ಪರುಷಕಟ್ಟೆಯಿಂದ ಶರಣೆ ದಾನಮ್ಮ ಜ್ಯೋತಿ ಯಾತ್ರೆಗೆ ಇಂದು ಚಾಲನೆ

ಸಂಗಮೇಶ ಜವಾದಿ
ಸಂಗಮೇಶ ಜವಾದಿ

ಶರಣ ಪರಂಪರೆಯಲ್ಲಿ ಅತಿ ಹೆಚ್ಚು ಲಿಂಗಧಾರಣೆ ಮಾಡಿದ ಕೀರ್ತಿ ದಾನಮ್ಮ ಶರಣೆ ಅವರಿಗೆ ಸಲ್ಲುತ್ತದೆ

ಬಸವಕಲ್ಯಾಣ:

ಶರಣೆ ದಾನಮ್ಮನವರ ತಪೋಕ್ಷೇತ್ರ ಕಲ್ಯಾಣ ಕದಳಿ ಗುಣತೀರ್ಥವಾಡಿ-ಬಸವಕಲ್ಯಾಣದಲ್ಲಿ ಏಪ್ರಿಲ್ 04 ಮತ್ತು 05, 2026ರಂದು ಶರಣೆ ದಾನಮ್ಮ ಉತ್ಸವ, 4ನೇ ಶರಣ ಸಮಾಗಮ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಾಗೂ ವೈಚಾರಿಕ ನೆಲೆಗಟ್ಟಿನಲ್ಲಿ ನಡೆಯಲಿದೆ ಎಂದು ಗುಣತೀರ್ಥವಾಡಿ ಮಾಹಾಮನೆ ಪೀಠಾಧ್ಯಕ್ಷ ಪೂಜ್ಯ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಗುಣತೀರ್ಥವಾಡಿ ಮಾಹಾಮನೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ದಾನಮ್ಮ ಉತ್ಸವ, 4ನೇ ಶರಣ ಸಮಾಗಮ ಕಾರ್ಯಕ್ರಮದ ಉದ್ಘಾಟನೆಗಾಗಿ ದಾನಮ್ಮ ಜ್ಯೋತಿಯನ್ನು ಹೊತ್ತಿಸಿಕೊಂಡು ಬರಲಾಗುತ್ತಿದೆ.

ಮಾರ್ಚ್ 7, 2026 ರಂದು ಬೆಳಿಗ್ಗೆ 6:30ಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿ ಬಸವ ಸ್ತೋತ್ರ ತ್ರಿವಿಧಿ ಓದಿ 15ನೇ ಜ್ಯೋತಿಯಾತ್ರೆಗೆ ಚಾಲನೆ ನೀಡಲಾಗುತ್ತದೆ.ಬಸವಣ್ಣನವರ ಕಲ್ಯಾಣದಲ್ಲಿ ನಡೆದ ಸಮಾನತೆ ಚಳುವಳಿಯಲ್ಲಿ ಪಾಲ್ಗೊಂಡು ಸ್ತ್ರೀ ಸಮಾನತೆ, ಮೌಢ್ಯ ನಿರ್ಮೂಲನೆ ಮತ್ತು ದೀನ-ದಲಿತರ, ನಿರ್ಗತಿಕರ ಉದ್ಧಾರಕ್ಕಾಗಿ ಹಗಲಿರಳು ಶ್ರಮಿಸಿದ ದಾನಮ್ಮ ತಾಯಿ ಸಮಾಜಕ್ಕೆ ಕಂಟಕವಾಗಿದ್ದ ಮೌಢ್ಯವನ್ನು ಹೋಗಲಾಡಿಸುವಲ್ಲಿ ಶ್ರಮವಹಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಅಂತೆಯೇ ಶರಣ ಪರಂಪರೆಯಲ್ಲಿ ಅತಿ ಹೆಚ್ಚು ಲಿಂಗಧಾರಣೆ ಮಾಡಿದ ಕೀರ್ತಿ ದಾನಮ್ಮ ಶರಣೆಗೆ ಸಲ್ಲುತ್ತದೆ. ಇಂತಹ ಶಿವಶರಣೆ ಧಾನಮ್ಮ ತಾಯಿಯವರ ಉತ್ಸವ ಬಸವಕಲ್ಯಾಣದ ಗುಣತೀರ್ಥವಾಡಿ ಮಾಹಾಮನೆಯಲ್ಲಿ ಮಾಡುತ್ತಿರುವುದು ಬಸವ ಭಕ್ತರಿಗೆ ಎಲ್ಲಿಲ್ಲದ ಸಂತಸ ತಂದಿದೆ.

ಜೊತೆಗೆ ಈ ಕಾರ್ಯಕ್ರಮವು ಬಸವಾಭಿಮಾನಿಗಳಿಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಶರಣ ಬಂಧುಗಳು, ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜ್ಯೋತಿಯಾತ್ರೆಯಲ್ಲಿ ಪಾಲ್ಗೊಂಡು, ಶುಭ ಹಾರೈಸಬೇಕೆಂದು ಸ್ವಾಮೀಜಿ ವಿನಂತಿಸಿದ್ದಾರೆ.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *