ಮಕ್ಕಳ ಶಿಕ್ಷಣಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ ಕೆಎಲ್ಇ ಸಪ್ತರ್ಷಿ ಡಾ. ಕಟ್ಟಿಮನಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ :

ಮಕ್ಕಳಿಗೆ ಕೈಗೆಟುಕುವ ಶಿಕ್ಷಣ ಸಿಗಬೇಕೆಂದು, ಕೆಎಲ್ಇ ಸಂಸ್ಥೆ ಬೆಳೆಯಲಿಕ್ಕೆ ಕಾರಣರಾದವರು ಎಚ್.ಎಫ್. ಕಟ್ಟಿಮನಿಯವರು. 1910ರಲ್ಲಿ ಮೆಟ್ರಿಕ್ ಪರೀಕ್ಷೆ ಪಾಸಾಗಿ ಮಂದೆ ಎಲ್.ಎಲ್. ಬಿ ಪದವಿ ಪಡೆದು, ಮುಂಬೈ ವಿಧಾನ ಪರಿಷತ್ ಸದಸ್ಯರಾಗಿದ್ದರು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ತಮ್ಮ ಬದುಕನ್ನೆ ತ್ಯಾಗ ಮಾಡಿದವರು ಡಾ. ಎಚ್.ಎಸ್. ಕಟ್ಟಿಮನಿಯವರು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನೆಡೆದ 2787 ಶಿವಾನುಭವದ ಸಾನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ನದಿಗಳು ನೆಲವನ್ನು ಸೀಳಿ ಹರಿದು ಜನರಿಗೆ ನೀರು ಕೊಡುತ್ತವೆ. ಗಿಡಗಳು ನೆಲದ ಸಾರವನ್ನು ಹೀರಿ ಸೊಂಪಾಗಿ ಬೆಳೆದು ಹಣ್ಣು ಕೊಡುತ್ತವೆ. ಆಕಳು ಹುಲ್ಲು ತಿಂದು ಹಾಲು ಕೊಡುತ್ತದೆ. ಇವೆಲ್ಲವೂ ಪರೋಪಕಾರ ಮಾಡಿದಂತೆ, ಡಾ. ಕಟ್ಟಿಮನಿಯವರು ಮಕ್ಕಳ ಶಿಕ್ಷಣಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದರು.

ಇದು ಸಾಮಾನ್ಯ ಕಾಯವಲ್ಲ. ಪ್ರಸಾದ ಕಾಯ ಎಂಬ ತತ್ವ ಅವರದಾಗಿತ್ತು. ಸಮಾಜಸೇವೆ, ಪರೋಪಕಾರ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದವರು. ಅವರ ಜೀವನವೇ ಒಂದು ಆದರ್ಶ ಜೀವನವಾಗಿತ್ತು ಎಂದು ಆಶೀರ್ವಚನ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಡಾ .ಎಸ್. ಎಫ್. ಕಟ್ಟಿಮನಿ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರೋಹಿಣಿ ದಾನಿ ಅವರು ಡಾ. ಕಟ್ಟಿಮನಿಯವರ ಆದರ್ಶ ಮತ್ತು ಸಾಧನೆ ಕುರಿತು ಮಾತನಾಡುತ್ತಾ, ಕೆಎಲ್ಇ ಸಂಸ್ಥೆಯ ಸ್ಥಾಪನೆಗೆ ಸಪ್ತರ್ಷಿಗಳಲ್ಲಿ ಒಬ್ಬರಾದ ಡಾ. ಕಟ್ಟಿಮನಿಯವರ ಬದುಕು ಎಲ್ಲರಿಗೂ ಆದರ್ಶ. ಆದ್ದರಿಂದ 2007 ರಲ್ಲಿ ಎಸ್. ಎಫ್. ಕಟ್ಟಿಮನಿ ಪ್ರತಿಷ್ಠಾನ ಧಾರವಾಡದಲ್ಲಿ ಸ್ಥಾಪಿಸಲಾಯಿತು. ಶಿಕ್ಷಕರಿಗೆ ಅದು ಮಾರ್ಗದರ್ಶನ ಮಾಡುತ್ತ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದೆ ಎಂದರು.

ಡಾ. ಕಟ್ಟಿಮನಿಯವರು ನಾಗರಪಂಚಮಿ ದಿನ ಹುಟ್ಟಿರುವುದರಿಂದ ಪುಸ್ತಕ ಪಂಚಮಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಗೂ ಶಿಕ್ಷಣ ಸಂಪದ ಪುಸ್ತಕವು ಪ್ರೌಢ ಶಿಕ್ಷಣದ ಶಿಕ್ಷಕರಿಗೆ ಮಾರ್ಗದರ್ಶಿಯಾಗಿ ಪ್ರಕಟಗೊಳ್ಳುತ್ತಿದೆ. ಶಿಕ್ಷಣಕ್ಕಾಗಿ , ಸಮಾಜಕ್ಕಾಗಿ ಅವಿರತ ಪರಿಶ್ರಮಿಸಿದ್ದರಿಂದ ಇಂದು, ಶಿಕ್ಷಣ ಸಂಸ್ಥೆ ಬೆಳೆಯಲಿಕ್ಕೆ ಕಾರಣರಾದವರು ಕಟ್ಟಿಮನಿಯವರು ಎಂದರು.

ಶಿಕ್ಷಕರನ್ನು ಪೂಜಿಸಿದರೆ, ಗೌರವಿಸಿದರೆ ಅಲ್ಲಿ ಸಂಸ್ಕೃತಿ ಮತ್ತು ಉತ್ತಮ ಶಿಕ್ಷಣ ಎಂಬ ಉದ್ದೇಶದಿಂದ, ಗದಗ ಜಿಲ್ಲೆಗೆ ಪ್ರತಿ ವಿಷಯದಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳಿಗೆ,  ಕಲಿಸಿದ ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಸನ್ಮಾನಿತ ಶಿಕ್ಷಕರಾದ ಎಫ್. ಎಂ. ಚಕಾರದ ತಾವು ಸಾಗಿ ಬಂದ ಸಾಧನೆಯ ಪರಿಶ್ರಮದ ಅನಿಸಿಕೆಯನ್ನು ಹಂಚಿಕೊಂಡರು.

ಗದಗ ಜಿಲ್ಲೆಗೆ ಪ್ರತಿ ವಿಷಯದಲ್ಲಿಯೂ ಹೆಚ್ಚಿಗೆ ಅಂಕ ಪಡೆದ ವಿದ್ಯಾರ್ಥಿಗಳ ಶಾಲೆ, ಲಕ್ಷ್ಮೇಶ್ವರದ ಎಚ್ ಟಿ ಪಿ ಎಂ.ಬಿ. ಪ್ರೌಢಶಾಲೆ. ಈ ಶಾಲೆಯ ಶಿಕ್ಷಕರಾದ ನೀಲವ್ವ ಧರೆಣ್ಣವರ, ಎಫ್.ಎಂ. ಚಕಾರದ, ಎಂ.ವಾಯ್. ಶಿವಣ್ಣನವರ, ಪಿ.ಎಚ್. ಎಕ್ಕಿಕೊಪ್ಪ, ಆರ್.ಎಸ್. ಶೆಟ್ಟರ್, ಎಸ್.ಜೆ. ಗುಡ್ಡಿಮಠ, ಎಸ್.ಎಂ. ಮುಳಗುಂದ ಹಾಗೂ ಸೈಂಟ್ ಜಾನ್ ಪ್ರೌಢಶಾಲೆಯ ವಿದ್ಯಾರ್ಥಿನಿ  ಜೆಸಿಕಾ ಅಪೇಕ್ಷಿತ ಇವರನ್ನು ಶಿವಾನುಭವದ ವೇದಿಕೆಯಲ್ಲಿ, ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯ ಮಠ, ಗದಗ ಇವರ ದತ್ತಿದಾನದ ಅಡಿಯಲ್ಲಿ, ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.

ಎಸ್.ಎಸ್. ಶಿವನಗೌಡ್ರ, ರಾಜು ಕುರುಡಗಿ, ಲಿಂಗರಾಜ ಗುಡಿಮನಿ ಹಾಗೂ ಎಚ್. ಬಿ. ರಡ್ಡೇರ ಅವರು ಉಪಸ್ಥಿತರಿದ್ದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ಸೇವೆ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಭುವನೇಶ್ವರಿ ಅಗ್ಗದ ಹಾಗೂ ವಚನ ಚಿಂತನವನ್ನು ಅಮೃತಾ ಕರಕಿಕಟ್ಟಿ ನಡೆಸಿದರು.

ದಾಸೋಹ ಸೇವೆಯನ್ನು ಸದಾಶಿವಯ್ಯ ಸಂಗನಬಸಯ್ಯ ಮದರಿಮಠ ಹಾಗೂ ಸುವರ್ಣ ಸದಾಶಿವಯ್ಯ ಮದರಿಮಠ, ಗದಗ ಇವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರ್ಮನ್ ಐ. ಬಿ. ಬೆನಕೊಪ್ಪ ಸ್ವಾಗತಿಸಿದರು ಹಾಗೂ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *