ಬೀದರ್: ನಿಜಗುಣಾನಂದ ಸ್ವಾಮೀಜಿ ಪ್ರವಚನ ನಿಷೇಧಿಸಲು ಬ್ರಾಹ್ಮಣ ಮಹಾಸಭಾ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಇಂದಿನಿಂದ ಬಸವಕೇಂದ್ರ ಬೆಳ್ಳಿ ಹಬ್ಬದ “ಭವ್ಯ ಭಾರತದ ಬಸವಣ್ಣ” ಪ್ರವಚನ

ಬೀದರ್

ನಗರದ ಬಿವಿಬಿ ಮಹಾವಿದ್ಯಾಲಯದ ಆವರಣದಲ್ಲಿ ಇಂದಿನಿಂದ ಶುರುವಾಗಲಿರುವ ಪೂಜ್ಯ ನಿಜಗುಣಾನಂದ ಸ್ವಾಮೀಜಿಯವರ ಪ್ರವಚನವನ್ನು ನಿಷೇಧಿಸಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಅಖಿಲ ಭಾರತ ಬ್ರಾಹ್ಮಣ ಮಹಾ ಸಂಘ ಒತ್ತಾಯಿಸಿವೆ.

ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಸಂಘಟನೆಯ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ಕನ್ನಡ ಪ್ರಭಾ ವರದಿ ಮಾಡಿದೆ.

ನಿಜಗುಣಾನಂದ ಸ್ವಾಮೀಜಿ ಬ್ರಾಹ್ಮಣ ಸಮುದಾಯದ, ಹಿಂದೂ ದೇವರುಗಳ ವಿರುದ್ಧ ವಿವಾದಾತ್ಮಕ ಪದಗಳನ್ನು ಸಾಮಾನ್ಯವಾಗಿ ಬಳಸುವುದರಿಂದ ಮುನ್ನಚ್ಚರಿಕೆ ಕೈಗೊಳ್ಳಬೇಕೆಂದು ಮನವಿಯಲ್ಲಿ ದೂರಲಾಗಿದೆ.

ಕಲ್ಯಾಣ ನಾಡಿನ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಬಾರದಂತೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಮಸ್ತ ಬ್ರಾಹ್ಮಣ ಸಮುದಾಯದ ಪರವಾಗಿ ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಅಧ್ಯಕ್ಷರಾದ ರಮೇಶ ಕುಲಕರ್ಣಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವೆಂಕಟೇಶ ಕುಲಕರ್ಣಿ ವಿನಂತಿಸಿದ್ದಾರೆ.

ನಗರದ ಬಸವ ಕೇಂದ್ರದ ವತಿಯಿಂದ ಮಾರ್ಚ್ 15ರಿಂದ ಏಪ್ರಿಲ್ 13ರ ವರಗೆ ಬಸವಕೇಂದ್ರದ ಬೆಳ್ಳಿ ಮಹೋತ್ಸವದ ಪ್ರಯುಕ್ತ “ಭವ್ಯ ಭಾರತದ ಬಸವಣ್ಣ” ಪ್ರವಚನವನ್ನು ಆಯೋಜಿಸಲಾಗಿದೆ.

ಪ್ರವಚನಕ್ಕೆ ಬೆಂಬಲ

ನಿಜಗುಣಾನಂದ ಸ್ವಾಮೀಜಿ ನಡೆಸಿಕೊಡಲಿರುವ ‘ಭವ್ಯ ಭಾರತದ ಬಸವಣ್ಣ’ ಪ್ರವಚನವನ್ನು ಯಶಸ್ವಿಗೊಳಿಸಲು ಒಕ್ಕೊರಲಿನ ಪ್ರಯತ್ನ ಮಾಡಬೇಕೆಂದು ನಗರದ ಬಸವಕೇಂದ್ರದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯ. ಶರಣ ಸಂಸ್ಕೃತಿ ಉಳಿಸಿ ಬೆಳೆಸಲು ಪ್ರವಚನ ಸೂಕ್ತ ವೇದಿಕೆ ಎಂದರು.

ಬಸವಕೇಂದ್ರದ ಬೆಳ್ಳಿ ಮಹೋತ್ಸವದ ಅಂಗವಾಗಿ ತಿಂಗಳಿಡಿ ಪ್ರವಚನ ಹಮ್ಮಿಕೊಂಡಿರುವುದು ಶ್ಲಾಘನಾರ್ಹ ಕೆಲಸ. ನಿಜಗುಣಾನಂದ ಸ್ವಾಮೀಜಿ ಅತ್ಯಂತ ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಹೇಳುತ್ತಾರೆ. ಜಿಲ್ಲೆಯ ಪ್ರಗತಿಪರ ಚಿಂತಕರು, ವಿಚಾರವಾದಿಗಳು ಪ್ರವಚನಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಇದೇ ವೇಳೆ ಭಿತ್ತಿಪತ್ರ, ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಶರಣ ಸಂಸ್ಕೃತಿ ಪಸರಿಸಲು ಬಸವ ಕೇಂದ್ರ ಸಾಕಷ್ಟು ಶ್ರಮಿಸಿದೆ ಎಂದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ef59kmZXDgwBDbpNqmONQ3

Share This Article
11 Comments
  • ಗಂಟೆ ಬಾರಿಸುವ ಸಂಸ್ಕೃತಿ ಮುಂದುವರಿಯಬೇಕೆನ್ನುವವರು

    • ನಿಜಗುಣಾನಂದ ಸ್ವಾಮಿಗಳ ಪ್ರವಚನಕ್ಕೆ ಹಿಂದೂಗಳು ಬಂದು ಕುಳಿತು ಸಂಪೂರ್ಣ ಕೇಳಲಿ ಆಕ್ಷೇಪ ಇದ್ದರೆ ಪ್ರಶ್ನೆ ಮಾಡಲಿ. ಅದು ಬಿಟ್ಟು ಹೊರಗೆ ನಿಂತು ಸುಳ್ಳು ಹೇಳೋದು

      • ನಿಜಗುಣಾನಂದ ಸ್ವಾಮಿಯವರ ಪ್ರವಚನಗಳನ್ನು ನಿಷೇಧಿಸಬೇಕೆನ್ನುವವರು ದೇಶ ದ್ರೋಹಿಗಳು. ಜನತೆಯನ್ನು ಮೌಢ್ಯಕ್ಕೆ ತಳ್ಳಿ ತಟ್ಟೆ ತುಂಬಾ ಹಣ ಮಾಡಿಕೊಳ್ಳಲು ಬಯಸುವ ಮೂರ್ಖರು ಮಾತ್ರ ಸ್ಪ್ರವಾಮೀಜಿಯವರ ವಚನಗಳನ್ನು ನಿಷೇಧಿಸಬೇಕೆಂಬ ಬೇಡಿಕೆ ಇಡಬಹುದು.

    • ನಮ್ಮನ್ನು ನಾವು ಹಿಯ್ಯಾಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ.
      ಮೂಡನಂಬಿಕೆಯ ಹಿಂದಿನ ನಂಬಿಕೆ
      ನಂಬಿಕೆಯ ಹಿಂದಿನ ಆಚರಣೆ
      ಆಚರಣೆಯ ಹಿಂದಿನ ಅರ್ಥವನ್ನು ಬಿಡಿಸಿ ಹೇಳಬೇಕೆ ಹೊರತು ಸಾರಾಸಗಟ್ಟಾಗಿ ಇದೊಂದು ಅರ್ಥಹೀನ ಎಂದು ತೀರ್ಮಾನಕ್ಕೆ ಬರುವುದು ಅದನ್ನು ನಾಲ್ಕು ಜನಕ್ಕೆ ಹರಡುವುದು ಯಾವ ಹಂತದ ಸುಧಾರಣೆಯಾಗುತ್ತದೆ
      ಗಾಂಧಿವಾದಿ ಮೂಡನಂಬಿಕೆಯ ವಿರೋಧಿ ಹೆಚ್ ನರಸಿಂಹಯ್ಯನವರು ಆಚರಣೆಗಳು ನಂಬಿಕೆಗಳಾಗಿ ನಂಬಿಕೆಗಳು ಮೂಢನಂಬಿಕೆಗಳಾದ ಬಗೆಯನ್ನು ಅರ್ಥವತ್ತಾಗಿ ವಿವರಿಸಿದ್ದಾರೆ ಆ ರೀತಿಯಲ್ಲಿ ನಿಜಗುಣಾನಂದ ಶ್ರೀಗಳು ಅರ್ಥವತ್ತಾಗಿ ವಿಶ್ಲೇಷಿಸಲಿ
      ನರಸಿಂಹಯ್ಯನವರು ಸಣ್ಣ ಕಥೆಯನ್ನು ಹೇಳುತ್ತಾರೆ
      ಆ ಒಂದು ಮನೆಗೆ ಭೇಟಿ ನೀಡಿದಾಗ ಅಲ್ಲಿ ಬೇರೆಯವರ ಮನೆಯಿಂದ ಬೆಕ್ಕನ್ನ ತಂದು ಬೆಕ್ಕನ್ನ ಮಂಚದ ಕಾಲಿಗೆ ಕಟ್ಟಿ ಶ್ರಾದ್ಧವನ್ನು ಮಾಡುತ್ತಿದ್ದರಂತೆ. ಹೀಗೇಕೆ ಮಾಡುತ್ತಿರುವಿರಿ ಬೆಕ್ಕನ್ನೇಕೆ ಕಟ್ಟಿರುವಿರಿ ಎಂದು ಕೇಳಿದಾಗ ನಮ್ಮಪ್ಪ ನಮ್ಮ ತಾತ ನ ಶ್ರದ್ಧ ಮಾಡುವಾಗ ಹೀಗೆಯೇ ಬೆಕ್ಕನ್ನು ಕಟ್ಟಿ ಹಾಕಿದ್ದರು ಹಾಗಾಗಿ ನಾನು ಹೀಗೆ ಮಾಡುತ್ತಿರುವೆ ಎಂದು ಹೇಳಿದಾಗ
      ಹಾಗೆಲ್ಲ ಮನೆಯಲ್ಲಿ ಬೆಕ್ಕನ್ನ ಸಾಕಿದ್ದರು ಅದು ಬಹುಜನವಿದ್ದಾಗ ತನ್ನ ಸ್ವಾಭಾವಿಕತೆಯನ್ನು ಹೊರತುಪಡಿಸಿ ವರ್ತಿಸಬಹುದು ಹಾಗೂ ಅಡ್ಡಾದಿಡ್ಡಿ ಬರಬಹುದೆಂಬ ಕಾರಣಕ್ಕೆ ಕಟ್ಟಿಹಾಕಿದ್ದಾರೆ ಹಾಗಾಗಿ ನೀನು ಈಗ ಬೆಕ್ಕನ್ನು ಮಂಚದ ಕಾಲಿಗೆ ಕಟ್ಟಿ ತಿಥಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರೆಂತೆ
      ಹೀಗೆ ಹೀಗೆ ವೈಚಾರಿಕತೆಯನ್ನು ಮೂಡಿಸುವ ಭಾಷಣಗಳನ್ನು ಶ್ರೀಗಳು ಮಾಡಲಿ ಅದು ಅದನ್ನು ಬಿಟ್ಟು ಮತ್ತೊಬ್ಬರ ಮನೋಭಾವನೆಗೆ ಧಕ್ಕೆ ಬರುವಂತೆ ಮಾತನಾಡುವುದರಲ್ಲಿ ಅರ್ಥವಿಲ್ಲ
      ಹಾಗೇನಾದರೂ ಬೌದ್ಧತೆಯನ್ನು ಅನುಸರಿಸುವವರು ಸಹ ಇವರ ಮಾತುಗಳನ್ನ ಕೇಳಿ ಮೌಡ್ಯವನ್ಕು ತೊರೆಯಬೇಕು.
      ಬಸವಣ್ಣನವರು ಹೇಳಿದಂತೆ ಇವ ನಾರವಾಹಿ ಇವ ನಾರವಾ ಎಂದು ಭೇದವನ್ನ ಎಣಿಸದೆ ನಮ್ಮವನೆಂದು ಅಪ್ಪಿಕೊಳ್ಳಬೇಕು. ಸೂಪರ್ ಆಚರಿಸುವ ಆಚರಣೆಗಳನ್ನು ಗೌರವಿಸಿ ಒಪ್ಪಿಕೊಳ್ಳಬೇಕು
      ಏನಂತೀರಾ

  • So intolerant!
    Brahmins suffering from such anti Lingayat
    feelings ?
    12th century saints must have suffered a lot !

    • ತುಂಬ ತುಂಬಾ ವಿಚಾರ ಪೂರಿತ ವಿಷಯ ಜನರಿಗೆ ಸತ್ಯ ಕಹಿ ಆಗಿರುತ್ತದೆ ಸುಳ್ಳು ಹಾಗೂ ದೇವರ ಬಗ್ಗೆ ಇರುವ ಮೂಢ ನಂಬಿಕೆ ವಿಷಯಗಳೇ ಸಿಹಿ ಆಗಿವೆ ಇದು ಎಲ್ಲಾ ಕಾಲಗಳಲ್ಲಿ ಇದ್ದರೂ ಸಹ ಇತ್ತೀಚಿಗೆ ಪೂಜೆ ಪುನಸ್ಕಾರ ಗಳ ಹೆಸರಿನಲ್ಲಿ ಹಲವಾರು ದೇವಾಲಯ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ ಇದು ಈ ದೇಶದ ಜನಗಳ ದುರಂತ ಎಲ್ಲಾ ಮತಗಳಲ್ಲಿ ಕೂಡ ಇಂತಹ ದುರಂತ ಕಾಣುತ್ತಿರುವುದು ಇನ್ನೂ ಜಗತ್ತು ಅಪಾಯಕ್ಕೆ ಸಿಲುಕುವ ಮುನ್ಸೂಚನೆ ಆಗಿದೆ ಇದಕ್ಕೆ ಬಸವಾದಿ ಪ್ರಮಥರ ತತ್ವ ಸಿದ್ಧಾಂತಗಳು ಅಗತ್ಯ ಯಾರು ಏನೇ ಹೇಳಿದರೂ ಸತ್ಯ ಸತ್ಯವೇ ಆಗಿರುತ್ತದೆ ಸತ್ಯವೇ ದೇವರು ಎನ್ನುವುದು ತಿಳಿಸಲೇಬೇಕು ಇದೇ ಸತ್ಯ ಧರ್ಮ. From Tippuvardhan journalist and film director bangalore 9663861669 ko

  • ರಾಜ, ಮಹಾರಾಜ, ರಾಜ ಗುರುಗಳು ಕಾಲದಲ್ಲಿ, ಮೂಲ ಆದಾಯ: ಜನರಿಂದ ಕರ ವಸೂಲಿ ಮಾಡುವ ಪದ್ಧತಿ ಇತ್ತು. ಆಗ ರಾಜನೇ ಮಂದಿರಗಳನ್ನು ಕಟ್ಟಿಸುತ್ತಿದರು. ಮಂದಿರಗಳಿಂದ ಬಂದ ಆದಾಯ ತೆರಿಗೆ ರೂಪದಲ್ಲೂ ರಾಜರೇ ಸಂಗ್ರಹಿಸುತ್ತಿದ್ದರು. ಕರ ಹೆಚ್ಚಾದರೆ ಜನ ರೋ ಚಿಗೆದ್ದರು ಎಂದು ಮಿತಿಯಲ್ಲಿ ಇರಿಸುತ್ತಾ, ಮಂದಿರದ ಆದಾಯಗಳನ್ನು ಪರೋಕ್ಷವಾಗಿ ಪಡೆಯುತ್ತಿದ್ದರು. Yallaಜನ ನಿರಂತರವಾಗಿ ಗುಡಿಗುಂಡರಗಳಿಗೆ ದಕ್ಷಿಣೆ, ದಾನ, ದೇಣಿಗೆ, ಇತ್ಯಾದಿ ಗೌರವದಿಂದ ಸಲ್ಲಿಸುತ್ತಿದರು. ಈಗ ರಾಜರು ಇಲ್ಲ, ರಾಜ ಮಹಾರಾಜ ಇಲ್ಲ, ರಾಜಗುರುಗಳoತೂ ಮೊದಲೇ ಇಲ್ಲ. ಅದಕ್ಕೆ ಗುಡಿ ಗುಂಡಾರದಲ್ಲಿಯ ಆದಾಯ ಕೇವಲ ಪೂಜಾರಿ ವರ್ಗಕ್ಕೆ ಸೇರುವುದರಿಂದ, ನಮ್ಮ ಬಸವ ಬಳಗದವರ ಸ್ವ ಅರ್ಜನೆಯ ಈ ಅಭಿಪ್ರಾಯಕ್ಕೆ ಈಗಿನ ಜನ ಒಪ್ಪುತ್ತಿಲ್ಲ. ಅವರಿಗೆ ಇನ್ನೊಬ್ಬರ ದುಡಿತದ, ಶ್ರಮದ ಹಣದ ಮೇಲೆಯೇ ಕಣ್ಣು. ಅದೂ ಇಲ್ಲ ಸಲ್ಲದ ದೇವರ ಭಯಗಳನ್ನು ಹುಟ್ಟಿಸಿ, ಸುಲಿಗೆ ಮಾಡುವ ಕೆಲಸಕ್ಕೆ ಜನ ಬೆಂಬಲವಿರುದಿಲ್ಲ. ಸಮಾಜದಲ್ಲಿ ತಮಗೆ ಬೇಕಾದ ಆಚರಣೆಗಳನ್ನು ಹೇರಿ ಮೇಲ್ವರ್ಗದವರು ಸುಖವಾಗಿ ಬದುಕುವ ಅವಕಾಶ ದಕ್ಕಿಸಿದ್ದಾರೆ. ಅದಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಲ್ಲಿ ನಮ್ಮದೊಂದು ಅರಿಕೆ. ಅವರು ಸರಿಯಾಗಿ ಲೆಕ್ಕ, ಪತ್ರ ಬರೆದು, ಅವರ ಖರ್ಚು ವೆಚ್ಚಗಳನ್ನು ಆಸ್ತಿ, ಹೊಣೆಗಾರಿಕೆ ತಖತೆಗಳನ್ನು, ಕಾಲ ಕಾಲಕ್ಕೆ ಬ್ಯಾಂಕಿನಲ್ಲಿ ಹಣ ನಿರ್ವಹಣೆ ಮಾಡುವಂತೆ. ಅಂದರೆ ಪ್ರತಿವಾರ ನಗದು, ಬ್ಯಾಂಕಿನಲ್ಲಿ ಹಣ ಹಳ್ಳಿಯಿಂದ ದಿಲ್ಲಿಯವರೆಗೆ, ರಿಸರ್ವ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಲ್ಲಾ ವ್ಯವಹಾರಗಳ ವಿವರ ನೀಡಬೇಕಾಗಿ ಮನವಿ. ಘನ kendra ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿಕೆ. ಅಲ್ಲು ಸಾರ್ವಜನಿಕರ ಹಣ ಸಂಗ್ರಹವಾಗುತ್ತಿದೆ. ಅದಕ್ಕೆ ಸರಿಯಾದ ಲೆಕ್ಕ ಪತ್ರ ಬರೆಯಬೇಕ್ಕಲವೇ? ಈಗ ಕೇವಲ ಪುರೋಹಿತ ವರ್ಗದ ಅಥವಾ ಟ್ರಸ್ಟಿನ ಆದಾಯವಾಗಿ, ಜನರ ಬೆವರಿನ ದುಡ್ಡು ಜನರಿಗೆ ಏನಾದ್ರೂ ಸೌಲಭ್ಯ ಸಿಗುತ್ತದೆಯೋ ? ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ. ಶರಣು ಶರಣಾರ್ಥಿ.

  • “ನಮಗೆ ಸಂವಿಧಾನದ ಪ್ರಮಾಣಪತ್ರ ಬೇಕಾಗಿಲ್ಲ “ಎಂದು ಆರ್ ಎಸ್ ಎಸ್ ನ ಚೆಡ್ಡೀಮುಖಂಡನು ಹೇಳಿದಾಗ ಇಡೀದೇಶಕ್ಕೆ ಅವಹೇಳನ ಆಗಲಿಲ್ಲವೆ?. ಈ ವಿಷಯವನ್ನು ಏಕೆ ಮರೆಮಾಚುವುದು? ಇವರ ಕುಟಿಲತನದ ನಡೆ ಎಲ್ಲರಿಗೂ ತಿಳಿದಿದೆ.

  • ಈ ಸ್ವಾಮಿಜಿ , ತಾನು ನಂಬಿರುವ ವಚನ ಸಾಹಿತ್ಯ ಆಧರಿಸಿ , ತಮ್ಮ ಧರ್ಮ ಪ್ರಚಾರ ಮಾಡುತ್ತಾರೆ .

    ವಿರೋಧಿಸುವವರು ,ಖುರಾನ , ಬೈಬಲ್ , ಭೌಧರ ಗ್ರಂಥ ವಿರೋಧಿಸಲಿ ನೋಡೋಣ.

    ಮುಸ್ಲಿಂರ. ಖುರಾನ , ಹಾಗು ಕ್ರಿಸ್ತರ ಬೈಬಲ್ ನಲ್ಲಿ ಸಹ ಮೂರ್ತಿ ಪೂಜೆ ಇಲ್ಲ .

    ಈ ಸ್ವಾಮಿಜಿ ಮಾಡುತ್ತಿರುವದು , ಅವರ ಧರ್ಮದ ಪ್ರವಚನ . ಬೇರೆಯವರಿಗೇನು ತೊಂದರೆ ?
    ಎಲ್ಲರೂ ಅವರವರ ಧರ್ಮ ಪಾಲಿಸಲಿ. ಇನ್ನೊಬ್ಬರಿಗೆ ತೊಂದರೆ ಕೊಡುವದು ಸರಿಯಲ್ಲ. Please…

Leave a Reply

Your email address will not be published. Required fields are marked *