬಸವಸೇನೆಯ ಉಪಾಧ್ಯಕ್ಷರಾದ ಸುರೇಶ್ ರವರು ನಿರೂಪಣೆ ಮಾಡಿದರು, ಜ್ಯೋತಿ ಸುರೇಶರವರು ಸ್ವಾಗತ ಮಾಡಿದರು.
ಬಸವಸೇನೆಯ ಅದ್ಯಕ್ಷರಾದ ಬಸವಯೋಗೇಶ ಮಾತನಾಡಿ ಮನಸ್ಸಿನ ಶ್ರೀಮಂತಿಕೆಗೆ ಬಸವಾದಿ ಪ್ರಮಥರ ವಿಚಾರಗಳು ಪ್ರಸ್ತುತ ಜಗತ್ತಿಗೆ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮವನ್ನ ಪ್ರತಿ ತಿಂಗಳು ನಡೆಸುವುದಾಗಿ ಬಸವಯೋಗೇಶ ತಿಳಿಸಿದರು.
ಬಸವಸೇನೆಯ ಎಲ್ಲಾ ಪದಾಧಿಕಾರಿಗಳು ಹಾಗು ಬಸವ ಭಕ್ತರು,ಮಹಿಳೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Om basavalingaya namaha