‘ಬಿರಿಯಾನಿ ತಿಂದರೆ ಕೇಳುವ ಜನ, ಸಾವಿರಾರು ಕೋಟಿ ತಿನ್ನುವವರನ್ನೂ ಪ್ರಶ್ನಿಸಬೇಕು’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

“ಇಂದು ಅಧಿಕಾರದಲ್ಲಿರುವವರು ಸಾವಿರಾರು ಕೋಟಿ ಮಾಡಿಕೊಂಡಿದ್ದಾರೆ. ಅವರೆಲ್ಲಾ ಆರಾಮವಾಗಿದ್ದಾರೆ. ನಾನು ಬಿರಿಯಾನಿ ತಿಂದಿದ್ದನ್ನ ಕೇಳೋ ಜನ ಅವರೆಲ್ಲ ಎಷ್ಟೆಷ್ಟು ತಿಂದಿದ್ದಾರೆ ಎನ್ನುವುದನ್ನೂ ಪ್ರಶ್ನೆ ಮಾಡಬೇಕು.

ಆದರೆ ಇವತ್ತು ನಾವು ಬೇರೆ ಬೇರೆಯವರ ಪರ divide ಆಗಿ ನಿಂತು ಬಿಟ್ಟಿದ್ದೇವೆ. ಅವರನ್ನು ಪ್ರಶ್ನೆ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದೀವಿ. ನಮ್ಮನ್ನು ಅಳುವವರನ್ನು ಪ್ರಶ್ನೆ ಮಾಡಬೇಕು ಅದನ್ನು ಯಾರೂ ಮಾಡುತ್ತಿಲ್ಲ.

ಓಟು ಹಾಕಿ ಅವರನ್ನು ಕಳಿಸಿದ್ದೀವಿ. ನಮಗೆ ಏನು ಬೇಕು, ಇವತ್ತು ಏನಾಗ್ತಾ ಇದೆ, ಎಂತ ಪಕ್ಷಾತೀತವಾಗಿ ಅವರನ್ನ ಪ್ರಶ್ನೆ ಮಾಡಬೇಕು. ನಾಯಕರು ಜನರಿಗೆ ಹೆದರಿಕೊಳ್ಳಬೇಕು,” ಎಂದು ಧನಂಜಯ ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ಕೆಲವು ವಾರಗಳಿಂದ ಒಂದು ಹೊಟೇಲಿನಲ್ಲಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್ ಆಗಿ ನಟ ಧನಂಜಯ ದೊಡ್ಡದಾಗಿ ಟ್ರೊಲ್ ಆಗಿದ್ದಾರೆ.

ಈ ವಿಷಯದ ಮೇಲೆ ಇತ್ತೀಚೆಗೆ ಅವರ ಪರವಾಗಿ ಉಮಾಶ್ರೀ ಮಾತನಾಡಿದ್ದರು. ಈಗ ಧನಂಜಯ ಅವರು ಕೂಡ ಈ ‘ವಿವಾದ’ದ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.

ಲಿಂಗ ಕಟ್ಟಿಕೊಂಡು ನಾನ್ವೆಜ್ ತಿಂದಿಲ್ಲ

ಒಬ್ಬ ಪತ್ರಕರ್ತೆ ಲಿಂಗಾಯತರಿಗೆ ಲಿಂಗ ಸಂಸ್ಕಾರ ಮುಖ್ಯ, ಲಿಂಗ ಕಟ್ಟಿಕೊಂಡು ಮಾಂಸ ತಿನ್ನುವುದು ತಪ್ಪು, ಎಂದು ಹೇಳಿದರು.

ಅದಕ್ಕೆ ಧನಂಜಯ ಹೇಳಿದ್ದು: “ನಾನು ಲಿಂಗ ಕಟ್ಟಿಕೊಂಡು ನಾನ್ವೆಜ್ ತಿಂದರೆ, ನಮ್ಮ ಮನೆಯವರಿಗೇ ನೋವಾಗತ್ತೆ. ನಾನು ಯಾಕೆ ಅದನ್ನು ಮಾಡಲಿ, ಯಾರಿಗೂ ನೋವುಂಟು ಮಾಡುವ ಮನಸ್ಥಿತಿ ನನಗಿಲ್ಲ.

ಕೆಲವರು ಲಿಂಗ ಪೂಜೆ ಮಾಡಿ ದೇವರ ಮನೆಯಲ್ಲೇ ಇಡ್ತಾರೆ, ಕೆಲವರು ಅದನ್ನು ಕಟ್ಟಿಕೊಂಡೇ ಇರುತ್ತಾರೆ. ಅದು ಅವರವರ ನಂಬಿಕೆ.”

ನಾನ್ವೆಜ್ ತಿನ್ನುವವರು ವಚನ ಹೇಳಬಹುದಾ

ವಚನಗಳನ್ನು ಹೇಳ್ತೀರಾ, ಬಸವತತ್ವ ಬಗ್ಗೆ ಮಾತಾಡ್ತೀರಾ ನಾನ್ವೆಜ್ ತಿನ್ನಬಹುದಾ ಅಂತ ಪ್ರಶ್ನೆಗಳೂ ಬರುತ್ತಿವೆ, ಎಂದು ಇನ್ನೊಬ್ಬರು ಪತ್ರಕರ್ತರು ಕೇಳಿದರು.

”’ನಾನು ನಾನ್ವೆಜ್ ತಿಂತೀನಿ ಅಂತ ಬಸವಣ್ಣನವರ ವಚನ ಹೇಳಬಾರದ? ನಾನೂ ವಚನ ಹೇಳ್ತೀನಿ, ಬಸವ ನನಗೂ ಸೇರಿದ್ದಾನೆ,’ ಅಂತ ಉಮಾಶ್ರೀಯಮ್ಮ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಬಸವಣ್ಣನವರು ಇದೆಲ್ಲಕ್ಕಿಂತ ಹಚ್ಚಾಗಿರೋ ವಿಷಯಗಳ ಬಗ್ಗೆ ಬಹಳ ಚೆನ್ನಾಗಿ ಹೇಳಿದ್ದಾರೆ. ಅದರ ಬಗ್ಗೆಯೂ ಮಾತಾಡೋಣ,” ಎಂದು ಧನಂಜಯ ಕೇಳಿದರು.

ನೀವು ಹೇಳೋದೆಲ್ಲಾ ವಿವಾದವಾಗತ್ತೆ ಅಂತ ಇನ್ನೊಂದು ಪ್ರಶ್ನೆ ಪತ್ರಕರ್ತರಿಂದ ಬಂತು.

“ದ್ವೇಷ ಮಾಡುವುದು ಬೇಡ, ಯಾರಿಗೂ ತೊಂದರೆ ಕೊಡುವುದು ಬೇಡ, ಮಾನವರಂತೆ ಇರೋಣ, ಸಂಬಂಧಗಳು ಚೆನ್ನಾಗಿರಲಿ, ಎಲ್ಲರೂ ಚೆನ್ನಾಗಿರೋಣ ಅಂತ ಅನಿಸತ್ತೆ. ಅದನ್ನೇ ಹೇಳ್ತೀನಿ. ಅದಕ್ಕೆ ಇಷ್ಟೊಂದು ಪ್ತಶ್ನೆಗಳು ಬರತ್ತೆ ಎಂದರೆ ಹೇಗೆ. ಕುವೆಂಪುರಂತಹ ಹಿರಿಯರೂ ಹೇಳಿರುವುದು ಇದನ್ನೇ.

ಒಂದು ವರ್ಷದಿಂದ ಇದೇನೂ ಬೇಡ ನನ್ನ ಸಿನಿಮಾದ ಬಗ್ಗೆ ಮಾತ್ರ ಮಾತಾಡೋಣ ಅಂತ ನನ್ನ ಪಾಡಿಗೆ ನಾನಿದ್ದೆ. ಆದರೆ ಈಗ ನಾನು ಊಟ ಮಾಡಿದ್ದೂ ವಿವಾದವಾಗ್ತಾ ಇದೆ,” ಎಂದು ಧನಂಜಯ ಉತ್ತರ ನೀಡಿದರು.

ಇದೇ ಸಂದರ್ಭದಲ್ಲಿ ಸಂವಿಧಾನ ಕೊಟ್ಟಿರುವ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆಯೂ ಧನಂಜಯ ಮಾತನಾಡಿದರು.

“ನನಗೆ ಅನಿಸಿದ್ದನ್ನ ಹೇಳುವಂತಹ ಸ್ವಾತಂತ್ರ್ಯ ಇದೆಯಲ್ಲ, ಅದಕ್ಕಿಂತ ರುಚಿಯಾಗಿರುವುದು ಏನೂ ಇಲ್ಲ. ಸ್ವತಂತ್ರ ಬಹಳ ಅಮೂಲ್ಯ, ಅದು ನಮ್ಮ ಮೂಲಭೂತ ಹಕ್ಕು. ಆ ಸ್ವಾತಂತ್ರ್ಯಕ್ಕೆ ಕೈ ಹಾಕಿದರೆ ಅದು ಸಮಸ್ಯೆ.

ಇದೇ ತಿನ್ನಬೇಕು, ಇದೇ ರೀತಿ ಮಾತಾಡಬೇಕು, ಇದೇ ಬಟ್ಟೆ ಹಾಕಬೇಕು ಎಂದು ನಿಯಂತ್ರಿಸಲು ಬರುವವರಿಗೇ ಸಮಸ್ಯೆಯಾಗುತ್ತದೆ,” ಎಂದು ಎಚ್ಚರಿಸಿದರು.

“ಇಲ್ಲಿ ಸಮಸ್ಯೆಯಾಗುತ್ತಿರುವುದು ಸೋಶಿಯಲ್ ಮೀಡಿಯಾದಲ್ಲಿರುವ ಮುಖ್ಯವಾಗಿ ಫೇಕ್ ಖಾತೆಗಳಿಂದ. ಯಾರು ಏನು ಬೇಕಾದರೂ ಹಾಕಬಹುದು. ಅವರು ಯಾರನ್ನೂ ಬಿಟ್ಟಿಲ್ಲ,” ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
10 Comments
  • ಬಸವಾದಿ ಶರಣರ ಲಿಂಗಾಯತ ಧರ್ಮದ ಬೆಂಬಲಿಗರು ಗಟ್ಟಿಯಾಗಿ ನಿಲ್ಲಬೇಕು ಇಲ್ಲ ಅಂದ್ರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮೊಸರಿನಲ್ಲಿ ಕಲ್ಲು ಹುಡುಕಿ ಅಪ ಪ್ರಚಾರ ಮಾಡುತ್ತಿದ್ದಾರೆ. ಶರಣು ಶರಣಾರ್ಥಿಗಳು 🙏🙏🌺

  • ಧರ್ಮವೇ ಬೇರೆ, ರಾಜಕೀಯವೇ ಬೇರೆ.
    ಧರ್ಮದ ಚಿಂತೆ ಮಾಡುವವರು ರಾಜಕೀಯದ ಚಿಂತೆ ಮಾಡಬೇಕೆಂದೇನು ಇಲ್ಲವಲ್ಲ. ಅಥವಾ ಸಾರ್ವಜನಿಕ ಜೀವನದಲ್ಲಿದ್ದು ನಮ್ಮ ನಡೆ ಯಾರು ಪ್ರಶ್ನೆ ಮಾಡಬಾರದೆಂದು ಏನಾದರು ಇದೆಯೇ?
    ಒಬ್ಬ ವೆಕ್ತಿಯನ್ನು ಜನ ಧಾರ್ಮಿಕ ನಾಯಕ ಎಂದು ಗುರುತಿಸಿದ ಮೇಲೆ ಅದೇ ವೆಕ್ತಿ ಧರ್ಮದ ಆಚರಣೆಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರಶ್ನೆ ಬರೋದು ಸಹಜ.
    ಅಂಗದಿಚ್ಚೆಗೆ ಮಧ್ಯ ಮಾಂಸವ ತಿಂಬರು
    ಕಂಗಳಿಚ್ಚೆಗೆ ಪರವಧುವ ನೆರೆವೆರು
    ಲಿಂಗಪಥವ ತಪ್ಪಿ ನಡೆವರು ಕೊಂಡ ಮಾರಿಂಗೆ ಹೊಹುದಾ ತಪ್ಪದು ಕೂಡಲಸಂಗಮ ದೇವ ಎಂದು ಬಸವಣ್ಣನವರೇ ಹೇಳಿರುವಾಗ ಮಾಂಸ ತಿಂದು ಲಿಂಗಾಯತನಾಗಲು ಹೇಗೆ ಸಧ್ಯ. ಅದನ್ನೇ ಪ್ರಶ್ನಿಸಿದಾಗ ಉತ್ತರಿಸದೆ ಮರು ಪ್ರಶ್ನಿಸುವುದು ನೈತಿಕತೆಯಲ್ಲ.

  • ಒಂದು ಮನೆಯಲ್ಲಿ ಅಡುಗೆ ಮನೆಯೂ ಇರುತ್ತೆ, ದೇವರ ಮನೆಯೂ ಇರುತ್ತೆ, ಬಚ್ಚಲ ಮನೆಯೂ ಇರುತ್ತೆ. ಆದರೆ ಅಡುಗೆ ಮನೆ ಮತ್ತು ದೇವರ ಮನೆ ನಡುವೆ ಜಗಳ ಹಚ್ಚುವ ಲಂಭಕ್ತರ ಮತ್ತು ಭಜನಾ ಮಂಡಳಿಯವರ ವಿವೇಚನಾ ರಹಿತ ಅಸಂಗತ ವಾದಕ್ಕೆ ಸರಿಯಾದ ಉತ್ತರ ನೀಡಿದ್ದಾರೆ ಧನಂಜಯ.

  • ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
    ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
    ಇನ್ನಾವುದು ವಿಧಿಯಯ್ಯಾ
    ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
    ಜೀವಜಾಲದಲ್ಲಿದೆ ಚರಾಚರವೆಲ್ಲ.
    ಅದು ಕಾರಣ,
    ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
    ನಿರ್ದೋಷಿಗಳಾಗಿ ಬದುಕಿದರು.

    ಅಂದರೆ ಎಲ್ಲರೂ ಕೊಂದೇ ತಮ್ಮ ಆಹಾರ ಸೇವಿಸುವುದು. ಒಂದೇ ವಿಶೇಷ ಅಂದರೆ ಅದನ್ನು ತಮ್ಮ ಇಷ್ಟಲಿಂಗಕ್ಕೆ ಅರ್ಪಿಸಿ ಪ್ರಸಾದವನ್ನಾಗಿ ಸ್ವೀಕರಿಸುತ್ತಾರೆ.

  • ಹೊಲಸು ತುಂಬುವ ಹೊಲೆಯ …
    ಅಂಗದಿಚ್ಚೆಗೆ ಮಧ್ಯ ಮಾಂಸವ ತಿಂಬರು
    ಕಂಗಳಿಚ್ಚೆಗೆ ಪರವಧುವ ನೆರೆವೆರು…
    ಮರ ಗಿಡು ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
    ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
    ಇನ್ನಾವುದು ವಿಧಿಯಯ್ಯಾ…. ಎಲ್ಲ ತರಹದ ವಚಗಳು, ಒಂದು ತರಹ ಸರ್ವೋಚ್ಚ ನ್ಯಾಯಾಲಯದ ಆದೇಶ ದಂತೆ ಇವೆ… ಒಂದು ಸನ್ನಿವೇಶ, ಸಂದರ್ಭ ಕ್ಕೆ ಪರ ,ವಿರೋಧ ಇದ್ದಂತೆ…ಅವರವರ ಭಕುತಿಗೆ..ಭಾವಕ್ಕೆ ಅಂದ ಹಾಗೆ.. ಆಯಾ ವ್ಯಾಜ್ಯದ ಸಂದರ್ಭಕ್ಕೆ, ಆಯಾ ಆದೇಶ ಬಂದರು,ಅದು ಸಾರ್ವಕಾಲಿಕ ಸತ್ಯ…ಆದರೆ ವಚನಗಳಲ್ಲಿ ಯಾವುದನ್ನು ಸಾರ್ವಕಾಲಿಕ ಅನ್ನಬೇಕು ? ಗೊಂದಲ.

  • ಸಿನಿನಟ ದನಂಜಯ ಅವರು ಮಾಂಸಾಹಾರಿ ಆಗಿರೋದು ಅವರ ವೈಯಕ್ತಿಕ ವಿಷಯ.ಅದು ಅವರ ಆಯ್ಕೆ. ಈಗ ವಿಷಯ ಇರೋದು ಲಿಂಗಾಯತರು ಅಂದರೆ ಬಸವತತ್ವ ಪರಿಪಾಲಕರು ಮಾಂಸಾಹಾರಿಗಳ ಆಗಬಹುದ ಅಂದರೆ, ನನಗಿರುವ ಬಸವಾದಿಶರಣರ ಆಶಯಗಳ ಮಿತ ಅರಿವಿನಲ್ಲಿ ಹೇಳುವುದಾದರೆ ಇಲ್ಲ ಮಾಂಸಾಹಾರ ಬಸವ ತತ್ವಕ್ಕೆ ವಿರುದ್ಧವಾದುದು. ದಯವೇ ಧರ್ಮದ ಮೂಲವಯ್ಯ ಎನ್ನುವ ತತ್ವ ಲಿಂಗಾಯತ, ಆದ್ದರಿಂದ ಪ್ರಾಣಿಗಳನ್ನು ಕೊಂದು , ಮಾಂಸಾಹಾರ ಭಕ್ಷಣೆ ನಿಷಿದ್ಧ. ಯಾರೇ ಆಗಲಿ ಬಸವತತ್ವ ಪರಿಪಾಲಿಸುವವರು ಮಾಂಸಭಕ್ಷಣೆ ಮಾಡಿದರೆ ಅದು ಅವರ ಬಲಹೀನತೆ ಆಗುವುದು. ಅಂತೆಯೇ ಭ್ರಷ್ಟಾಚಾರ, ಹಿಂಸೆ, ಕೂಡಿಡುವುದು(ಸಂಗ್ರಹ),ವ್ಯಾಪಾರಿ ಮನೋಭಾವ,ಮೇಲರಿಮೆ ,ಅಸಮಾನತೆಯ ಮನಸ್ಸು, ಕಂದಾಚಾರ ಇವು ಯಾವುದೇ ಇದ್ದರೂ ಸಹ ಲಿಂಗಾಯತ ತತ್ವ ಪರಿಪಾಲಕರು ಅವುಗಳು ತಮ್ಮಲ್ಲಿರುವ ಬಲಹೀನತೆಗಳು ಎಂದು ತಿಳಿಯಬೇಕು ಮತ್ತು ಆದಷ್ಟು ಬೇಗ ಅವುಗಳಿಂದ ದೂರಸರಿದು ಬಸವ ಪ್ರಜ್ಞೆ ಮೆರೆಯಬೇಕೆಂಬುದು ನನ್ನ ಅಭಿಪ್ರಾಯ.

  • ಅದೇ ಬೇರೆ, ಇದೇ ಬೇರೆ, ನೀ ತಿನ್ನುವದನ್ನ ಪೋಟೋ ಹಾಕಿದರ ಕಾರಣ ನಿನ್ನ ಪ್ರಶ್ನೆ ಮಾಡಬೇಕಾಯಿತು, ಅದಕ್ಕೆ ಅಲರು ಅದು ತಿಂತಾರೆ ನಾ ಇದನ್ನ ತಿಂತೀನಿ ಅನ್ನುವದು, ‌,,,, 😂

  • Corruption is more heinous and violent than meat eating . Corruption snatches the food from the plates of the poor and the hungry . Corrupt money makes men brutal , inhuman ,unkind and unequal !

  • ಗ್ರಾಮಾಂತರ ಪ್ರದೇಶದ ಜನರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು says:

    ನೂರಾರು ಕೋಟಿಗಟ್ಟಲೆ ಸಾರ್ವಜನಿಕರ ತೆರಿಗೆ ಹಣ ಇಂದು ತೇಗುವ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಜನರು ಧ್ವನಿ ಯತ್ತಬೇಕು ಕೇವಲ ಮಾಂಸಾಹಾರಿ ಭೋಜನ ಮಾಡಿದವರ ವಿರುದ್ಧ ಬಾಯಿ ತೆಗೆಯುವ ನಾವುಗಳು ಜನರ ಹಣ ತಿನ್ನುವ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಏಕೆ ಬಾಯಿ ತೆಗೆಯುತ್ತಿಲ್ಲ ಕೂಡಲೇ ಜನರು ಎಚ್ಚೆತ್ತುಕೊಳ್ಳಬೇಕು ಇದು ಗ್ರಾಮ ಮಟ್ಟದಿಂದಲೇ ಆಗಬೇಕು ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಭ್ರಷ್ಟರನ್ನು ಹೊರಗಿಟ್ಟು ಒಳ್ಳೆಯವರನ್ನು ಅಧಿಕಾರಕ್ಕೆ ತರಬೇಕು ಗ್ರಾಮಾಂತರ ಪ್ರದೇಶದ ಜನರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬಾರದು

Leave a Reply

Your email address will not be published. Required fields are marked *