ಪಥಿಕಸಿರಿ ಪ್ರಶಸ್ತಿ ಪ್ರದಾನ
ಹುಲಸೂರ:
ಪ್ರತಿಯೊಂದು ಧರ್ಮಗಳು ಒಳ್ಳೆಯ ವಿಚಾರ ಬೋಧಿಸುತ್ತವೆ. ಇಸ್ಲಾಂ ಧರ್ಮದ ಪ್ರವಾದಿ ಮೊಹ್ಮದ ಪೈಗಂಬರ್ ಅವರು ಶಾಂತಿ, ಸೌಹಾರ್ದ ಬೆಸೆಯುವ ಕಾರ್ಯ ಮಾಡಿದ್ದಾರೆ. ರಂಜಾನ್ ತಿಂಗಳು ಶಾಂತಿಯ ಪ್ರತೀಕ.
ಈ ಸಂದರ್ಭದ ಇಫ್ತಾರ ಕೂಟದಿಂದ ಎಲ್ಲರೂ ಒಂದಾಗಿ ಸಹೋದರತೆ, ಸಮಾನತೆ, ಭಾತೃತ್ವ, ಸಮಾನತೆ, ಮನುಷ್ಯಪ್ರಜ್ಞೆ ಬೆಳೆಸುವುದಾಗಿದೆ ಎಂದು ಹಿರಿಯ ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ಹೇಳಿದರು.

ತಾಲೂಕಿನ ಬೇಲೂರು ಉರಿಲಿಂಗಪೆದ್ದಿ ಶಾಖಾಮಠದಲ್ಲಿ ಏರ್ಪಡಿಸಿದ ಸಾಮೂಹಿಕ ಇಫ್ತಾರ ಕೂಟ ಮತ್ತು ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಇಂತಹ ಕೆಲಸ ಮಠಮಾನ್ಯ ಇತರ ಧರ್ಮೀಯ ಸಂಸ್ಥೆಗಳು ಮಾಡಬೇಕು. ಉರಿಲಿಂಗಪೆದ್ದಿ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮಿಗಳು ಜಾತ್ಯಾತೀತವಾಗಿ ಎಲ್ಲರನ್ನೂ ಒಟ್ಟಾಗಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇಂತವರಿಗೆ ಬೆಂಬಲ ಸಹಕಾರ ಜನರು, ಸಮುದಾಯ, ಸರಕಾರ ನೀಡಬೇಕಾಗಿದೆ ಎಂದರು.

ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ನಮ್ಮ ಮಠ ಗರೀಬರ ಮಠ, ನಮ್ಮ ಕೈಲಾದ ಕೆಲಸ ಮಾಡಿದ್ದೇವೆ. ಎಲ್ಲರ ಜೊತೆ ಸೇರಿ ಬದುಕಬೇಕಾಗಿದೆ. ಬಸವಾದಿ ಶರಣರು, ಉರಿಲಿಂಗಪೆದ್ದಿ ಶರಣರು ಕೂಡಾ ಇದೇ ಕಾರ್ಯ ಮಾಡುತ್ತಾ ಬಂದವರು. ಕೋಮುದ್ವೇಷ ಬೆಳೆಸದೇ ಕೋಮು ಸಾಮರಸ್ಯ ಬೆಳೆಸುವ ಉದ್ದೇಶವಾಗಿದೆ ಎಂದರು.
ಇಸ್ಲಾಂ ಧರ್ಮದವರು ಬಸವಣ್ಣ ಮೊದಲಾದ ಶರಣರ, ಸಂತ, ಸೂಫಿಗಳು ಹೇಳಿದ ತತ್ವ, ಸಿದ್ಧಾಂತ ಅಳವಡಿಸಿಕೊಂಡು ಸಾಗಿದರೆ ಮಾನವೀಯತೆ ಬೆಳೆಯಲು ಸಾಧ್ಯ. ಮನುಷ್ಯ ಹುಟ್ಟಿದ ಮೇಲೆ ಸಾವು ಖಚಿತ ಆ ಬದುಕಿನ ಅವಧಿಯಲ್ಲಿ ಸೌಹಾರ್ದತೆ ಬೆಸೆಯುವುದು ಅಗತ್ಯವೆಂದು ಮಾತನಾಡಿ ದರು.

ಇದೇ ಸಂದರ್ಭದಲ್ಲಿ ಪಿಎಸ್ಐ ಚಂದ್ರಕಾತ ನಾರಾಯಣಪುರೆ, ಹಿಂದುಳಿದ ವರ್ಗಗಳ ಇಲಾಖೆ ಭಾಲ್ಕಿ ಕಲ್ಯಾಣಾಧಿಕಾರಿ ರವೀಂದ್ರ ಮೇತ್ರೆ, ನೊಬೆಲ್ ಪಬ್ಲಿಕ್ ಸ್ಕೂಲ್ ಸಂಸ್ಥಾಪಕ ಅಬ್ದುಲ್ ಖಲೀಲ ಗೊಬರೆ ಅವರಿಗೆ ಸೌಹಾರ್ದ ಪಥಿಕ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರಾದ ಪಿಎಸ್ಐ ಚಂದ್ರಕಾಂತ ನಾಯಾರಣಪುರ ಮಾತನಾಡಿ, ಇಂತಹ ಕೂಟದಿಂದ ಸಾಮರಸ್ಯ ತರಲು ಸಾಧ್ಯ. ನಮ್ಮ ಸೇವೆ ಗುರುತಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಮಹಾಲಿಂಗ ದೇವರು ಸ್ವಾಗತಿಸಿದರು. ಮಹಮ್ಮದ್ ಮುಸ್ತಾನ ನಿರೂಪಿಸಿದರು. ಸಂಜುಕುಮಾರ ಖೇಲೆ ವಂದಿಸಿದರು.
ವಿಜಯಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು ಬೀದರ, ಅಕ್ಷರ ದಾಸೋಹದ ಸಂಜುಕುಮಾರ್ ಕಾಂಗೆ, ಸಂಜೀವ ಜಾದವ, ನಾಗನಾಥ ಚಾಮ್ಮಲ್ಲೆ, ಡಾ. ಜಬಿಯಾ, ಎಂ.ಡಿ. ಮುಸ್ತಾಪ, ನೂರ ಸರ್, ಇಮಾಮುದ್ದಿನ, ಡಾ. ಬಾಲಕೃಷ್ಣ ರಾಠೋಡ, ಅನ್ನಪೂರ್ಣ ಅಂಬಾರಾಯ ಸಂಗೋಳಕರ, ನಿತ್ಯಾನಂದ ಮಂಠಾಳಕರ್, ಗೌತಮ ವಾಗ್ಮರೆ, ಶಿವಕುಮಾರ ಕಾಂಗೆ , ಅಶೋಕ ಗುಪ್ತಾ, ನಾಗಪ್ಪ ನಿಣ್ಣೆ, ಭಿಮಶಾ ವಾಘಮಾರೆ, ದೀಪಕ ಸಿಂಗೆ, ವಿಜಯ ಲಕ್ಷ್ಮಿ ರಾಧು, ಸರಸ್ವತಿ ಗಾಯಕವಾಡ, ಅನುಸಯ್ಯಾ ಮಂಠಾಳಕರ್, ಸಿದ್ದು ಕೋಣೆಗಳುನ್, ಈಶ್ವರ ತಡೋಳಾ, ಕಲ್ಲಪ್ಪ ಬೇಲೂರು ಶ್ರೀಪತಿ ಸಖರಾಮ, ಮೊದಲಾದವರಿದ್ದರು.
