ಅನುಭವ ಮಂಟಪಕ್ಕೆ ವೈದಿಕ ಹೆಸರು ಇಡುವ ಯಾವುದೇ ಆದೇಶವಿಲ್ಲ: ಅಧಿಕಾರಿ ಸ್ಪಷ್ಟನೆ

ಬಸವ ಮೀಡಿಯಾ
ಬಸವ ಮೀಡಿಯಾ

‘ಧರ್ಮ’, ‘ಅರ್ಥ’, ‘ಕಾಮ’, ‘ಮೋಕ್ಷ’ ಹೆಸರುಗಳನ್ನು ಇಡಲಾಗುತ್ತಿದೆ ಎನ್ನುವುದು ಗಾಳಿ ಸುದ್ದಿ

ಬೆಂಗಳೂರು

ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ನಾಲ್ಕು ಪ್ರವೇಶ ದ್ವಾರಗಳಿಗೆ ವೈದಿಕ ಹೆಸರುಗಳನ್ನು ಇಡುವ ಆದೇಶವನ್ನು ಡಿ.ಕೆ. ಶಿವಕುಮಾರ್ ಸರಕಾರ ಹೊರಡಿಸಿದೆ ಎನ್ನುವ ಮಾತು ಹರಿದಾಡುತ್ತಿದೆ.

ಈ ‘ಸುದ್ದಿ’ಯ ಪ್ರಕಾರ ಹಿಂದೂ ಧರ್ಮದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನು ನಾಲ್ಕು ದ್ವಾರಗಳಿಗೆ ಇಡಲಾಗುತ್ತಿದೆ.

ಇಂದು ಬಸವ ಮೀಡಿಯಾದ ಜೊತೆ ಮಾತನಾಡಿದ ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಇದು ಸುಳ್ಳು ಸುದ್ದಿ ಎಂದು ಖಂಡಿಸಿ ಆ ರೀತಿಯ ಯಾವುದೇ ಆದೇಶವನ್ನು ಕಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನೂತನ ಅನುಭವ ಮಂಟಪದ ದ್ವಾರಗಳಿಗೆ ಮೂಲ ಯೋಜನೆಯಂತೆಯೇ ಶರಣ ಪರಂಪರೆಯ ಪಂಚಾಚಾರದ ಹೆಸರುಗಳನ್ನೇ ಇಡಲಾಗುತ್ತಿದೆ ಎಂದು ಅವರು ಹೇಳಿದರು.

ಇದರ ಪ್ರಕಾರ ಅಲ್ಲಿನ ನಾಲ್ಕು ದ್ವಾರಗಳನ್ನು ‘ಸದಾಚಾರ’, ‘ಶಿವಾಚಾರ’, ‘ಗಣಾಚಾರ’, ‘ಭೃತ್ಯಾಚಾರ’ವೆಂದು ಕರೆಯಲಾಗುವುದು. ಮಧ್ಯದಲ್ಲಿರುವ ಇಷ್ಟಲಿಂಗಾಕಾರದ ಕಟ್ಟಡಕ್ಕೆ ‘ಲಿಂಗಾಚಾರ’ ಎಂದು ಹೆಸರಿಡಲಾಗುವುದು.

ಯಾರೋ ಅಧಿಕಾರಿಯೊಬ್ಬರು ವಿಷಯ ತಿಳಿದುಕೊಳ್ಳದೆ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದರಿಂದ ಈ ಗೊಂದಲ ಉಂಟಾಯಿತು ಎಂದು ಹೇಳಿದರು.

ಲಿಂಗಾಯತರ ಮೇಲೆ ನಡೆಯುತ್ತಿರುವ ಸಾಂಸ್ಕೃತಿಕ, ಸೈದ್ಧಾಂತಿಕ ದಾಳಿಯ ಹಿನ್ನಲೆಯಲ್ಲಿ ಅನುಭವ ಮಂಟಪದ ದ್ವಾರಗಳಿಗೆ ವೈದಿಕ ಹೆಸರು ಇಡಲಾಗುತ್ತಿದೆಯೆಂಬ ವದಂತಿ ಬಸವಾನುಯಾಯಿಗಳಲ್ಲಿ ತೀವ್ರವಾದ ಆತಂಕ ಮೂಡಿಸಿದೆ.

‘ಇದು ಸುಳ್ಳು ವದಂತಿ ಆದರೆ ಬಸವಾನುಯಾಯಿಗಳು ಜಾಗೃತರಾಗಿರುವುದು ಒಳ್ಳೆಯದು,’ ಎಂದು ಮೇಲೆ ಮಾಹಿತಿ ನೀಡಿದ ವಿಧಾನಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
6 Comments
  • ಫ.ಗು.ಹಳಕಟ್ಟಿ, ಹರ್ಡೇಕರ ಮಂಜಪ್ಪ ಭವನ ಅಂತ ಹೆಸರಿಸಬಹುದು

  • ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಬೇಡ ಕಾರಣ ಮತ್ತೆ ವೈದಿಕತೆ ನುಸಳಲಿದೆ. ಕಾರಣ ಅರಿವು, ಆಚಾರ, ಕಾಯಕ ಮತ್ತು ದಾಸೋಹ ಎನ್ನುವ ಹೆಸರಗಳನ್ನು ಇಡಿ. ಇದು ನಮ್ಮ ಕಳಕಳಿಯ ಮನವಿ. ಇಲ್ಲದಿದ್ದರೆ ಫ.ಗು.ಹಳಕಟ್ಟಿ, ಎಂ.ಎಂ. ಕಲಬುರ್ಗಿ, ಹರಡೇಕರ ಮಂಜಪ್ಪ ಮತ್ತು ರೆವರಂಡ ಉತ್ತಂಗಿ ಚನ್ನಪ್ಪನಂತಹ ಮಹಾನ ಚೇತನಗಳ ಹೆಸರಿಡಿ.

  • This time we should fiercely protect Basavanna’s Lingayat principles and teachings. We have been corrupted enough and stayed long way in being the conscionsnes that Basavanna guided us to.

  • ಸಂತೋಷದ ವಿಷಯ ಆದರ ವೈದಿಕರ ಒಳಗಿನ ಹುನ್ನಾರವನ್ನು ನಾವು ಜಾಗ್ರತೆಯಿಂದ ನಿಗಾ ವಹಿಸಲೇಬೇಕು

  • ನಾನು ಬಸವ ತತ್ತ್ವವನ್ನು ನಿಜ ಜೀವನದಲ್ಲಿ ಅಳವಡಿಸಲು ಇಚ್ಹಾ ಇದೇ ಶಿಬಿರ ದಲ್ಲಿ ನಾನು ನಿಮಗೆ ಕೈ ಜೋಡಿಮತೆನ

Leave a Reply

Your email address will not be published. Required fields are marked *