ವೀರಭದ್ರಪ್ಪ ಕುರಕುಂದಿ ಬಯಲು

ಬಸವ ಮೀಡಿಯಾ
ಬಸವ ಮೀಡಿಯಾ
23Posts
Auto Updates

Contents
ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿಲಿಂಗೈಕ್ಯ ಶರಣ ವೀರಭದ್ರಪ್ಪ ಅವರಿಗೆ ಸ್ವಗ್ರಾಮ ಕುರಕುಂದಿಯಲ್ಲಿ ನುಡಿನಮನ ಸಲ್ಲಿಸಲಾಯಿತು.ಲಿಂಗೈಕ್ಯ ಶರಣರ ದರ್ಶನ ಪಡೆದ ಗದಗಿನ ಡಾ. ತೋಂಟದ ಸಿದ್ಧರಾಮ ಶ್ರೀಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರಸಿಂಧನೂರಿನಲ್ಲಿ ಅಂತಿಮ ಯಾತ್ರೆ: ಮೆರವಣಿಗೆಯ ದೃಶ್ಯಗಳುಕೊನೆಯ ಬಾರಿಗೆ ಸಿಂಧನೂರಿಗೆ ಬಂದ ವೀರಭದ್ರಪ್ಪ ಶರಣರುಇಂದು ರಾತ್ರಿ ಸಿಂಧನೂರಿಗೆ ಪ್ರಯಾಣನಾಳೆ ಸಿಂಧನೂರಿನಲ್ಲಿ ಅಂತಿಮ ಯಾತ್ರೆಯ ವಿವರವೀರಭದ್ರಪ್ಪ ಕುರುಕುಂದಿ ಅಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ‘ಶರಣರ ಶಕ್ತಿ ಸಿನೆಮಾ ನೋಡಲು ಬಂದವರು ಹುಷಾರು ತಪ್ಪಿದರು’ಶರಣರಿಗೆ ಶ್ರದ್ಧಾಂಜಲಿಅನಾಥ ಪ್ರಜ್ಞೆ: ಎಸ್ ಎಂ ಜಾಮದಾರ್, ಬೆಂಗಳೂರುನಮ್ಮೆದೆಯಲ್ಲಿ ಬದುಕಿಸಿಕೊಳ್ಳೋಣ: ಅಶೋಕ ಬರಗುಂಡಿಇದು ಅಂದುಕೊಂಡಿರಲಿಲ್ಲ: ಶಶಿಧರ ತೋಡ್ಕರ್, ಧಾರವಾಡನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ: ಸಂಗಮೇಶ ಕಲಹಾಳ, ಕೊಪ್ಪಳಮಹಾಲಿಂಗದೊಳು ಐಕ್ಯಗೊಳ್ಳಲಿ: ಪೂಜ್ಯ ಜಗನ್ನಾಥಪ್ಪ ಪನಸಾಳೆ, ಕರಾವಳಿದಾರಿ ತೋರಿದರು: ಪೂಜ್ಯ ಕೊರ್ಣೇಶ್ವರ ಸ್ವಾಮೀಜಿ, ಆಳಂದಮರಣವೇ ಮಹಾನವಮಿ: ಶ್ರೀಶೈಲ ಜಿ. ಮಸೂತೆಜಂಗಮ ತತ್ವದ ಅಣ್ಣಾ: ವಿಶ್ವಗುರು ಬಸವೇಶ್ವರ ಟ್ರಸ್ಟ್, ಕೊಪ್ಪಳಸ್ಮರಣೆ: ಚಾಮರಾಜನಗರದಿಂದ ಬೀದರವರೆಗೆ ದುಡಿದ ನಿಜಾಚರಣೆ ಯೋಗಿಸ್ಮರಣೆ: ಬಸವಮಯ ಬದುಕು ನಡೆಸಿದ ಗಟ್ಟಿ ಗಣಾಚಾರಿ ಅಪ್ಪ ವೀರಭದ್ರಪ್ಪ ಕುರಕುಂದಿಸ್ಮರಣೆ: ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರುಸ್ಮರಣೆ: ‘ಮೌಢ್ಯ ವೀರಶೈವರ ನಾಡು’ ಕಳಂಕ ಅಳಿಸಿದ ವೀರಭದ್ರಪ್ಪ ಕುರಕುಂದಿ

ಬೆಂಗಳೂರು

ಬಸವಧರ್ಮದ ಕಟ್ಟಾಳು ಸಿಂಧನೂರಿನ ಶರಣ ಜಂಗಮ ವೀರಭದ್ರಪ್ಪ ಕುರಕುಂದಿ ಇಲ್ಲಿನ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ಸಂಜೆ 04.25ಕ್ಕೆ ಬಯಲಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಹಲವಾರು ದಿನಗಳಿಂದ ಸಾವು–ಬದುಕಿನ ನಡುವೆ ಹೋರಾಟ ನಡೆಸಿದ್ದ ಶರಣರು ಕೊನೆಗೂ ಮರಳಿ ಬಾರದ ಲೋಕಕ್ಕೆ ಪಯಣಿಸಿದರು. ಪತ್ನಿ, ಎರಡು ಹೆಣ್ಣು ಎರಡು ಗಂಡು ಮಕ್ಕಳನ್ನು, ನಾಡಿನ ಅಪಾರ ಶರಣ ಸಮೂಹವನ್ನು ಅವರು ಅಗಲಿದ್ದಾರೆ.

6 months agoNovember 4, 2024 4:09 pm

ನಾಡಿನ ಪ್ರಮುಖ ಗುರುಗಳಿಂದ ಲಿಂಗೈಕ್ಯ ಶರಣರಿಗೆ ಭಾವಪೂರ್ಣ ಶ್ರದ್ಧಾಂಜಲಿ

6 months agoNovember 4, 2024 2:16 pm

ಲಿಂಗೈಕ್ಯ ಶರಣ ವೀರಭದ್ರಪ್ಪ ಅವರಿಗೆ ಸ್ವಗ್ರಾಮ ಕುರಕುಂದಿಯಲ್ಲಿ ನುಡಿನಮನ ಸಲ್ಲಿಸಲಾಯಿತು.

6 months agoNovember 4, 2024 2:43 pm

ಲಿಂಗೈಕ್ಯ ಶರಣರ ದರ್ಶನ ಪಡೆದ ಗದಗಿನ ಡಾ. ತೋಂಟದ ಸಿದ್ಧರಾಮ ಶ್ರೀ

6 months agoNovember 4, 2024 10:18 am

ಶರಣರ ಅಂತಿಮ ದರ್ಶನಕ್ಕೆ ಸಿಂಧನೂರಿನಲ್ಲಿ ಜನಸಾಗರ

6 months agoNovember 4, 2024 8:22 am

ಸಿಂಧನೂರಿನಲ್ಲಿ ಅಂತಿಮ ಯಾತ್ರೆ: ಮೆರವಣಿಗೆಯ ದೃಶ್ಯಗಳು

6 months agoNovember 4, 2024 7:35 am

ಕೊನೆಯ ಬಾರಿಗೆ ಸಿಂಧನೂರಿಗೆ ಬಂದ ವೀರಭದ್ರಪ್ಪ ಶರಣರು

ನೆನ್ನೆ ರಾತ್ರಿ ಬೆಂಗಳೂರಿನಿಂದ ಹೊರಟ ಆಂಬುಲೆನ್ಸ್ ಸಿಂಧನೂರಿಗೆ ಬಂದು ತಲಪಿದೆ. ಈಗ ಮೆರವಣಿಗೆಯ ಮೂಲಕ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯಕ್ಕೆ ಅಂತಿಮ ದರ್ಶನಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ.

6 months agoNovember 3, 2024 6:24 pm

ಇಂದು ರಾತ್ರಿ ಸಿಂಧನೂರಿಗೆ ಪ್ರಯಾಣ

ಶರಣರ ಪ್ರಾರ್ಥೀವ ಶರೀರವನ್ನು ಇಂದು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಸಿಂಧನೂರಿಗೆ ತೆಗೆದುಕೊಂಡು ಹೋಗಲಾಗುವುದು. ನಾಳೆ ಮಧ್ಯಾಹ್ನ ಸಿಂಧನೂರಿನಲ್ಲಿ 3 ಗಂಟೆಗೆ ಅಂತ್ಯಕ್ರಿಯೆ .

6 months agoNovember 3, 2024 7:37 pm

ನಾಳೆ ಸಿಂಧನೂರಿನಲ್ಲಿ ಅಂತಿಮ ಯಾತ್ರೆಯ ವಿವರ

ಸೋಮವಾರ ಬೆಳಿಗ್ಗೆ 05-00ಗಂಟೆಗೆ ಶರಣರ ಪಾರ್ಥಿವ ಶರೀರವು ಗಂಗಾವತಿಯ ರಸ್ತೆಯಲ್ಲಿ ಬರುವ ಐ.ಬಿ. ಮುಂದೆ ಆಗಮಿಸಲಿದೆ.

ಅಲ್ಲಿ ಮೌನ ಸಂತಾಪ ಸೂಚಿಸಿ, ಪುಷ್ಪ ನಮನ ಸಲ್ಲಿಸಿ, ಅಲ್ಲಿಂದ ಗಾಂಧಿ ವೃತ್ತ, ಬಸವ ವೃತ್ತಕ್ಕೆ ಆಗಮಿಸಿ, ಬಸವಣ್ಣನವರ ರೂಪ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುವುದು. ಅಲ್ಲಿಂದ ಮುಂದೆ ಸಾಗಿ ಎನ್.ಜಿ.ಓ ಕಾಲೋನಿಯಲ್ಲಿರುವ ನೀಲಾಂಬಿಕಾ ಪ್ರಸಾದ ನಿಲಯದಲ್ಲಿ ಬೆಳಿಗ್ಗೆ 05-30ಗಂಟೆಯಿಂದ 08-00ಗಂಟೆಯವರೆಗೆ ಸಿಂಧನೂರಿನ ಶರಣ ಬಂಧುಗಳಿಗೆ ಅಂತಿಮ ಧರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,

ನಂತರ ಸಿಂಧನೂರಿನ ತಾಲೂಕಿನ ಕುರುಕುಂದಾ ಗ್ರಾಮಕ್ಕೆ ತೆರಳಿ ಅಲ್ಲಿ 09-00ಗಂಟೆ ಯಿಂದ 03-00 ಗಂಟೆಯವರೆಗೆ ಶರಣ ಬಂಧುಗಳಿಗೆ ಅಂತಿಮ ದರ್ಶನ ಮತ್ತು ಬಸವ ಬಂಧು ಬಳಗದವರಿಂದ ಮತ್ತು ಕುಟುಂಬದವರಿಂದ ನುಡಿ ನಮನ.

03-00ಗಂಟೆಗೆ ಅಂತ್ಯಕ್ರಿಯೆಯು ನೆರವೇರುವುದು.

6 months agoNovember 3, 2024 6:42 pm

ವೀರಭದ್ರಪ್ಪ ಕುರುಕುಂದಿ ಅಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ

6 months agoNovember 3, 2024 7:18 pm

‘ಶರಣರ ಶಕ್ತಿ ಸಿನೆಮಾ ನೋಡಲು ಬಂದವರು ಹುಷಾರು ತಪ್ಪಿದರು’

ಬಹಳ ವರ್ಷಗಳಿಂದ ವೀರಭದ್ರಪ್ಪ ಕುರಕುಂದಿ ಅವರ ಜೊತೆ ನಿತ್ಯದ ಒಡನಾಟದಲ್ಲಿದ್ದ ಹನುಮಂತಪ್ಪ ಬೇರಗಿ ಅವರ ಮಾತಿನಲ್ಲಿ:

ಅಪ್ಪ ಬೆಂಗಳೂರಿನಲ್ಲಿ ಶರಣರ ಶಕ್ತಿ ಚಿತ್ರ ನೋಡಲು ಸಿಂಧನೂರಿನಿಂದ ಬೆಂಗಳೂರಿಗೆ ಬಂದವರು ಹುಷಾರು ತಪ್ಪಿದರು. ಒಂದೆರಡು ಬಾರಿ ಜ್ವರ ಬಂದಿತ್ತು ಉಸಿರಾಟದ ತೊಂದರೆ ಕೂಡ ಆಗಿತ್ತು.

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಎರಡು ವಾರ ಅಡ್ಮಿಟ್ ಆಗಿದ್ದರು. ನಂತರ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕಳೆದ ಬುಧವಾರ ಅವರ ಪರಿಸ್ಥಿತಿ ಬಿಗಡಾಯಿಸಿದಾಗ ICUಗೆ ಸೇರಿಸಿ ಅಲ್ಲಿ ವೆಂಟಿಲೇಟರ್ ನೆರವಿನಿಂದ ಆಮ್ಲಜನಕ ಪೂರೈಸಲಾಗುತ್ತಿತ್ತು. ಆದರೆ ಯಾವುದೂ ಫಲಕಾರಿಯಾಗಲಿಲ್ಲ.

6 months agoNovember 3, 2024 6:22 pm

ಶರಣರಿಗೆ ಶ್ರದ್ಧಾಂಜಲಿ

6 months agoNovember 3, 2024 6:54 pm

ಅನಾಥ ಪ್ರಜ್ಞೆ: ಎಸ್ ಎಂ ಜಾಮದಾರ್, ಬೆಂಗಳೂರು

ಇಂದು ಸಿಂಧನೂರು ಶ್ರೀ ವೀರಭದ್ರಪ್ಪ ಕುರಕುಂದಿ ಅವರು ಲಿಂಗೈಕ್ಯರಾಗಿರುವುದು ನಮ್ಮೆಲ್ಲರಿಗೂ ಅತೀವ ದುಃಖದ ಸಂಗತಿ. ಲಿಂಗಾಯತ ಧರ್ಮ, ಅದರ ನಿಜಾಚರಣೆಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ಆಚರಣೆಗೆ ತರುವಲ್ಲಿ ಅವರದು ಬಹು ದೊಡ್ಡ ಪಾತ್ರ. ಅವರನ್ನು ಕಳೆದುಕೊಂಡು ನಾವೆಲ್ಲ ಈಗ ಅನಾಥ ಪ್ರಜ್ಞೆ ಅನುಭವಿಸುತ್ತಿದ್ದೇವೆ. ಅವರ ಕುಟುಂಬಕ್ಕೆ ಈ ಆಘಾತವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.

6 months agoNovember 3, 2024 6:39 pm

ನಮ್ಮೆದೆಯಲ್ಲಿ ಬದುಕಿಸಿಕೊಳ್ಳೋಣ: ಅಶೋಕ ಬರಗುಂಡಿ

ಈ ಧರ್ಮ ಪ್ರಸಾರದ ಸಾರಥ್ಯವನ್ನು ವಹಿಸಿಕೊಳ್ಳುವ ಹಾಗೂ ಈ ಧರ್ಮವನ್ನು ಬದುಕುವ ಸಂಕಲ್ಪವನ್ನು ನಾವೆಲ್ಲ ಹೊಂದಬೇಕೆಂಬುದೇ ಅವರ ಅಂತಿಮ ಸಂದೇಶವಾಗಿದೆ. ಅವರನ್ನು ನಮ್ಮೆದೆಯಲ್ಲಿ ಬದುಕಿಸಿಕೊಳ್ಳೋಣ. ಶರಣು ಶರಣಾರ್ಥಿಗಳು.

6 months agoNovember 3, 2024 6:40 pm

ಇದು ಅಂದುಕೊಂಡಿರಲಿಲ್ಲ: ಶಶಿಧರ ತೋಡ್ಕರ್, ಧಾರವಾಡ

ಛೇ,ಬೆಂಗಳೂರಿನಲ್ಲಿ ಶರಣ ಶಕ್ತಿ ಸಿನೆಮಾ ಪ್ರದರ್ಶನದಲ್ಲಿ ಪರಸ್ಪರ ಭೇಟಿಯಾಗಿ ಅಕ್ಕಪಕ್ಕದಲ್ಲಿಯೇ ಕುಳಿತು ಸಿನೇಮಾ ನೋಡಿದ್ದೆವು. ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲಿಗೆ ಬಂದಿದ್ದರು. ಬಯಲು ಅವರನ್ನು ಇಷ್ಟು ಬೇಗ ಅಪ್ಪಿಕೊಳ್ಳುತ್ತದೆಂದು ಅಂದುಕೊಂಡಿರಲಿಲ್ಲ. ಶರಣು ಶರಣಾರ್ಥಿಗಳು.

6 months agoNovember 3, 2024 6:47 pm

ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ: ಸಂಗಮೇಶ ಕಲಹಾಳ, ಕೊಪ್ಪಳ

ಬಸವಸ್ವರೂಪಿ, ಕರ್ನಾಟಕದ ಶರಣತತ್ವ ಬೋಧಕ, ನಿಜಾಚರಣೆ ಶಿವಯೋಗಿ, ನಮ್ಮ ನಿಮ್ಮೆಲ್ಲರ ಅಣ್ಣ ಮಹಾಶರಣ ವೀರಭದ್ರಪ್ಪ ಅಣ್ಣನವರು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಲಿಂಗೈಕ್ಯರಾದರೆಂದು ತಿಳಿಸಲು ತೀವ್ರ ದುಃಖವೆನಿಸುತ್ತದೆ. ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಿದೆ. ಅವರ ಮಾರ್ಗವನ್ನು ಮುನ್ನಡೆಸೋಣ. ಶರಣು ಶರಣಾರ್ಥಿಗಳು

6 months agoNovember 3, 2024 7:25 pm

ಮಹಾಲಿಂಗದೊಳು ಐಕ್ಯಗೊಳ್ಳಲಿ: ಪೂಜ್ಯ ಜಗನ್ನಾಥಪ್ಪ ಪನಸಾಳೆ, ಕರಾವಳಿ

ಶರಣ ವೀರಭದ್ರಪ್ರ ಕುರಕುಂದ ಅಣ್ಣವರ ಲಿಂಗಪ್ರಾಣವು ಪ್ರಾಣಲಿಂಗಗೊಂಡು ಮಹಾಲಿಂಗದೊಳು ಐಕ್ಯಗೊಳ್ಳಲಿ ಎಂದು ಪ್ರಾರ್ಥಿಸಿದ್ದೆವೆ, ಶರಣಾರ್ಥಿ.

ಪೂಜ್ಯ ಜಗನ್ನಾಥಪ್ಪ ಪನಸಾಳೆ
ಅಲ್ಲಮಪ್ರಭು ಪೀಠ, ಕರಾವಳಿ

6 months agoNovember 3, 2024 7:25 pm

ದಾರಿ ತೋರಿದರು: ಪೂಜ್ಯ ಕೊರ್ಣೇಶ್ವರ ಸ್ವಾಮೀಜಿ, ಆಳಂದ

ವೀರಗಣಾಚಾರಿ, ಬಸವನಿಷ್ಠ, ಶರಣ ಜಂಗಮ, ವೀರಭದ್ರಪ್ಪ ಕುರುಕುಂದರವರು ಲಿಂಗೈಕ್ಯರಾದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ಆಘಾತವಾಯಿತು, ಶರಣ ಚಳುವಳಿಯ ಅನುಭಾವಿ ಹಿರಿಯ ಜೀವಿಯನ್ನು ಕಳೆದುಕೊಂಡಂತಾಯಿತು. ಸಂಚಾರಿ ಶಿವಾನುಭವದ ಮುಖಾಂತರ ಬಸವ ತತ್ವವನ್ನು ಹಳ್ಳಿಹಳ್ಳಿಗೆ ಮುಟ್ಟಿಸುವ ಕಾರ್ಯ ಮಾಡಿ ಅದರ ಮುಖಾಂತರ ಸಿಂಧನೂರಿನಲ್ಲಿ ಹಾಸ್ಟೆಲ್ ಸ್ಥಾಪನೆ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ದಾಸೋಹ ಸೇವೆಗೈದು ಜೊತೆಗೆ ಶರಣ ಧರ್ಮದ ಸಂಸ್ಕಾರವನ್ನು ಕೊಟ್ಟು ಉತ್ತಮ ಮನುಷ್ಯರಾಗಿ ಬದುಕಲು ದಾರಿ ತೋರಿದಂತ ಮಹಾನ ವ್ಯಕ್ತಿಯಾಗಿದ್ದರು,
ಆ ಮಹಾನ ಶರಣ ಶಕ್ತಿಗೆ ಭಾವಪೂರ್ವಕ ಕೋಟಿ ಕೋಟಿ ನಮನಗಳು.

ಪೂಜ್ಯ ಕೊರ್ಣೇಶ್ವರ ಸ್ವಾಮೀಜಿ, ಆಳಂದ, ತೋಂಟದಾರ್ಯ ಅನುಭವ ಮಂಟಪ

6 months agoNovember 4, 2024 5:56 am

ಮರಣವೇ ಮಹಾನವಮಿ: ಶ್ರೀಶೈಲ ಜಿ. ಮಸೂತೆ

ಶರಣ ಶ್ರೀ ವೀರಭದ್ರಪ್ಪ ಕುರುಕುಂದ ಅವರ ಅಗಲುವಿಕೆ ಶರಣ ಬಂಧುಗಳಿಗೆ ತುಂಬಲಾರದ ನಷ್ಟವಾಗಿದೆ. ನಡೆ-ನುಡಿ ಸಿದ್ದಾಂತದ ಶರಣ ಜೀವನ ಸವೆದ ಶರಣರ ಮಾರ್ಗದರ್ಶನ ಇನ್ನಿಲ್ಲವಾಗಿದೆ. ಶರಣರಿಗೆ ಮರಣವೇ ಮಹಾನವಮಿ. ಬಯಲೊಳಗೆ ಬಯಲಾದ ಶರಣ ಚೇತನಕ್ಕೆ ಶರಣು ಶರಣಾರ್ಥಿ. ಶರಣ ವೀರಭದ್ರಪ್ಪನವರ ಅಗಲುವಿಕೆ ದು:ಖ ಭರಿಸುವ ಶಕ್ತಿ ಬಸವಾದಿ ಶರಣರು ಅವರ ಕುಟುಂಬ‌ವರ್ಗದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶ್ರೀಶೈಲ ಜಿ. ಮಸೂತೆ
ಲಿಂಗಾಯತ ಧರ್ಮ ಅಧ್ಯಯನ ಕೇಂದ್ರ, ಬೆಂಗಳೂರು

6 months agoNovember 4, 2024 5:56 am

ಜಂಗಮ ತತ್ವದ ಅಣ್ಣಾ: ವಿಶ್ವಗುರು ಬಸವೇಶ್ವರ ಟ್ರಸ್ಟ್, ಕೊಪ್ಪಳ

ಜಂಗಮ ತತ್ವದ ಅಣ್ಣಾ,
ಅಪ್ಪ ವೀರಭದ್ರಪ್ಪ ಅಣ್ಣಾ.

ಎರಡು ದಿನಗಳಿಂದ ಅವರ ಆರೋಗ್ಯದ ಸ್ಥಿತಿ ಚಿಂತಾ ಜನಕ. ಆ ಸುದ್ದಿ ಕೇಳಿದಾಗಲಿಂದ ಏನೋ ಒಂದು ಕಳವಳ, ಹೀಗೆ ಏಕೆ ಆಗುತ್ತಿದೆ ಎಂಬ ಹೃದಯ ಹಿಂಡುವ ಭಾವ.

ಗುರು ಬಸವಣ್ಣನವರ ಜಂಗಮ ತತ್ವದ ಮೂರ್ತಿ ರೂಪವೇ ಆಕಾರವೇ ಅಪ್ಪ ವೀರಭದ್ರಪ್ಪನವರು ಆಗಿದ್ದರು,

ಕರ್ನಾಟಕದ ಪ್ರತಿ ಮೂಲೆ ಮೂಲೆಯಲ್ಲಿ ಸಂಚರಿಸಿದ್ದರು.

ನಮ್ಮ ಕೊಪ್ಪಳ ಜಿಲ್ಲೆಯ ಬಸವ ಬಂಧುಗಳ ಮೇಲೆ ಅಪಾರವಾದ ಪ್ರೀತಿ, ಅದರಲ್ಲೂ ಯಲಬುರ್ಗಾ ತಾಲೂಕಿನ ಬಹಳಷ್ಟು ಹಳ್ಳಿಗಳಲ್ಲಿ ಸಂಚರಿಸಿದ್ದಾರೆ, ಬಸವ ತತ್ವವನ್ನ ಹರಡಿದ್ದಾರೆ, ಬಸವತತ್ವ ಸಂಘಟನೆಯ ಪ್ರೇರಣಾ ಶಕ್ತಿಯಾಗಿ ನಿಂತಿದ್ದಾರೆ.

ಅವರ ದೈಹಿಕವಾದ ಅಗಲಿಕೆ ನಮ್ಮ ಇಡೀ ಬಸವ ತತ್ವದ ಲಿಂಗಾಯತ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ.

ಅವರ ಇಡೀ ಬದುಕೆ ನಮಗೆ ಆದರ್ಶ.

ಅಪ್ಪಾಜಿ ನಿಮಗೆ ಭಾವಪೂರ್ಣ ಶರಣು ಶರಣಾರ್ಥಿಗಳು

ವಿಶ್ವಗುರು ಬಸವೇಶ್ವರ ಟ್ರಸ್ಟ್, ಕೊಪ್ಪಳ

6 months agoNovember 3, 2024 8:36 pm

ಸ್ಮರಣೆ: ಚಾಮರಾಜನಗರದಿಂದ ಬೀದರವರೆಗೆ ದುಡಿದ ನಿಜಾಚರಣೆ ಯೋಗಿ

6 months agoNovember 3, 2024 8:57 pm

ಸ್ಮರಣೆ: ಬಸವಮಯ ಬದುಕು ನಡೆಸಿದ ಗಟ್ಟಿ ಗಣಾಚಾರಿ ಅಪ್ಪ ವೀರಭದ್ರಪ್ಪ ಕುರಕುಂದಿ

6 months agoNovember 4, 2024 5:50 am

ಸ್ಮರಣೆ: ದೇವಿ ಪಾರಾಯಣ ಮಾಡಿದವರು ಬಸವಣ್ಣನವರನ್ನು ಅಪ್ಪಿಕೊಂಡರು

6 months agoNovember 4, 2024 5:52 am

ಸ್ಮರಣೆ: ‘ಮೌಢ್ಯ ವೀರಶೈವರ ನಾಡು’ ಕಳಂಕ ಅಳಿಸಿದ ವೀರಭದ್ರಪ್ಪ ಕುರಕುಂದಿ

Share This Article
3 Comments
  • ಬಯಲಲ್ಲಿ ಬಯಲಾದ ಬಸವ ಸ್ವರೂಪಿ ನಮ್ಮೆಲ್ಲರ ಅಣ್ಣ ಶರಣ ವೀರಭದ್ರಪ್ಪ ಕುರುಕುಂದಿ,
    “ನಾಳೆ ಬಪ್ಪುದು ನಮಗಿಂದೇ ಬರಲಿ
    ಇಂದು ಬಪ್ಪುದು ನಮಗೀಗಲೇ ಬರಲಿ ಇದಕ್ಕಾರ ಅಂಜುವರು ಇದಕ್ಕಾರಳುಕುವರು ಜಾತಸ್ಯ ಮರಣಂ ಧ್ರುವಂ ”
    ಎಂಬ ಶರಣರ ನುಡಿಯಂತೆ ಬಾಳಿ ಬದುಕಿ ನಿಜ ಆಚರಣೆಯ ಶಿವಯೋಗಿ ಎನಿಸಿದ ಅಣ್ಣ ನಮ್ಮನ್ನು ಅಗಲಿದುದು ಅತೀವ ದುಃಖ ತಂದಿದೆ, ಸಮಾಜಕ್ಕೆ ಅವರ ಸೇವೆ ಇನ್ನು ಅವಶ್ಯವಿತ್ತು ಬಸವಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಅವರನ್ನು ಕಳೆದುಕೊಂಡ ನಮಗೆ ತುಂಬಲಾರದ ನಷ್ಟವಾಗಿದೆ, 30/10/24 ಸುಮಾರು ಮಧ್ಯಾಹ್ನ 2 ಗಂಟೆಯ ಸಮಯ ಮಣಿಪಾಲ್ ಆಸ್ಪತ್ರೆ ಬೆಂಗಳೂರು ನಲ್ಲಿ ಐಸಿಯು ನಲ್ಲಿ ಅವರನ್ನು ಕಂಡಾಗ ನನಗೆ ಅರಿವಿಲ್ಲದಂತೆ ಕಣ್ಣೀರು ದಳದಳನೇ ಹರಿದವು ದುಃಖ ತಡೆದುಕೊಳ್ಳಲು ಆಗಲಿಲ್ಲ ಹಾಗೆಯೇ ಸಾವರಿಸಿಕೊಂಡು ಬೇಗ ಚೇತರಿಸಿಕೊಳ್ಳುತ್ತೀರಿ ಬಸವಣ್ಣನ ಕರುಣೆ ತಮಗಿದೆ ಎಂದು ಕೊನೆಯ ಸಾರಿ ಆ ಅಣ್ಣಬಸವಣ್ಣನ ದರುಶನ ಮಾಡಿ ಹೊರಗೆ ಬಂದೆ,
    ಬರ ಸಿಡಿಲಿನಂತೆ ಅವರು ಲಿಂಗೈಕ್ಯರಾ ಗಿರುವ ಸುದ್ದಿ ಕೇಳಿ ಮನಸ್ಸು ಚಡಪಡಿಸುತ್ತಿದೆ ಅಣ್ಣ ಮತ್ತೊಮ್ಮೆ ಹುಟ್ಟಿ ಬಾ ನಮ್ಮೆಲ್ಲರಿಗೆ ದಾರಿದೀಪವಾಗಿ ಬಾ ನಿಮ್ಮನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ ಕಣ್ಣೀರು ದಳದಳನೆ ಹರಿಯುತ್ತಿವೆ ಏನು ಹೇಳಲಿ ಮಾತು ಮೌನವಾಗಿದೆ …. ❗❗❗❗
    ಶರಣು ಶರಣಾರ್ಥಿಗಳು 🙏🙏🙏🙏💐💐💐💐
    ಡಾ: ಶಿವಲಿಂಗಪ್ರಭು ಸುಂಕದ, ಕುಷ್ಟಗಿ

  • ಓಂ ಶ್ರೀ ಗುರು ಬಸವ ಲಿಂಗಾಯ ನಮಃ
    ಬಸವ ಕಂದ ಶರಣವೀರಭದ್ರಪ್ಪನವರು ಕುರುಕುಂದಿ ಲಿಂಗೈಕ್ಯರಾಗಿರುವುದು ನಮಗೆಲ್ಲಾ ತುಂಬಾ ನಷ್ಟವಾಗಿದೆ ಅವರು ಅನುಭಾವದ ಆನಂದವನ್ನು ವಚನ ಸಾಹಿತ್ಯದ ಅಂತರಂಗದ ಅರಿವನ್ನ ಸಮಾಜದಲ್ಲಿ ಮೂಡಿಸುತ್ತಾ ನಡೆನುಡಿಗಳನ್ನು ಒಂದಾಗಿಸಿಕೊಂಡು ನಡೆದ ಚೇತನ ಅವರಾಗಿದ್ದರು . ನಮಗೆಲ್ಲ ಸ್ಪೂರ್ತಿಯಾಗಿ ದೊಡ್ಡ ಶಕ್ತಿಯಾಗಿದ್ದರು .ಸೃಷ್ಟಿಕರ್ತ ಲಿಂಗದೇವ ಅವರಿಗೆ ಚಿರಮುಕತಿ ಸಂಪದ ವನ್ನು ಕರುಣಿಸಲೆಂದು ಧರ್ಮ ಪಿತ ಗುರು ಬಸವಣ್ಣನವರಲ್ಲಿ ತುಂಬು ಹೃದಯದಿಂದ ಬೇಡಿಕೊಳ್ಳುತ್ತೇನೆ .
    🙏🙏🙏 ಶರಣು ಶರಣಾರ್ಥಿ

  • ಓಂ ಶ್ರೀ ಗುರು ಬಸವ ಲಿಂಗಾಯ ನಮಃ
    ಬಸವ ಕಂದ ಶರಣವೀರಭದ್ರಪ್ಪನವರು ಕುರುಕುಂದಿ ಲಿಂಗೈಕ್ಯರಾಗಿರುವುದು ನಮಗೆಲ್ಲಾ ತುಂಬಾ ನಷ್ಟವಾಗಿದೆ ಅವರು ಅನುಭಾವದ ಆನಂದವನ್ನು ವಚನ ಸಾಹಿತ್ಯದ ಅಂತರಂಗದ ಅರಿವನ್ನ ಸಮಾಜದಲ್ಲಿ ಮೂಡಿಸುತ್ತಾ ನಡೆನುಡಿಗಳನ್ನು ಒಂದಾಗಿಸಿಕೊಂಡು ನಡೆದ ಚೇತನ ಅವರಾಗಿದ್ದರು . ನಮಗೆಲ್ಲ ಸ್ಪೂರ್ತಿಯಾಗಿ ದೊಡ್ಡ ಶಕ್ತಿಯಾಗಿದ್ದರು .ಸೃಷ್ಟಿಕರ್ತ ಲಿಂಗದೇವ ಅವರಿಗೆ ಚಿರಮುಕತಿ ಸಂಪದ ವನ್ನು ಕರುಣಿಸಲೆಂದು ಧರ್ಮ ಪಿತ ಗುರು ಬಸವಣ್ಣನವರಲ್ಲಿ ತುಂಬು ಹೃದಯದಿಂದ ಬೇಡಿಕೊಳ್ಳುತ್ತೇನೆ .
    🙏🙏🙏 ಶರಣು ಶರಣಾರ್ಥಿ.
    ಬಸವನ ಬೆಳಕೆ ಎಲ್ಲಿಗೆ ಹೋದೆ ?
    ಎಲ್ಲೂ ಹೋಗಿಲ್ಲ ನಮ್ಮ ಎದೆಯಲ್ಲೆ
    ನೀ ಉಳಿದು ಹೋದೆ .🙏

Leave a Reply

Your email address will not be published. Required fields are marked *