ನಂಜನಗೂಡು
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ, ಬಸವಾದಿ ಶರಣರಾದ ವೀರ ಮಡಿವಾಳ ಮಾಚಿದೇವರು, ಶಿವಯೋಗಿ ಸಿದ್ದರಾಮೇಶ್ವರರು, ಹಡಪದ ಲಿಂಗಮ್ಮನವರು ಹಾಗೂ ಅಂಬಿಗರ ಚೌಡಯ್ಯನವರ ಜಯಂತಿ ಪ್ರಯುಕ್ತ ತಾಲ್ಲೂಕಿನ ಸರ್ಕಾರಿ ಶಾಲೆಯ 8,9,10 ನೇ ತರಗತಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶರಣರ ವಚನ ಕಂಠಪಾಠ ಸ್ಪರ್ಧೆ ನಡೆಯಿತು.

ಶಾಸಕರಾದ ದರ್ಶನ್ ಧೃವನಾರಾಯಣ ಅವರ ಸಹಕಾರದಿಂದ ತಾಲ್ಲೂಕು ಆಡಳಿತವು ಸ್ಪರ್ಧೆಯನ್ನು ನಗರದ ಗುರುಭವನದಲ್ಲಿ ಇತ್ತೀಚೆಗೆ ಏರ್ಪಡಿಸಿತ್ತು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕ್ಷೇತ್ರ ಸಮನ್ವಯ ಅಧಿಕಾರಿ ಬಸವರಾಜು ಅವರು, ಶರಣರ ವಚನಗಳು ಸಾರ್ವಕಾಲಿಕ ಸತ್ಯ, ನೈತಿಕ ಮೌಲ್ಯಗಳಿಂದ ಕೂಡಿವೆ. ಹಾಗೂ ಭಾರತದ ಅಭಿವೃದ್ಧಿಗೆ ಸಹಕಾರಿಯಾಗಿರುವ ಕಾರಣ ಪ್ರತಿಶಾಲೆಯ ಮಕ್ಕಳಿಗೂ ವಚನಗಳ ಕಲಿಕೆ ಆಗಬೇಕಿದೆ ಎಂದರು.

ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮೋಹನ್ ಅವರು ಉಪಸ್ಥಿತಿಯೊಂದಿಗೆ, ವಿಶ್ವ ಬಸವಸೇನೆ ಅಧ್ಯಕ್ಷ, ಬಸವತತ್ವ ಪ್ರಚಾರಕರಾದ ಬಸವಯೋಗೇಶ ಕಾರ್ಯಕ್ರಮ ರೂವಾರಿಯಾಗಿದ್ದು, ಈ ಬಗ್ಗೆ ಪ್ರಸ್ತಾವನೆ ನೀಡುತ್ತಾ, 12 ನೇ ಶತಮಾನದಲ್ಲಿ ಎಲ್ಲಾ ವರ್ಗದ ಕಾಯಕ ಶರಣರು ಸಾಧನೆ ಮಾಡಿ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಅಭಿವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯಕ್ಕೆ ಆಧ್ಯಾತ್ಮಿಕವಾಗಿ ವಚನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನಕ್ಕೆ ಪ್ರಬಲವಾದ ಮಾರ್ಗವನ್ನು ತೋರುವ ಕಾರಣದಿಂದ, ಶಾಸಕಾರದ ದರ್ಶನ್ ಧೃವನಾರಾಯಣ ಅವರನ್ನು ಕೇಳಿಕೊಂಡಾಗ ತುಂಬು ಹೃದಯ ತೋರಿ ಈ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟರೆಂದು ತಿಳಿಸಿದರು.
ವೇದಿಕೆಯಲ್ಲಿ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ, ನಗರಸಭೆ ನಾಮಿನಿ ಸದಸ್ಯರಾದ ಬಸವರಾಜ್, ಹೌಸಿಂಗ್ ಬೋರ್ಡ್ ಪ್ರಭು ಮತ್ತು ತಾಲ್ಲೂಕು ಭೋವಿ ಸಮುದಾಯದ ಸಂಚಾಲಕ, ದೇವಿರಮ್ಮನಹಳ್ಳಿ ಪಾಳ್ಯದ ಪಾಪಣ್ಣ ಹಾಗೂ ಅಧ್ಯಕ್ಷ ಬಾಲಾಜಿ, ಪ್ರಧಾನ ಕಾರ್ಯದರ್ಶಿ ಕೋಣನೂರು ಪಾಳ್ಯ ವಸಂತಕುಮಾರ, ಗೆಜ್ಜಗಾರ ಸಂಘದ ಗೋಳೂರು ಸ್ನೇಕ್ ಬಸವರಾಜು, ಹಡಪದ ಸಮುದಾಯದ ಅಧ್ಯಕ್ಷ ಪುಟ್ಟಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸಾದ, ನಗರಸಭೆ ಸದಸ್ಯ ಸೌಭಾಗ್ಯ ಸಹಕಾರ ದೊರೆತ ಕಾರಣ ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದರು.

ಶಿಕ್ಷಣ ಸಂಯೋಜಕರಾದ ವೀಣಾ ನಿರೂಪಿಸಿದರು. ತೀರ್ಪುಗಾರಾಗಿ ಜ್ಯೋತಿ ಸುರೇಶ್, ಲೀಲಾ ಮಲ್ಲಿಕಾರ್ಜುನ, ಕಾಯಕ ಯೋಗಿ ಬಸವೇಶ್ವರ ಸಂಘದ ಕೆರೆಹುಂಡಿ ನಂಜುಂಡಸ್ವಾಮಿ, ಶ್ರೀಗುರು ಬಸವೇಶ್ವರ ಟ್ರಸ್ಟಿನ ಮುದ್ದಹಳ್ಳಿ ಅಶೋಕ, ಶ್ರೀಗುರು ಬಸವೇಶ್ವರ ಸೇವಾ ಟ್ರಸ್ಟಿನ ಅಧ್ಯಕ್ಷ ಚನ್ನವಡೆಯನಪುರ ಚನ್ನಪ್ಪ ಹಾಗೂ ಪವಿತ್ರ ನಂದೀಶ, ವಿಶ್ವ ಬಸವಸೇನೆಯ ಉಪಾಧ್ಯಕ್ಷ ಹಂಗಳಪುರ ಸುರೇಶಣ್ಣ, ಮಧುಶಂಕರ್ ಹೌಸಿಂಗ್ ಬೋರ್ಡ್ ಭಾಗವಹಿಸಿ ನಡೆಸಿಕೊಟ್ಟರು.
ಸ್ಪರ್ಧೆಯ ಮೊದಲನೇ ಬಹುಮಾನವಾಗಿ ಲ್ಯಾಪ್‌ಟಾಪ್, ಎರಡನೇಯ ಬಹುಮಾನ ಟ್ಯಾಬ್, ಮೂರನೇ ಬಹುಮಾನ ನಗದು ಎಂದು ಘೋಷಿಸಲಾಗಿತ್ತು, 28 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಉತ್ತಮ ಕಾರ್ಯಕ್ರಮ ಈ ರೀತಿಯ ಕಾರ್ಯಕ್ರಮವನ್ನ ಕರ್ನಾಟಕ ರಾಜ್ಯದ ಎಲ್ಲಾ ತಾಲೋಕು ಆಡಳಿತವು ಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ನಡೆಸುವಂತಾದರೆ ಉತ್ತಮ
ಉತ್ತಮ ಕಾರ್ಯಕ್ರಮ ಈ ರೀತಿಯ ಕಾರ್ಯಕ್ರಮವನ್ನ ಕರ್ನಾಟಕ ರಾಜ್ಯದ ಎಲ್ಲಾ ತಾಲೋಕು ಆಡಳಿತವು ಶಾಲಾ ವಿದ್ಯಾರ್ಥಿಗಳಿಗೆ ವ್ಯವಸ್ಥಿತವಾಗಿ ನಡೆಸುವಂತಾದರೆ ಉತ್ತಮ