ವಿರತೀಶಾನಂದ ಸ್ವಾಮೀಜಿಯವರ 108 ದಿನಗಳ ಮೌನಾನುಷ್ಠಾನ ಮಂಗಲೋತ್ಸವ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವನಬಾಗೇವಾಡಿ:

ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮಿಗಳು, ಏಕಾಂತ ಸಾಧನೆ, ಅಧ್ಯಯನ, ಆರೋಗ್ಯವೃದ್ಧಿ, ಅನುಭಾವದ ಉದ್ಧೇಶಕ್ಕಾಗಿ ಹಮ್ಮಿಕೊಂಡಿದ್ದ 108 ದಿನಗಳ ಮೌನಾನುಷ್ಠಾನ ವೃತದ ಮಂಗಲೋತ್ಸವ ಈಚೆಗೆ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಅನುಭಾವ ನೀಡಿದ ಧಾರವಾಡದ ಮನಗುಂಡಿ ಬಸವಾನಂದ ಸ್ವಾಮೀಜಿ, ಪ್ರೀತಿಯ ಅನುಸಂಧಾನದಿಂದ ಲಿಂಗಯ್ಯನ ಸಮಸುಖ ಸಾಧ್ಯವಾಗುತ್ತದೆ. ಅಹಂಕಾರದ ಮಮಕಾರವಳಿದಾಗ ಮನಸ್ಸು ಶುದ್ದಗೊಳ್ಳುತ್ತದೆ. ವಿರತೀಶಾನಂದ ಸ್ವಾಮೀಜಿ ಒಂದೇ ಜಾಗದಲ್ಲಿ ಈ ಕಠಿಣ ಅನುಷ್ಠಾನವನ್ನು 108 ದಿನಗಳ ಕಾಲ ಯಶಸ್ವಿಯಾಗಿ ಮಾಡಿ ಮುಗಿಸಿ ಸಾಧಕರಾಗಿದ್ದಾರೆ ಎಂದರು.

ಮಸಬಿನಾಳ ವಿರಕ್ತಮಠದ ಸ್ವಾಮೀಜಿ, ಮರಗುದ್ದಿ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ಬೆಳ್ಳೇರಿ ಬಸವಾನಂದ ಸ್ವಾಮೀಜಿ, ಶಿರಗುಪ್ಪ ಬಸವಭೂಷಣ ಸ್ವಾಮೀಜಿ, ರೇಣುಕಾ ಅಕ್ಕ, ಇಕ್ಕನಗುತ್ತಿ ಪ್ರಭುಲಿಂಗ ಸ್ವಾಮೀಜಿ, ದಾನಮ್ಮ ತಾಯಿ, ಶಾಂತಮ್ಮ ತಾಯಿ ಮತ್ತಿತರ ಪೂಜ್ಯರು ಸಮ್ಮುಖ ವಹಿಸಿ ಕೆಲವರು ಮಾತನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ವಿಜಯಪುರ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ, ಮನಗೂಳಿ ಗ್ರಾಮದ ಹಿರಿಯರು ಬಸವನಿಷ್ಠರಾದ ಮಲ್ಲನಗೌಡ ಪಾಟೀಲ, ರೇವಣಸಿದ್ದ ಮಣ್ಣೂರ, ಬಸವರಾಜ ಕೊಂಡಗುಳಿ, ರಾಷ್ಟ್ರೀಯ ಬಸವ ದಳದ ಅಣ್ಣಗೌಡ್ರು ಪಾಟೀಲ ಮಾತನಾಡಿ, ಅನುಷ್ಠಾನ ಮಾಡಿದ ವಿರತೀಶಾನಂದ ಸ್ವಾಮೀಜಿಯ ಸಾಧನೆಯನ್ನು ಕೊಂಡಾಡಿ ಅವರಿಗೆ ಭಕ್ತಿಯ ಶರಣು ಸಮರ್ಪಿಸಿದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಉಪಸ್ಥಿತರಿದ್ದರು.

ಸ್ಥಳೀಯ ಹಾಗೂ ಪರ ಊರಿನ ನೂರಾರು ಬಸವಭಕ್ತರು ಆಗಮಿಸಿ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು. ಬಂದವರಿಗೆಲ್ಲ ಪ್ರಸಾದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment

Leave a Reply

Your email address will not be published. Required fields are marked *