ಬಸವ ಶಕ್ತಿ ಪಕ್ಷಾತೀತವಾಗಿ ಲಿಂಗಾಯತ ಅಸ್ಮಿತೆ ಗಟ್ಟಿಗೊಳಿಸಲಿ

ಹುಲಸೂರು

ಲಿಂಗಾಯತ ಸಮಾಜದ, ಧರ್ಮದ ಪರವಾಗಿ ರಾಜಕೀಯ ಪ್ರಜ್ಞೆ, ಪ್ರಭಾವ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ಅಯೋಜಿಸುತ್ತಿರುವುದು ಒಳ್ಳೆಯ ಪ್ರಯತ್ನ.

ಈ ಕಾರ್ಯಕ್ಕೆ ಬೇರೆ ಬೇರೆ ಜಿಲ್ಲೆ, ತಾಲೂಕುಗಳ ಬಸವ ಸಂಘಟನೆಗಳ ಉತ್ಸಾಹದ ಬೆಂಬಲ ಸಿಗುವುದರಲ್ಲಿ ಸಂಶಯವಿಲ್ಲ.

ಬಸವ ಶಕ್ತಿ ಶಿಬಿರಗಳ ರೂಪುರೇಷೆಯನ್ನು ಸರಿಯಾಗಿ ಸಿದ್ಧಪಡಿಸಿದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆ.

ಬೂತ್ ಮಟ್ಟದಲ್ಲಿ ಮತದಾರರನ್ನು ಸಂಪರ್ಕಿಸಲು ಹೊರಟಾಗ ನಾವು ಅವರಿಗೆ ಏನು ಹೇಳುತ್ತೇವೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ಬಸವ ಶಕ್ತಿ ಕಾರ್ಯಕ್ರಮದ ನರೇಟಿವ್ ಅಥವಾ ನಿರೂಪಣೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.

ಎದ್ದೇಳು ಕರ್ನಾಟಕದ ತಂಡದ ಅನುಭವ ಪಡೆದುಕೊಳ್ಳುವುದು ಒಳ್ಳೆಯದು. ಆದರೆ ಅವರ ಪರಿಸ್ಥಿತಿ ಭಿನ್ನವಾಗಿದೆ. ಅವರು ಸಂಘಟಿಸುತ್ತಿರುವ ದಲಿತ, ಅಲ್ಪ ಸಂಖ್ಯಾತ, ಪ್ರಗತಿಪರ ಸಂಘಟನೆಗಳು ಬಿಜೆಪಿಯನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತವೆ.

ಆದರೆ ಲಿಂಗಾಯತ ಮತದಾರರ ಒಂದು ದೊಡ್ಡ ಬಣ ರಾಜಕ್ಕೀಯವಾಗಿ ಬಿಜೆಪಿ ಜೊತೆಗಿದೆ, ಸೈದ್ಧಾಂತಿಕವಾಗಿ ಗೊಂದಲದಲ್ಲಿದೆ. ಅನೇಕ ಜನ ಯಾವುದೇ ತತ್ವ ಸಿದ್ದಾಂತಕ್ಕಿಂತಲೂ ಸ್ಥಳೀಯ ರಾಜಕಾರಣದ ಆಧಾರದ ಮೇಲೆಯೇ ಮತ ಹಾಕುತ್ತಾರೆ.

ಇಂದು ಲಿಂಗಾಯತ ಧರ್ಮದ ಚಳುವಳಿಯನ್ನ ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ಹೋರಾಟವೆಂದು ಬಿಂಬಿಸಲಾಗುತ್ತಿದೆ. ಲಿಂಗಾಯತ ಪರ ರಾಜಕಾರಣ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ರಾಜಕಾರಣವೆಂದು ಯಾರೂ ಸಂದೇಹಿಸದಂತೆ ನೋಡಿಕೊಳ್ಳಬೇಕು.

ಬಸವ ಶಕ್ತಿ ಪಕ್ಷಾತೀತವಾಗಿ ಲಿಂಗಾಯತ ಅಸ್ಮಿತೆ ಗಟ್ಟಿಗೊಳಿಸುವ ಪ್ರಯತ್ನವಾದರೆ ಮಾತ್ರ ಎಲ್ಲರ ವಿಶ್ವಾಸ ಗಳಿಸಬಹುದು.

ಲಿಂಗಾಯತರು ರಾಜಕೀಯವಾಗಿ ಹಂಚಿ ಹೋಗಿದ್ದಾರೆ. ಅವರವರ ಪಕ್ಷದಲ್ಲಿಯೇ ಇದ್ದುಕೊಂಡು ಅವರಿರುವಲ್ಲಿಯೇ ಲಿಂಗಾಯತ ಅಸ್ಮಿತೆ, ಪ್ರಗತಿಪರ ನಾಯಕತ್ವ ರೂಪಿಸುವ ಕೆಲಸ ಬಸವ ಶಕ್ತಿ ಶಿಬಿರ, ಸಮಾವೇಶಗಳು ಮಾಡಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
Leave a comment

Leave a Reply

Your email address will not be published. Required fields are marked *

ಬಸವ ಕೇಂದ್ರ, ಅಧ್ಯಕ್ಷ, ಹುಲಸೂರು ತಾಲೂಕು