ಮುಳ್ಳಹಳ್ಳಿ ಚನ್ನವಿರೇಶ್ವರ ವಿರಕ್ತಮಠದಲ್ಲಿ ಬಸವ ಪುರಾಣ ಪ್ರವಚನ

ಪ್ರಕೃತಿಯೇ ಗುರು, ಗಗನವೇ ಲಿಂಗವು, ಜಗವೇ ಸಂಗಮನಾಥ

ಕುಂದಗೋಳ:

ತಾಲೂಕಿನ ಮುಳ್ಳಹಳ್ಳಿ ಗ್ರಾಮದ ಶ್ರೀ ಚನ್ನವಿರೇಶ್ವರ ವಿರಕ್ತಮಠದಲ್ಲಿ ಭಕ್ತರ ಆಧ್ಯಾತ್ಮಿಕ ಅಭಿವೃದ್ದಿಗಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.

ಮಠದ ಪೂಜ್ಯ ಶಿವಯೋಗೀಶ್ವರ ಸ್ವಾಮಿಗಳ ನೇತೃತ್ವದಲ್ಲಿ “ಬಸವ ಪುರಾಣ ಪ್ರವಚನ” ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಮತ್ತು ಸಾಮಾಜಿಕ ಸೇವಾ ಕಾರ್ಯಕ್ರಮಗಳು ವೈಭವದಿಂದ ಸಾಗಲಿವೆ.

ಹಂದಿಗುಂದದ ಪೂಜ್ಯ ಶಿವಾನಂದ ಸ್ವಾಮಿಗಳಿಂದ ನಿರಂತರ 21 ದಿನಗಳ ಕಾಲ ಬಸವ ಪುರಾಣ ಪ್ರವಚನ ನಡೆಯುತ್ತಿದ್ದು, ಭಕ್ತರಿಗೆ ಬಸವ ತತ್ವ, ವಚನಗಳ ಅರ್ಥ ಮತ್ತು ಮಾನವೀಯ ಮೌಲ್ಯಗಳ ಅನುಭಾವ ನೀಡುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಶರಣ ಶರಣೆಯರು ಪ್ರತಿದಿನದ ಬಸವ ಪುರಾಣ ಪ್ರವಚನ ಆಲಿಸುತ್ತಿದ್ದಾರೆ.

ಬುಧವಾರ ಬಸವಣ್ಣನವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಬಂದ ಪ್ರಸಂಗವನ್ನು ಶಿವಾನಂದ ಸ್ವಾಮೀಜಿ ವಿವರಿಸಿದರು.

ಬಸವಣ್ಣನವರು ಬಾಗೇವಾಡಿಯಿಂದ ಕೂಡಲಸಂಗಮಕ್ಕೆ ಸಂಗಮನಾಥನ ನ್ನು ಕಾಣಲು ಬಂದಾಗ ಅವರಿಗೆ ಈ ಪ್ರಕೃತಿಯೇ ಗುರು, ಗಗನವೇ ಲಿಂಗವು, ಜಗವೇ ಸಂಗಮನಾಥ ಆದ್ದರಿಂದ ಈ ಜಗತ್ತಿನಲ್ಲಿ ಮೈಲಿಗೆ ಅನ್ನುವುದು ಇಲ್ಲವೇ ಇಲ್ಲ ಎನ್ನುವುದು ಅರಿವಾಯಿತು.

ಆ ಸಂದೇಶವನ್ನೇ ಬಸವಣ್ಣನವರು ಒಂದು ಅದ್ಭುತವಾದ ವಚನದಲ್ಲಿ ನೀಡಿದರು:

“ನೆಲವೊಂದೆ ಹೊಲೆಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ”

ಈ ಮಹೋತ್ಸವದ ಅಂಗವಾಗಿ ಮಠದ ಹೊಸ ಮಹಾದ್ವಾರದ ಲೋಕಾರ್ಪಣೆ, ಪಂಚ ಪೂಜ್ಯರ ಗದ್ದುಗೆಗಳ ಪ್ರತಿಷ್ಠಾಪನೆ ನಡೆಯಲಿದೆ. ಭಕ್ತರ ಸಹಕಾರದಿಂದ ಉಚಿತ ಸಾಮೂಹಿಕ ವಿವಾಹಗಳು, ತುಲಾಭಾರ ಸೇವೆ ಹಾಗೂ ಮಾತೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳು ಸಹ ಆಯೋಜಿಸಲಾಗಿದೆ.

ಧಾರ್ಮಿಕ ಚೈತನ್ಯ ವೃದ್ಧಿಗಾಗಿ ಲಿಂಗದೀಕ್ಷೆ ಕಾರ್ಯಕ್ರಮವೂ ಏರ್ಪಡಿಸಲಾಗಿದ್ದು, ಭಕ್ತರು ಮುಂದಿನ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಠದ ವತಿಯಿಂದ ಮನವಿ ಮಾಡಲಾಗಿದೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *