ರಾಯಚೂರು :
ಮಹಾಶಿವರಾತ್ರಿ ಪ್ರಯುಕ್ತ ನಗರದ ಬಸವ ಕೇಂದ್ರದಲ್ಲಿ ಬಸವಪರ ಸಂಘಟನೆಗಳ ಸಹಯೋಗದೊಂದಿಗೆ ಫೆಬ್ರವರಿ ೧೩ರಿಂದ ೧೫ರವರೆಗೆ ಮೂರು ದಿನ “ಲಿಂಗಾನುಸಂಧಾನ” ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಬಸವ ಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭೆ ತಾಲ್ಲೂಕು ಘಟಕ ಮತ್ತು ಅಕ್ಕನ ಬಳಗ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದ ನೇತೃತ್ವವನ್ನು ಶರಣ ಸಾಹಿತ್ಯ ಆರಾಧಕರು, ವೈದ್ಯರಾದ ಡಾ. ದಯಾನಂದ ನೂಲಿ ಅವರು ವಹಿಸಲಿದ್ದಾರೆ.
೧೩ ರಂದು ಸಾಯಂಕಾಲ ೫.೩೦ ರಿಂದ, ಡಾ. ದಯಾನಂದ ನೂಲಿ ಅವರಿಂದ ” ಇಷ್ಟಲಿಂಗ ವೈಜ್ಞಾನಿಕ ಪರಿಕಲ್ಪನೆ ” ವಿಷಯ ಕುರಿತು ಚಿಂತನೆ ಇರುತ್ತದೆ. ನಂತರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ಸಾಹಿತಿ ಡಾ. ಸರ್ವಮಂಗಳ ಸಕ್ರಿ ಅವರು ಬರೆದ ” ಬಯಲ ಭಿತ್ತಿಯಲ್ಲಿ ಶರಣರ ತತ್ವಶೋಧ ” ಪುಸ್ತಕವನ್ನು ಡಾ. ದಯಾನಂದ ನೂಲಿ ಲೋಕಾರ್ಪಣೆ ಮಾಡುವರು. ಜಾಗತಿಕ ಲಿಂಗಾಯತ ಮಹಸಭಾ ಜಿಲ್ಲಾಧ್ಯಕ್ಷ ಪಿ. ರುದ್ರಪ್ಪ ಅವರು ಪುಸ್ತಕ ಪರಿಚಯಿಸುವರು. ಪ್ರಸಾದ ದಾಸೋಹದ ಸೇವೆಯನ್ನು ವಿಶ್ರಾಂತ ಪ್ರಾಚಾರ್ಯರಾದ ಅಮರೇಗೌಡ ನೆರವೇರಿಸುವರು.
೧೪ ರಂದು ಸಾಯಂಕಾಲ ೫.೩೦ ರಿಂದ “ಲಿಂಗಾನುಸಂಧಾನ ” ವಿಷಯ ಕುರಿತು ಚಿಂತನೆ ಕಾರ್ಯಕ್ರಮ ನಡೆಯಲಿದೆ. ಪ್ರಸಾದ ದಾಸೋಹ ಸೇವೆ ಅಶೋಕ ಕರಪೆ, ಸೋಲಾಪುರ ಇವರದಾಗಿರುತ್ತದೆ.
೧೫ ರಂದು ಬೆಳಿಗ್ಗೆ ೮-೦೦ ರಿಂದ ” ಶಿವಯೋಗ ಪ್ರಾತ್ಯಕ್ಷತೆ ಮತ್ತು ಇಷ್ಟಲಿಂಗ ಪೂಜೆ”, ಚಿಂತನೆ ಕಾರ್ಯಕ್ರಮ ನಡೆಯಲಿದೆ. ಪ್ರಸಾದ ದಾಸೋಹ ಸೇವೆ ಡಾ. ಸರ್ವಮಂಗಳಾ ಸಕ್ರಿ ವಹಿಸಿಕೊಂಡಿರುವರು.
ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ, ಅಧ್ಯಕ್ಷ ರಾಚನಗೌಡ ಕೋಳೂರು, ಜಾ.ಲಿಂ.ಮ ತಾಲೂಕು ಅಧ್ಯಕ್ಷ ಜೆ. ಬಸವರಾಜ, ಕಾರ್ಯದರ್ಶಿ ಚನ್ನಬಸವಣ್ಣ ಮಹಾಜನಶೆಟ್ಟಿ, ಚನ್ನಬಸವ ಇಂಜನಿಯರ್, ಶಿವಯೋಗಿ ಪಾಟೀಲ, ಶರಣಬಸವ ಜಾಡಲದಿನ್ನಿ, ಮಲ್ಲಿಕಾರ್ಜುನ ಗುಡಿಮನಿ ಅಕ್ಕನ ಬಳಗದ ಪಾರ್ವತಿ ಪಾಟೀಲ, ಪೂರ್ಣಿಮಾ, ಡಾ. ಪ್ರಿಯಾಂಕ ಗದ್ವಾಲ ಮತ್ತಿತರರು ಭಾಗವಹಿಸುವರು.
