ಕೊಪ್ಪಳದಲ್ಲಿ ಲಿಂಗಾಯತ ಧರ್ಮ ಪ್ರಸಾರಕ ಹರ್ಡೇಕರ ಮಂಜಪ್ಪ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಕೊಪ್ಪಳ:

ಬಸವತತ್ವ ಪ್ರಸಾರಕ, ರಾಷ್ಟ್ರವಾದಿ ಹರ್ಡೇಕರ ಮಂಜಪ್ಪ ಅವರ ಜಯಂತಿಯನ್ನು ಬುಧವಾರ ಕುಷ್ಟಗಿ ರಸ್ತೆಯ ಹರ್ಡೇಕರ ಮಂಜಪ್ಪ ವೃತ್ತದಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ವತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ರಾಜೇಶ ಸಸಿಮಠ ಮಾತನಾಡುತ್ತ, ನಿರಂಜನ ಶರಣ, ಕರ್ನಾಟಕದ ಗಾಂಧಿ, ಗುರು ಬಸವಣ್ಣನವರ ಲಿಂಗಾಯತ ಧರ್ಮದ ಪ್ರಸಾರಕ, ಸ್ವಾತಂತ್ರ್ಯ ಹೋರಾಟಗಾರ, ವಚನಕಾರ, ಪತ್ರಕರ್ತ, ಸಾಹಿತಿಗಳಾಗಿ ಮಂಜಪ್ಪನವರು ಅಪ್ರತಿಮ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.

ಪ್ರಪ್ರಥಮ ಬಾರಿಗೆ ಬಸವಣ್ಣನವರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಣೆಗೆ ಜಾರಿಗೆ ತಂದವರು, ವಚನಗಳ ನಿರ್ವಚನವನ್ನು ಮಾಡಿ ವಚನ ಸಾಹಿತ್ಯವನ್ನು ಪ್ರಸಾರ ಮಾಡಿದವರು, ವಚನ ಸಾಹಿತ್ಯ ಮುದ್ರಿಸಿ ಪುಸ್ತಕ ಹಂಚಿದವರು, ಪ್ರವಚನಗಳ ಮುಖಾಂತರ ವಚನ ಸಾಹಿತ್ಯವನ್ನು ಬಸವಾದಿ ಶಿವಶರಣರನ್ನು ನಾಡಿಗೆ ಪರಿಚಯಿಸಿದವರು ಹರ್ಡೇಕರ್ ಮಂಜಪ್ಪನವರು ಎಂದರು.

ಅವರ ಸವಿನೆನಪಿಗಾಗಿ ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ 2016 ರಲ್ಲಿ ಕುಷ್ಟಗಿ ರಸ್ತೆಯಲ್ಲಿರುವ ದೊಡ್ಡ ವೃತ್ತಕ್ಕೆ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ವೃತ್ತ  ಎಂದು ನಾಮಕರಣ ಮಾಡಿ ಪ್ರತಿವರ್ಷ ಅವರ ಸ್ಮರಣೆ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟನ ಅಧ್ಯಕ್ಷರಾದ ವೀರಭದ್ರಪ್ಪ ನಂದ್ಯಾಳ, ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕದ ಅಧ್ಯಕ್ಷ ಶೇಖರ ಇಂಗಳದಾಳ, ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರ, ಶಿವಶರಣ ಗಾಣದ ಕಣ್ಣಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಸಂಗಪ್ಪ ವಣಗೇರಿ, ಜಾಗತಿಕ ಲಿಂಗಾಯತ ಮಹಿಳಾ ಘಟಕದ ಅಧ್ಯಕ್ಷೆ ಅರ್ಚನಾ ಸಸಿಮಠ, ತಾಲೂಕ ಅಧ್ಯಕ್ಷೆ ಸೌಮ್ಯ ನಾಲ್ವಾಡ, ಟ್ರಸ್ಟಿನ ಸದಸ್ಯರಾದ ನಿರ್ಮಲಾ, ಶ್ರೀದೇವಿ, ವಿಶಾಲಾಕ್ಷಿ, ಗವೀಶ ಸಸಿಮಠ, ಪ್ರಭುಗೌಡ ಕಲ್ಮಂಗಿ, ಮಹೇಶ, ಬಾಪುಗೌಡ ಪಾಟೀಲ, ಗಾಳೆಪ್ಪ ಕಡೆಮನಿ ಮತ್ತಿತರರು ಇದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *