ಬೆಂಗಳೂರು:
ಇಲ್ಲಿನ ಜಯನಗರದ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಫೆಬ್ರವರಿ 28ರಂದು 12ನೇ ಶತಮಾನದ ವಚನಕಾರ್ತಿಯರ ಕುರಿತಾಗಿ ಒಂದು ದಿನದ ಕಮ್ಮಟವನ್ನು ಕರ್ನಾಟಕ ಲೇಖಕಿಯರ ಸಂಘ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಮ್ಮಟದಲ್ಲಿ ವಚನ ಸಾಹಿತ್ಯದಲ್ಲಿ ಹೆಚ್ಚು ಚರ್ಚೆಗೊಳಗಾಗದ ವಚನಕಾರ್ತಿಯರ ಕೊಡುಗೆಗಳನ್ನು ಪರಿಚಯಿಸುವುದು ಹಾಗೂ ಅವರ ಚಿಂತನೆಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಾಂದರ್ಭಿಕದ ಕುರಿತಾಗಿ ಚರ್ಚಿಸುವುದಾಗಿದೆ. ಹೊಸ ಪೀಳಿಗೆಗೆ ಈ ಪರಂಪರೆಯ ಅರಿವು ಮೂಡಿಸುವದು ಕಮ್ಮಟದ ಉದ್ಧೇಶವಾಗಿದೆ ಎಂದು ಕಾರ್ಯಕ್ರಮ ಸಂಯೋಜಕಿ ಮುಕ್ತಾ ಬಿ. ಕಾಗಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಎಂ.ಉಷಾ ಅವರು ಆಶಯ ನುಡಿಗಳನ್ನು ಆಡಲಿದ್ದಾರೆ. ಆರ್.ಸುನಂದಮ್ಮ, ಸುನಂದಾ ಬಸಪ್ಪ ಹಾಗೂ ಇಂದಿರಾ ಶಿವಣ್ಣ ಅವರು ವಚನಕಾರ್ತಿಯರ ಸಾಹಿತ್ಯ ಮತ್ತು ಚಿಂತನೆಗಳ ವಿವಿಧ ಆಯಾಮಗಳ ವಿಶ್ಲೇಷಣೆ ಮಾಡಲಿದ್ದಾರೆ.
ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ ಅವರು ಸಂಜೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಪತ್ರಕರ್ತೆ ಆರ್.ಪೂರ್ಣಿಮಾ ಅವರು ಮೂಖ್ಯ ಅತಿಥಿಯಾಗಿ ಭಾಗವಹಿಸುವರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
