ಬೆಳಗಾವಿಯಲ್ಲಿ ಅಕ್ಕಮಹಾದೇವಿ ತೆಗ್ಗಿಯವರ ‘ವಚನ ಬುತ್ತಿ’ ಗ್ರಂಥ ಲೋಕಾರ್ಪಣೆ

ಬೆಳಗಾವಿ:

ಶರಣರ ವಚನಗಳು ನಮ್ಮ ಬಾಳನ್ನು ತಿದ್ದುವ ದಾರಿದೀಪಗಳಾಗಿವೆ. ಶರಣರ ಪ್ರತಿಯೊಂದು ವಚನದ ವಿಚಾರಗಳು ನೈಜತೆ ಬಿಂಬಿಸುವುದರ ಜೊತೆಗೆ ಸದಾಕಾಲ ಮಾರ್ಗದರ್ಶಿಯಾಗಿವೆ ಎಂದು  ನಿವೃತ್ತ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.

ರವಿವಾರ ಫ.ಗು. ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆಯ ವತಿಯಿಂದ ಅಕ್ಕಮಹಾದೇವಿ ತೆಗ್ಗಿ ರಚಿಸಿದ ‘ವಚನ ಬುತ್ತಿ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಅಕ್ಕಮಹಾದೇವಿ ತೆಗ್ಗಿ ಮಾತನಾಡಿ, 12 ನೇ ಶತಮಾನದ ಸುಮಾರು 15ಕ್ಕೂ ಹೆಚ್ಚು ವಚನಕಾರರ  ವಚನಗಳನ್ನು ಬಳಸಿ ಅದನ್ನು ನೈಜ ಜೀವನದ ಜೊತೆಗೆ ವಿಶ್ಲೇಷಣೆ ಮಾಡಲಾಗಿದೆ. ಪ್ರಸ್ತುತ ಜೀವನದಲ್ಲಿ ವಚನಗಳು ತೀರಾ ಅವಶ್ಯಕವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿ ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ಮಾತನಾಡಿ, ಸಂಘಟನೆಯ ಒಡನಾಟ, ಇಲ್ಲಿಯ ಪ್ರಾರ್ಥನೆ ಮತ್ತು ಅನುಭಾವ ಕಾರ್ಯಕ್ರಮದ ಪ್ರಭಾವದಿಂದ ಇಂದು ಅಕ್ಕಮಹಾದೇವಿ ತೆಗ್ಗಿ ಅವರು ಕೃತಿ ರಚಿಸುವ ಮಟ್ಟಕ್ಕೆ ಅನುಭವ ಪಡೆದಿದ್ದಾರೆ. ಇದು ಸಂಘಟನೆಯ ಸತ್ಸಂಗದ ಫಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿರುಪಾಕ್ಷ ದೊಡ್ಡಮನಿ, ಸಿದ್ದಪ್ಪ ಸಾರಾಪುರಿ, ಸದಾಶಿವ ದೇವರಮನಿ, ಶಂಕರ ಶೆಟ್ಟಿ, ಆನಂದ ಕರ್ಕಿ, ಮಹಾದೇವ ಕೆಂಪಿಗೌಡ್ರ, ಬಸವರಾಜ ಕರಡಿಮಠ, ಸುದೀರ ರಘಶೆಟ್ಟಿ, ಪ.ಬಿ. ಕರಿಕಟ್ಟಿ, ಬಿ.ಪಿ. ಜೇವಣಿ, ಶಿ. ಪೂಜಾರ, ಶಿವಕುಮಾರ ಪಾಟೀಲ, ಶಿವಾನಂದ ನಾಯಕ, ಶಂಕರ ರಾವಳ, ಸ.ರಾ. ಸುಳಕೂಡೆ, ಅಶೋಕ ಉಳ್ಳೆಗಡ್ಡಿ, ಸುನೀಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಡಾ. ಅ. ಬ. ಇಟಗಿ, ಜಯಶ್ರೀ ಚವಲಗಿ, ಲಕ್ಷ್ಮಿ ಜೇವಣಿ, ಶಶಿಕಲಾ ಪೂಜಾರಿ ಸೇರಿದಂತೆ ಶರಣರು ಉಪಸ್ಥಿತರಿದ್ದರು.

ಆರಂಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ, ಸಂಗಮೇಶ ಅರಳಿ ಸ್ವಾಗತ, ಎಂ. ವೈ. ಮೆಣಸಿನಕಾಯಿ ನಿರೂಪಿಸಿದರು. ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *