ಗುಂಡ್ಲುಪೇಟೆ:
ಪಟ್ಟಣದ ಹೆದ್ದಾರಿಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಗುರುಮಲ್ಲೇಶ್ವರ ಯುವ ಬಳಗ, ಸಿದ್ಧಗಂಗಾ ಮಠದ ಭಕ್ತ ಬಳಗ ಹಾಗೂ ಲಿಂಗಾಯತ ವೀರಶೈವ ಸಮಾಜ ಸಂಯುಕ್ತಾಶ್ರಯದಲ್ಲಿ ಸಿದ್ದಗಂಗಾಮಠದ ಲಿಂಗೈಕ್ಯ ತ್ರಿವಿಧ ದಾಸೋಹಿ, ಕರ್ನಾಟಕರತ್ನ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನವನ್ನಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಶಿವಕುಮಾರ ಮಹಾಸ್ವಾಮೀಜಿ ಅವರ ಭಾವಚಿತ್ರಕ್ಕೆ ಲಿಂಗಾಯತ ಸಮಾಜದ ಮುಖಂಡರು ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಮಾಡಿದರು. ನಂತರ ಅನ್ನದಾಸೋಹ ನಡೆದು ಸಾವಿರಾರು ಜನ ಅನ್ನಸಂತರ್ಪಣೆಯಲ್ಲಿ ಭಾಗಿಯಾದರು.

ಕಾರ್ಯಕ್ರಮದಲ್ಲಿ ಮೂಡುಗುರು ಮಠಾಧ್ಯಕ್ಷರಾದ ಪೂಜ್ಯ ಇಮ್ಮಡಿ ಉದ್ದಾನ ಸ್ವಾಮಿಗಳು, ಕಬ್ಬಳ್ಳಿ ಜಂಗಮಠದ ಪೂಜ್ಯ ಗುರುಸಿದ್ಧ ಸ್ವಾಮಿಗಳು, ಬೊಮ್ಮನಹಳ್ಳಿ ಪಟ್ಟದಮಠದ ಪೂಜ್ಯ ಗುರುಶಾಂತ ಸ್ವಾಮಿಗಳು ಸನ್ನಿಧಾನ ವಹಿಸಿದ್ದರು.

ಕಾಡ ಮಾಜಿ ಅಧ್ಯಕ್ಷರಾದ ಎಚ್.ಎಸ್. ನಂಜಪ್ಪ, ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುತ್ತನಪುರ ರಾಜಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎಸ್. ಮಹೇಶ್, ಚಾಮರಾಜನಗರ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಮೂಡ್ಲುಪುರ ನಂದೀಶ, ಎಪಿಎಂಸಿ ಅಧ್ಯಕ್ಷರಾದ ನಾಗರಾಜು, ಚಾಮುಲ್ ಮಾಜಿ ನಿರ್ದೇಶಕರಾದ ಕಣ್ಣೇಗಾಲ ಸ್ವಾಮಿ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷರಾದ ಕೆ.ಸಿ. ಮಧು, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚೆನ್ನಮಲ್ಲಿಪುರ ಬಸವಣ್ಣ, ತಾಲ್ಲೂಕು ದಂಡಾಧಿಕಾರಿಗಳಾದ ತನ್ಮಯ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು, ಶ್ರೀ ಗುರುಮಲ್ಲೇಶ್ವರ ಯುವಬಳಗದ ಸದಸ್ಯರು, ಶ್ರೀ ಸಿದ್ದಗಂಗಾಮಠದ ಭಕ್ತವೃಂದ, ಆರಕ್ಷಕ ಸಿಬ್ಬಂದಿ ವರ್ಗ ಹಾಗೂ ಮತ್ತಿತರರು ಭಾಗವಹಿಸಿದ್ದರು.

