ಲಿಂಗೈಕ್ಯ ಶಿವಶರಣಪ್ಪ ಕಲಬುರ್ಗಿ ಅವರ ನಿಜಾಚರಣೆ ಅಂತ್ಯಸಂಸ್ಕಾರ

ಕಲಬುರ್ಗಿ:

ಬಸವ ಕೇಂದ್ರದ ಅಧ್ಯಕ್ಷರು, ಬಸವ ತತ್ವನಿಷ್ಠರು, ದಾಸೋಹಿಗಳಾಗಿದ್ದ ಶಿವಶರಣಪ್ಪ ಕಲಬುರ್ಗಿ ಅವರು ಬುಧವಾರ ಬೆಳಿಗ್ಗೆ ಲಿಂಗೈಕ್ಯರಾದರು.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಏಳು ಜನ ಪುತ್ರಿಯರನ್ನು ಅಗಲಿದರು. ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಕಲಬುರ್ಗಿ ಸ್ವಸ್ತಿಕ್ ನಗರದ ಅವರ ಮನೆಯಲ್ಲಿ ಅಂದು ಮಧ್ಯಾಹ್ನ 1 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ 5 ಗಂಟೆಗೆ ಅವರ ಸ್ವಗ್ರಾಮ ಫರಹತಾಬಾದನಲ್ಲಿ ಲಿಂಗಾಯತ ಧರ್ಮ ವಿಧಿವಿಧಾನಗಳಂತೆ ಅಂತ್ಯ ಸಂಸ್ಕಾರ ನಡೆಯಿತು.

ಸೋಮಣ್ಣ ನಡಕಟ್ಟಿ, ರವೀಂದ್ರ ಶಾಬಾದಿ, ಪ್ರಭುಲಿಂಗ ಮಹಾಗಾಂವಕರ, ಸತೀಶ ಸಜ್ಜನ, ಡಾ. ವೀರಣ್ಣ ದಂಡೆ, ಜಯಶ್ರೀ ದಂಡೆ, ಡಾ. ಶಿವರಂಜನ ಸತ್ಯಂಪೇಟೆ, ಶಿವಶರಣಪ್ಪ ದೇಗಾಂವ, ಸತೀಶ ಸಜ್ಜನ ಸೇರಿದಂತೆ, ಅಪಾರ ಬಸವ ಬಳಗ, ಬಂಧು ಬಾಂಧವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *