ಇಡೀ ವಿಶ್ವ ಇಷ್ಟಲಿಂಗದಂತೆ ಗೋಲಾಕಾರವಾಗಿದೆ : ಡಾ. ತಾಂಡೂರ

ಬಸವ ಮೀಡಿಯಾ
ಬಸವ ಮೀಡಿಯಾ

ಗoಗಾವತಿ:

ಬಯಸಿದಾಗ ಮತ್ತು ಬಯಸಿದ ಸ್ಥಳದಲ್ಲಿ ನಿರಂಕುಶವಾಗಿ ಇಷ್ಟಲಿಂಗ ಪೂಜಾ ಯೋಗ ನಡೆಸಬಹುದು. ಇದಕ್ಕೆ ಯಾವುದೇ ಸಮಯ, ಸ್ಥಳದ ನಿರ್ಬಂಧವಿಲ್ಲ ಮತ್ತು ನಾವಿರುವ ವಿಶ್ವವೇ ಗೋಲಾಕಾರದ ಇಷ್ಟಲಿಂಗವಾಗಿದೆ ಎಂದು ಹೊಸಪೇಟೆಯ ಪುಣ್ಯಕೋಟಿ ಪೌಂಡೇಷನ್ ಮುಖ್ಯಸ್ಥರು ಮತ್ತು ಇಷ್ಟಲಿಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಅಜಯಕುಮಾರ ತಾಂಡೂರ ತಿಳಿಸಿದರು.

ಶ್ರೀ ಕೊಟ್ಟೂರು ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿ  ಹಾಗೂ ಬಸವಪರ ಸoಘಟನೆ ಸಹಯೋಗದಲ್ಲಿ ಹಮ್ಮಿಕೊoಡಿದ್ದ “ಇಷ್ಟಲಿoಗ ದೀಕ್ಷಾ” ಸಮಾರಂಭದಲ್ಲಿ ಮಾತನಾಡುತ್ತಾ ಶಿವಯೋಗ ಪ್ರಾತ್ಯಕ್ಷಿತೆಯನ್ನು ವೈಜ್ಞಾನಿಕವಾಗಿ ತಿಳಿಸಿಕೊಟ್ಟರು.

ಬಸವ ಕೇoದ್ರದ ನಿರ್ದೇಶಕರಾದ ಟಿ.ಹೆಚ್. ಬಸವರಾಜ ಮಾತನಾಡಿ, ಭೂಮಿಗೆ ಉದುರಿದ ಮಳೆ ಹನಿಯೂ ಅಂತ್ಯದಲ್ಲಿ ಸೇರುವುದು ಸಮುದ್ರವನ್ನೆ. ಆತ್ಮ ಮತ್ತೆ ಪರಮಾತ್ಮನಂತೆ-ಬಯಲಿನಲ್ಲಿ ಬಯಲಾಗಿ ಒoದಾಗುವುದೇ ಆಗಿದೆ ಎಂದು ಶಿವರಾತ್ರಿಯ ನಿಜಾರ್ಥವನ್ನು ಅಲ್ಲಮ ಪ್ರಭುದೇವರ ವಚನದೊoದಿಗೆ ವಿವರಿಸಿದರು.

ಸಾನಿಧ್ಯವನ್ನು ವಹಿಸಿದ ಪೂಜ್ಯ ಪದ್ಮಾಕ್ಷರಯ್ಯ  ಮಾತನಾಡಿ, ಮನುಷ್ಯ ನಿಧನದ ನಂತರ ತನ್ನೊಡನೆ ಒಯ್ಯುವದು ಇಷ್ಟಲಿಂಗವೊಂದನ್ನು ಮಾತ್ರ. ಆದ್ದರಿಂದ ಇಷ್ಟಲಿಂಗವನ್ನು ನಿರಂತರವಾಗಿ ಧರಿಸಬೇಕು ಎಂದು ತಿಳಿಸಿದರು.

ಪಂಪಣ್ಣ ಕಿನ್ನಾಳ, ವಿಜಯಲಕ್ಷ್ಮಿ ನಾರಿನಾಳ, ಚನ್ನಬಸಮ್ಮ ಕoಪ್ಲಿ ವಚನ ಹಾಡಿದರು. ಕೆ. ಬಸವರಾಜ ಸಾಮೂಹಿಕ ಭಜನೆ ಮಾಡಿದರು. ಎ.ಕೆ. ಮಹೇಶಕುಮಾರ ನಿರೂಪಣೆ ಮಾಡಿದರು.

ನಂತರ ರಾಷ್ಟ್ರೀಯ ಬಸವದಳದ ಉಪಸ್ಥಿತಿಯಲ್ಲಿ ಬಸವಮoಟಪದಲ್ಲಿ ಶಿವರಾತ್ರಿಯ ಅಂಗವಾಗಿ ಗಣಮೇಳ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹೊಸಪೇಟೆಯ ಸಿದ್ದಲಿಂಗೇಶ್ವರ ಕೆ.ಎಚ್, ಬಸವರಾಜ, ಜಿ. ವಿನಾಯಕ, ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ದಿಲೀಪಕುಮಾರ ವಂದಾಲ, ಬಸವ ಕೇoದ್ರದ ಅಧ್ಯಕ್ಷರಾದ ಕೆ. ಬಸವರಾಜ, ಬಸವ ಜಯoತಿ ಆಚರಣೆ ಸಮಿತಿ 2025ರ ಅಧ್ಯಕ್ಷರಾಗಿದ್ದ ರುದ್ರಪ್ಪ ಗಾಳಿ ಭಾಗವಹಿಸಿದ್ದರು.

ಬಸವ ಜಯoತಿ ಆಚರಣೆ ಸಮಿತಿ – 2026ರ ಗೌರವಾಧ್ಯಕ್ಷರಾದ ಎಫ್. ಷಣ್ಮುಖಪ್ಪ, ಅಧ್ಯಕ್ಷರಾದ ಕೆ.ಕಾಳಪ್ಪ, ಕಾರ್ಯದರ್ಶಿ ಶೇಖರಪ್ಪ ಅರಳಿ ಮತ್ತು ಮಹಿಳಾ ವಿಭಾಗದ ಅಧ್ಯಕ್ಷರಾದ ಡಿ.ಜಿ. ಮಠದ ಮತ್ತು ಅನೇಕ ಮಹಿಳೆಯರು ಇದ್ದರು.

ಇದೇ ಸoದರ್ಭದಲ್ಲಿ ಇಷ್ಟಲಿಂಗ ದೀಕ್ಷೆಯನ್ನು ನೀಡಲಾಯಿತು. ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ವೀರೇಶ ರಡ್ಡಿ ವಚನ ಮಂಗಲ ಮಾಡಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *