ಕಳೆದ ಚುನಾವಣೆಯಲ್ಲಿ ಲಿಂಗಾಯತರ ಮತ ಶಿಫ್ಟ್ ಆಗಿದೆ: ಎಂ.ಬಿ.ಪಾಟೀಲ್

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ಸೋಮವಾರ ರಾತ್ರಿ ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರ ಸಭೆ ನಡೆದಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

“ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 57 ಜನರಿಗೆ ಟಿಕೆಟ್ ಕೊಟ್ಟಿತ್ತು. ಇದರಲ್ಲಿ 34 ಜನ ಗೆದ್ದಿದ್ದಾರೆ. ಬಿಜೆಪಿ 72 ಲಿಂಗಾಯತರಿಗೆ ಟಿಕೆಟ್ ಕೊಟ್ಟಿತ್ತು ಅದರಲ್ಲಿ 17 ಜನ ಗೆದ್ದಿದ್ದಾರೆ. ಇದು ಲಿಂಗಾಯತರ ಮತ ಶಿಫ್ಟ್ ಆಗಿದೆ ಎಂದು ತೋರಿಸುತ್ತದೆ,” ಎಂದು ಹೇಳಿದರು.

“ಕಾಂಗ್ರೆಸ್ಸಿನಲ್ಲಿ ಎಲ್ಲಾ ಸಮುದಾಯಗಳಿಗಿಂತ ಲಿಂಗಾಯತ ಶಾಸಕರ ಸಂಖ್ಯೆಯೇ ಹೆಚ್ಚು. ಸೋಮವಾರದ ಸಭೆಗೆ ಇವರಲ್ಲಿ 28 ಜನ ಬಂದಿದ್ದರು. ಸಚಿವರ ಪೈಕಿ ಎಸ್.ಎಸ್.ಮಲ್ಲಿಕಾರ್ಜು‌ನ‌ ಮತ್ತು ಶರಣಬಸಪ್ಪ ದರ್ಶನಾಪುರ ಮಾತ್ರ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ. ಉಳಿದ ಎಲ್ಲ ಲಿಂಗಾಯತ ಸಚಿವರೂ ಬಂದಿದ್ದರು,” ಎಂದು ತಿಳಿಸಿದರು.

“ಎಲ್ಲಾ ಸಮುದಾಯಗಳ ಶಾಸಕರೂ ಹೀಗೆ ಆಗಿಂದಾಗ್ಗೆ ಸಭೆ ಸೇರುವುದು ಸ್ವಾಭಾವಿಕ. ಸಮಾಜ ಪರಿಸ್ಥಿತಿ, ಏಳಿಗೆ, ಪ್ರಾತಿನಿಧ್ಯದ ಬಗ್ಗೆ ಚರ್ಚೆಯಾಯಿತು. ಬೇರೆಯವರದು ಕಿತ್ತುಕೊಂಡು ತಿನ್ನುವ ಬುದ್ದಿ ನಮಗಿಲ್ಲ. ನಮ್ಮ ನ್ಯಾಯವಾದ ಪಾಲಿನ ಬಗ್ಗೆ ಮಾತ್ರ ಚರ್ಚೆಯಾಯಿತು. ಯಾವುದೇ ವೈಯಕ್ತಿಕ ಬೇಡಿಕೆ ಅಥವಾ ನಾಯಕತ್ವದ ಬಗ್ಗೆ ಚರ್ಚೆಯಾಗಲಿಲ್ಲ,” ಎಂದು ಹೇಳಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
1 Comment
  • ಕೇವಲ ರಾಜಕೀಯದ ಬಗ್ಗೆ ಚರ್ಚೆಯಲ್ಲದೆ, ಲಿಂಗಾಯತ ಧರ್ಮದ ಬಗ್ಗೆ ಮತ್ತು ಅದು ಹೆದುರಿಸುತ್ತಿರುವ ಸಮಸ್ಯ,ಅನ್ಯರ ಶರಣರ ಸಾಹಿತ್ಯ ಹಾಗೂ ಇತಿಹಾಸ ತಿರುಚಿರುವ ಬಗ್ಗಯೂ ಗಮನ ಚೆಲ್ಲಿ ಸರಕಾರದ ಈ ಬಗ್ಗೆ ರಕ್ಷಣಾ ಕ್ರಮಕ್ಕೆ ಮುಂದಾಗ ಬೇಕು.

Leave a Reply

Your email address will not be published. Required fields are marked *