ಬಾಳೆಹೊನ್ನೂರು
ಲಿಂಗಾಯತ ಧರ್ಮದ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರದ ಬಗ್ಗೆ ಕ್ಷಮೆ ಕೇಳಿ ವಿವಾದವೆಬ್ಬಿಸಿದ್ದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಮ್ಮ ‘ತಪ್ಪೊಪ್ಪಿಗೆಯನ್ನು’ ಮತ್ತೆ ಸ್ಮರಿಸಿಕೊಂಡಿದ್ದಾರೆ.
ರಂಭಾಪುರಿ ಪೀಠದ 51 ಅಡಿ ರೇಣುಕಾಚಾರ್ಯರ ಪ್ರತಿಮೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಡಿಕೆಶಿ “ಎಂಟು ವರ್ಷದ ಹಿಂದೆ ಲಿಂಗಾಯತ ಧರ್ಮ ಹೋರಾಟ ನಡೆದ ಮೇಲೆ ಶ್ರೀಗಳ ಪಾದಕ್ಕೆ ನಮಸ್ಕಾರ ಮಾಡಿ ನಮ್ಮಿಂದ ತಪ್ಪಾಯಿತು ಕ್ಷಮಿಸಿ ಎಂದು ಪ್ರಾರ್ಥಿಸಿದ್ದೆ. ಇಡೀ ರಾಜ್ಯದಲ್ಲಿಯೇ ಇದರ ಬಗ್ಗೆ ಚರ್ಚೆ, ಟೀಕೆ, ಟಿಪ್ಪಣಿಯಾಯಿತು. ಆಗ ನಾನು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ, ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಎಂದಿದ್ದೆ” ಎಂದು ಹೇಳಿದರು
2018ರಲ್ಲಿ ಲಕ್ಷ್ಮೇಶ್ವರ ಮುಕ್ತಿಮಂದಿರದಲ್ಲಿ “ಧರ್ಮ ವಿಚಾರದಲ್ಲಿ ಸರ್ಕಾರ ಕೈಹಾಕಿದ್ದು ತಪ್ಪು” ಎಂದು ಶ್ರೀಗಳ ಪಾದಕ್ಕೆ ನಮಸ್ಕರಿಸಿ ಕ್ಷಮೆ ಯಾಚಿಸಿದ್ದರು. ಲಿಂಗಾಯತ ಸಮುದಾಯವನ್ನು ವಿಭಜಿಸಲು ಸರ್ಕಾರ ಕೈಹಾಕಿದ್ದೇ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಕಾರಣವಾಯಿತು ಎಂದು ಹೇಳಿದ್ದರು.
ರಂಭಾಪುರಿ ಪೀಠದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಬಿ. ವೈ. ರಾಘವೇಂದ್ರ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
