ಸಾಣೇಹಳ್ಳಿ:
ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಗೆ 2026 ಸೆಪ್ಟೆಂಬರ್ 24 ಕ್ಕೆ 75 ವರ್ಷ ತುಂಬಿ 76 ಕ್ಕೆ ಕಾಲಿಡಲಿದ್ದಾರೆ. ಪೂಜ್ಯರು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾಗಿ 2026 ಡಿಸೆಂಬರ್ 25 ಕ್ಕೆ 50 ವರ್ಷಗಳು ತುಂಬುತ್ತವೆ.
ಪೂಜ್ಯರ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸೇವಾಕಾರ್ಯಗಳ ಹಿನ್ನೆಲೆಯಲ್ಲಿ ‘ಅಭಿವಂದನಾ’ ಗ್ರಂಥ ಹೊರತರಬೇಕೆಂಬುದು ಅವರ ಅಭಿಮಾನಿ ಬಳಗದ ಆಶಯವಾಗಿದೆ.

ಪೂಜ್ಯರ ಸಾರ್ಥಕ 50 ವರ್ಷಗಳ ಸಾಧನೆಯಿಂದ ಪ್ರಯೋಜನ ಪಡೆದವರಿಗೆ ಲೆಕ್ಕವಿಲ್ಲ. ಪೂಜ್ಯರ ಪ್ರಭಾವಕ್ಕೆ ಒಳಗಾದವರು, ಅವರ ಅಂತರಂಗ-ಬಹಿರಂಗ ಬಲ್ಲವರು, ಉತ್ಪ್ರೇಕ್ಷೆಗೆ ಅವಕಾಶವಿಲ್ಲದಂತೆ ಪೂಜ್ಯರೊಂದಿಗಿನ ತಮ್ಮ ಒಡನಾಟದ ಅನುಭವಗಳನ್ನು ಸಂಕ್ಷಿಪ್ತವಾಗಿ ಒಂದೆರಡು ಪುಟಗಳಲ್ಲಿ ಬರೆದು ವಾಟ್ಸಾಪ್ ಇಲ್ಲವೇ ಇಮೇಲ್ ಮೂಲಕ ಜುಲೈ 30 ರೊಳಗೆ ಕಳಿಸಬೇಬೇಕೆಂದು ಸಂಪಾದನಾ ಮಂಡಳಿಯ ಪರವಾಗಿ ದ್ಯಾಮೇಶ್ ಹೆಚ್. ಎಸ್. ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.
ಬರಹ ಕಳಿಸಲು, E-mail:swamijiabhivandana@gmail.com
ವ್ಯಾಟ್ಸಪ್ ಸಂಖ್ಯೆ: 9449649850, 9663177254, 9741014115.
