ಚಿಕ್ಕೋಳ ಈಶ್ವರಪ್ಪನವರಿಗೆ ಶರಣ ಸಿರಿ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ವಚನಗಳ ಜನರಿಗೆ ತಲುಪಿಸಿ ಜೀವನಮೌಲ್ಯ ಹೆಚ್ಚಿಸಿದ ಚಿಕ್ಕೋಳ ಈಶ್ವರಪ್ಪ

ದಾವಣಗೆರೆ:

ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಪ್ರಚಾರ ಮಾಡಿ, ಜನರ ಜೀವನ ಮೌಲ್ಯಗಳನ್ನು ಹೆಚ್ಚಿಸಿದ ಹಿರಿಯ ಶರಣಜೀವಿ, ಚಿಕ್ಕೋಳ ಈಶ್ವರಪ್ಪನವರಿಗೆ ಶರಣ ಸಿರಿ ಪ್ರಶಸ್ತಿ ಸಂದಿರುವುದು ಸಾರ್ಥಕವಾಗಿದೆ ಎಂದು ಮಾಜಿ ಕೇಂದ್ರ ಸಚಿವರಾದ ಜಿ.ಎಂ. ಸಿದ್ದೇಶ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಜಿಎಂ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಲಿಂಗೈಕ್ಯ ಹಾಲಮ್ಮ ಮತ್ತು ಲಿಂಗೈಕ್ಯ ಜಿ. ಮಲ್ಲಿಕಾರ್ಜುನಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ವ್ಯಾಪಾರಿ ಯುಗದಲ್ಲಿ ಜನರ ಜೀವನ ಮೌಲ್ಯಗಳು ಕಡಿಮೆಯಾಗುತ್ತಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ನಡೆಸುತ್ತಿರುವ ಇಂತಹ ಕಾರ್ಯಕ್ರಮಗಳು ತುಂಬಾ ಶ್ಲಾಘನೀಯ ಎಂದು ಹೇಳಿದರು.

ಅದೇ ರೀತಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ನಗರದ ಹಿಮೋಫೀಲಿಯೊ ಸೊಸೈಟಿ ಸಂಸ್ಥಾಪಕ ಡಾ. ಸುರೇಶ ಹನಗವಾಡಿ ಅವರಿಗೆ ಸಂದಿರುವುದು ಕೂಡ ಪ್ರಶಂಸನೀಯ ಎಂದು ಹೇಳಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಚಿಕ್ಕೋಳ್ ಈಶ್ವರಪ್ಪ ನವರಿಗೆ ಶರಣ ಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿಗೆ ಭಾಜನರಾದ ಶರಣ ಶ್ರೀ ಚಿಕ್ಕೋಳ ಈಶ್ವರಪ್ಪನವರು, ಶರಣ ಸಾಹಿತ್ಯ ಪರಿಷತ್ತು ಶರಣರ ಮೌಲ್ಯಗಳನ್ನು ನಿರಂತರವಾಗಿ ಉಳಿಸಿಕೊಳ್ಳುವಲ್ಲಿ ಉತ್ತಮವಾದ ಕಾರ್ಯ ಮಾಡುತ್ತಿದ್ದು, ನಾನು ಶರಣ ಸಾಹಿತ್ಯ ಪರಿಷತ್ತಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ. ಬಿ. ಪರಮೇಶ್ವರಪ್ಪನ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಾಲಮ್ಮ ಮತ್ತು ಜಿ. ಮಲ್ಲಿಕಾರ್ಜುನಪ್ಪ ದತ್ತಿಯನ್ನು ಶರಣ ಸಿರಿ ಪ್ರಶಸ್ತಿ ಯೊಂದಿಗೆ ಜೋಡಣೆ ಮಾಡಿ ಪ್ರತಿ ವರ್ಷವೂ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಗೀತಾ ಬಸವರಾಜ ‘ವಚನಗಳಲ್ಲಿ ಮಾನವೀಯ ಮೌಲ್ಯಗಳು’ ಎಂಬ ವಿಷಯ ಕುರಿತು ಅನುಭಾವ ನೀಡಿದರು. ಜಿ.ಎಂ. ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಎಸ್.ಆರ್. ಸಂಕಪಾಲ್ ಅಧ್ಯಕ್ಷತೆ ವಹಿಸಿದ್ದರು.

ದತ್ತಿ ದಾನಿಗಳಾದ ಗಾಯಿತ್ರಿ ಸಿದ್ದೇಶ್ವರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ, ಜಿ ಎಂ ಐ ಟಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ  ಡಾ. ಬಿ. ಆರ್. ಶ್ರೀಧರ್, ಆಡಳಿತಾಧಿಕಾರಿಯಾದ ಡಾ. ಬಿ. ಸುಭಾಷಚಂದ್ರ, ರಾಜ್ಯ ಉಪ ಸಂಚಾಲಕರಾದ ಶರಣೆ ಪ್ರಮೀಳಾ ನಟರಾಜ, ಕದಳಿ ವೇದಿಕೆ ಜಿಲ್ಲಾಧ್ಯಕ್ಷೆ ಶರಣೆ ಮಮತಾ ನಾಗರಾಜ, ಯುವ ಘಟಕದ ಅಧ್ಯಕ್ಷ ಡಾ. ಶಿವರಾಜ ಕಬ್ಬೂರು ಮುಂತಾದವರು ಭಾಗವಹಿಸಿದ್ದರು.

ಬಿ.ಟಿ. ಪ್ರಕಾಶ ಪ್ರಾರ್ಥನೆ ಸಲ್ಲಿಸಿದರು, ದೀಪ ಬಿ.ಎಸ್ ಸ್ವಾಗತಿಸಿದರು, ಗೌರವ ಸಲಹೆಗಾರರಾದ ಹೆಚ್ ಕೆ ಲಿಂಗರಾಜು ದತ್ತಿ ಪರಿಚಯ ಮಾಡಿದರು. ಜಿ.ಎಂ. ಕುಮಾರಪ್ಪ ಪ್ರಶಸ್ತಿಪತ್ರ ವಾಚಿಸಿದರು. ಆರ್. ಸಿದ್ದೇಶಪ್ಪ  ವಂದನಾರ್ಪಣೆ, ಭರಮಪ್ಪ ಮೈಸೂರ, ಎಂ. ನಾಗರಾಜ ಕಕ್ಕರಗೋಳ್ಳ ಕಾರ್ಯಕ್ರಮ ನಿರ್ವಹಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ  ಸಂಪನ್ನಗೊಂಡಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *