ನಂಜನಗೂಡು:
ಇಲ್ಲಿನ ಮಹದೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಗಂಗಾಧರಸ್ವಾಮಿ ಮತ್ತು ಸುಜಾತ ಶರಣ ದಂಪತಿಗಳ ಮೊದಲ ಮಗಳಾದ ನಯನ ಮತ್ತು ಟಿ.ಎಸ್. ಗುರುಪ್ರಸಾದ ಅವರ ಉದರದಲ್ಲಿ ಜನಿಸಿದ ಮಗಳ ನಾಮಕರಣ ಕಾರ್ಯಕ್ರಮ ಲಿಂಗಾಯತ ಸಂಸ್ಕಾರದಂತೆ ಸರಳವಾಗಿ ನಡೆಯಿತು.

ಬಡಾವಣೆಯ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮ ಇಷ್ಟಲಿಂಗ ಪೂಜೆಯೊಂದಿಗೆ ನಡೆಯಿತು. ಮತ್ತು ಮಗುವಿಗೆ ಲಿಂಗಧಾರಣೆ ಮಾಡಿ ನಾಮಕರಣ ಮಾಡಲಾಯಿತು. ಗುಂಡ್ಲುಪೇಟೆ ತಾಲೂಕಿನ ಮೂಡಗೂರು ವಿರಕ್ತಮಠದ ಪೂಜ್ಯ ಇಮ್ಮಡಿ ಉದ್ದಾನ ಸ್ವಾಮಿಗಳು ಈ ಎಲ್ಲ ಸಂಸ್ಕಾರಗಳನ್ನು ನಡೆಸಿಕೊಟ್ಟರು.
ಮಗುವಿಗೆ “ವಚನದರ್ಪಣ” ಎಂಬ ಹೆಸರನ್ನು ಇಡಲಾಯಿತು. ವಿಶೇಷವೇನೆಂದರೆ ಇವರ ಮೊದಲನೇ ಮಗನಿಗೆ “ತತ್ವಪ್ರಸಾದ” ಎಂದು ನಾಮಕರಣ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸರಳವಾದ ಅರ್ಥಪೂರ್ಣವಾದ ಕಾರ್ಯಕ್ರಮದಲ್ಲಿ ವಿಶ್ವ ಬಸವಸೇನೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಬಸವಯೋಗೇಶ, ಹಂಗಳಪುರ ಸುರೇಶಣ್ಣ, ಜ್ಯೋತಿ ಅಕ್ಕ, ತಮಡಹಳ್ಳಿ ಶಿವಪಾದಪ್ಪ, ರವಿಶಂಕರ, ಹುಲ್ಲಹಳ್ಳಿ ಮಹೇಶ, ಮೇಘನಾ ಗುರುಪ್ರಸಾದ, ಸಾಧನ ಬಸವಣ್ಣ, ಶಂಭುದೇವನಪುರ ಪ್ರಭುಸ್ವಾಮಿ, ಗಿರಿಪ್ರಸಾದ, ಮಾಣಿಕ್ಯ, ಮೂಗೂರು ಗೀತಾ, ನೇತ್ರ, ಚಿತ್ರ, ವೇದ, ಪುಣ್ಯ ಸಂಬಂಧಿಕರು ಮತ್ತು ಕೆಲವು ಹಿತೈಷಿಗಳೊಂದಿಗೆ ನೆರವೇರಿಸಲಾಯಿತು.

ಶರಣು ಶರಣಾರ್ಥಿ ಗುರುಗಳೇ,ನಾಮಕರಣ ಕಾರ್ಯಕ್ರಮ ವಚನ ಗಾಯನ ಮೂಲಕ ನೀವು ನೆರವೇರಿಸುತ್ತಿರುವುದು ನನಗೆ ತುಂಬಾ ಸಂತಸವನ್ನುಂಟು ಮಾಡಿತು. ಭಕ್ತರ ಮನವೊಲಿಸಿ ಅವರನ್ನು ಬಸವ ಮಾರ್ಗದ ಕಡೆ ತರುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಿಮಗೆ ಸಹಸ್ರ ನಮನಗಳು.
ಭಕ್ತಿಯಿಂದ ಕೂಡಿದ ಸರಳ ಭಾಷೆಯಲ್ಲಿ, ಹುಯಿ ಹುಯೀ ಗಲಾಟೆ ಇಲ್ಲದೆ, ಇಷ್ಟಲಿಂಗ ಪೂಜೆಯೊಂದಿಗೆ ನಾಮಕರಣ ಕಾರ್ಯಕ್ರಮ. ಚೆನ್ನಾಗಿ ಸಾಗಿ ಬಂದಿದೆ
ಜೈ ಬಸವ
ಜೈ ಲಿಂಗಾಯತ ಧರ್ಮ