ಬೆಂಗಳೂರು
ವಿಜಯನಗರದ ಹರ್ಷ ಮತ್ತು ವಿಜಯಲಕ್ಷ್ಮಿ ಅವರ ನೂತನ ಮನೆಯ ಗುರುಪ್ರವೇಶ ಬಸವತತ್ವದ ನಿಜಚರಣೆಯ ಮೂಲಕ ಇತ್ತೀಚೆಗೆ ನೆರವೇರಿತು. ಯಾವುದೇ ವೈಧಿಕಾಚರಣೆಯ ಅಬ್ಬರವಿಲ್ಲದೆ ಸರಳವಾಗಿ ವಚನಗಳ ಆಧಾರವಾಗಿ ಕಾರ್ಯಕ್ರಮ ನಡೆದದ್ದು ವಿಶೇಷವಾಗಿತ್ತು.

ನದಿ ಇಂಗಳಗಾವಿನ ಪೂಜ್ಯ ಸಿದ್ದಲಿಂಗ ಸ್ವಾಮೀಜಿ, ಅನುಭಾವಿಗಳಾದ ಪಿ ರುದ್ರಪ್ಪ, ಭಾರತಿ ಕೆಂಪಯ್ಯ ಮತ್ತು ದಾವಣಗೆರೆಯ ಭುವನೇಶ್ವರಿ ತಾಯಿಯವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಹೆದರಿಸಿ, ಭಯ ಪಡಿಸಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ವೈಧಿಕ ಆಚರಣೆಗಳು ಹವಣಿಸುತ್ತವೆ. ಇದಕ್ಕೆ ಬಲಿಯಾಗದೆ ಸರಳವಾಗಿ ಬಸವಾದಿ ಶರಣರು ಹಾಕಿಕೊಟ್ಟ ವಚನಾದಾರಿತ ನಿಜಾಚರಣೆಯ ಮೂಲಕ ಎಲ್ಲಾ ಕಾರ್ಯಕ್ರಮಗಳು ನೆರವೇರಿಸಿ ಎಂದು ಪೂಜ್ಯ ಸಿದ್ದಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ವಚನ ಗ್ರಂಥಗಳನ್ನು ಹೊತ್ತು ಮನೆಯನ್ನು ಪ್ರವೇಶಿಸಲಾಯಿತು. ಬಸವಾದಿ ಶರಣರು ಕರುಣಿಸಿದ ಸರಳ ಆಚರಣೆಗಳನ್ನೂ ಪಾಲಿಸೋಣ, ಮ ಎಂದರೆ ‘ಮನ’ ನೆ ಎಂದರೆ ‘ನೆಮ್ಮದಿ’ ಎಂದು ಪಿ ರುದ್ರಪ್ಪ ಹೇಳಿದರು. ಆಚರಣೆಗಳು ಸರಳ, ಸುಲುಭವಾಗಿರಲೆಂದು ಭಾರತಿ ಕೆಂಪಯ್ಯ ಹೇಳಿದರು.

ವಚನ ಪ್ರಾರ್ಥನೆಯನ್ನು ವನಜಾಕ್ಷಿ ತಾಯಿಯವರು ನೆರವೇರಿಸಿದರು.
ಭಕ್ತ ಸಂಬಂಧದ ಆಚರಣೆ ತುಂಬಾ ಅರ್ಥಪೂರ್ಣ ವಾಗಿ ನಡೆಯಿತು.
ಅರ್ಥಪೂರ್ಣ ಸರಳ ಆಚರಣೆ, ಶರಣ ಸಹೋದರರಾದ ಹರ್ಷ ಹಾಗೂ ಸಹೋದರಿ ವಿಜಯಲಕ್ಷ್ಮಿ ಅವರಿಗೆ ಅಭಿನಂದನೆಗಳು, ಬೆಂಗಳೂರಿನಲ್ಲಿ ನಿಜಾಚರಣೆ ನಡೆಸುವ ಎಲ್ಲ ಕ್ರಿತಾ ಮೂರ್ತಿಗಳು ಹಾಗೂ ಪೂಜ್ಯ ಸ್ವಾಮೀಜಿಗಳ ಒಂದು ಡೆಟಾಬೇಸ್ ರೆಡಿ ಮಾಡಿ ವ್ಯಾಪಕ ಪ್ರಚಾರ ಕೊಡುವಂತಾಗಲಿ.
Please don’t kill kannada , it’s not guru pravesha ..it’s Gurha pravesha…
ಸರಳತೆಗೆ, ಬಸವಾದಿ ಶರಣರ ಆಶಯಕ್ಕೆ ಅನುಗುಣವಾಗಿ ತಮ್ಮ ಗುರು ಪ್ರವೇಶವನ್ನು ಮಾಡಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದೀರಿ ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಸಲೆಂದು ಅಪ್ಪ ವಿಶ್ವಗುರು ಬಸವಣ್ಣನವರಲ್ಲಿ ಮತ್ತು ಸೃಷ್ಟಿಕರ್ತ ಲಿಂಗ ದೇವರಲ್ಲಿ ಬೇಡಿಕೊಳ್ಳುತ್ತೇನೆ ಶರಣು ಶರಣಾರ್ಥಿ
ಅತ್ಯದ್ಭುತವಾದ ಕಾರ್ಯಕ್ರಮ. ಲಿಂಗಾಯತ ಧರ್ಮೀಯರನ್ನು ಹೆಚ್ಚೆಚ್ಚು ಜಾಗೃತಿಗೊಳಿಸಿ ಬಸವತತ್ವದ ಆಚರಣೆಗಳಿಗೆ ಒಟ್ಟು ಕೊಡುವ ಕೆಲಸ ಇನ್ನೂ ದೊಡ್ಡ ಮಟ್ಟದಲ್ಲಿ ಆಗಲಿ.
ಪ್ರೇರಣಾದಾಯಕ .. ಬಸವಾದಿ ಶರಣರ ತತ್ವ ಆಚರಣೆ ಲಿಂಗಾಯತ ಧರ್ಮದ ಜೀವನ ನಡೆ ನುಡಿ ಗಳಾಗಿ ನಾಡು ಕಲ್ಯಾಣ ರಾಜ್ಯ ವಾಗಲಿ
ಶರಣು ಶರಣಾರ್ಥಿ
Good 👍
ನಮ್ಮ ಸನಾತನ ಆಚರಣೆಯನ್ನು ಹೆದರಿಸಿ ಬೆದರಿಸಿ ಮಾಡಲು ಎಲ್ಲೂ ಹೇಳಿಲ್ಲ.
ಜೈ ಹಿಂದ್ ಜೈ ಕರ್ನಾಟಕ
I request all these swamys first of all unite so called lingayat swamys.