ಕಲಬುರಗಿ :
ಹನ್ನೆರಡನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರು ಹೇಳಿಕೊಟ್ಟ ಕಾಯಕ ಸೂತ್ರವು ಸರ್ವಕಾಲಕ್ಕೂ ಸತ್ಯ ಮತ್ತು ಸರ್ವರಿಗೂ ಸ್ಫೂರ್ತಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು.
ಕಲಬುರಗಿ ಜಿಲ್ಲಾ ರಾಷ್ಟ್ರೀಯ ಬಸವದಳ, ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕ ಮಹಿಳಾ ಗಣದಿಂದ ಆಯೋಜಿಸಿದ ಪೂಜ್ಯ ಮಾತೆ ಮಹಾದೇವಿ ಅವರ ವರ್ಧಂತಿ ಮತ್ತು ಸಂಸ್ಮರಣ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಮಂಡಿಸಿದ ಹಿರಿಯ ಶರಣ ಸಾಹಿತಿ ಡಾ. ಶಿವರಾಜ ಪಾಟೀಲ ಅವರು, ಮಹಾಪುರುಷರ ಜಯಂತಿಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು. ಅಣ್ಣ ಬಸವಣ್ಣನವರ ಸಮಗ್ರ ವಚನ ಸಾಹಿತ್ಯವನ್ನು ಮನೆ ಮನೆಗೂ ಮುಟ್ಟಿಸಿದ ಕೀರ್ತಿ ಮಾತೇ ಮಹಾದೇವಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಲೀಲಾ ಡೆಂಗಿ ಅವರು, ಲಿಂಗದೀಕ್ಷೆಯಿಂದ ವ್ಯಕ್ತಿಯ ವ್ಯಕ್ತಿತ್ವವನ್ನು ಅನಾವರಣಗೊಳ್ಳುತ್ತದೆ ಎಂದು ಹೇಳಿದರು.
ಆಶಯ ಭಾಷಣವನ್ನು ಮಾಡಿದ ಜಗದೇವಿ ಚೆಟ್ಟಿ ಲಿಂಗಾಯತ ಅವರು, ಬಸವಣ್ಣನವರ ವಚನ ಸಾಹಿತ್ಯವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಇನ್ನೊಬ್ಬರಿಗೆ ಅರ್ಥ ಮಾಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಮಾಜಸೇವಕಿ ಶ್ರೀದೇವಿ ಪಾಟೀಲ, ನಾಗೇಂದ್ರ ಎಲ್ದೆ, ರವಿಶಂಕರ ವಿಭೂತಿ ಅವರು ಮಾತನಾಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕುಂಬಳಗೋಡ ಬೆಂಗಳೂರಿನ ಪೂಜ್ಯ ಚನ್ನಬಸವಾನಂದ ಶ್ರೀಗಳು ವಹಿಸಸಿದ್ದರು. ಜ್ಯೋತಿ ಕಟಾಳೆ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಬಸವಶ್ರೀ ಕಟಾಳೆ ಸ್ವಾಗತಿಸಿದರು. ಸಂಗೀತ ಚೀಲಾ ಪ್ರಾರ್ಥನೆ ನಡೆಸಿಕೊಟ್ಟರು.
ಕವಿತಾ ಲೊಡನ, ಮಲ್ಲಮ್ಮ ಪಾಟೀಲ, ಶ್ರೀದೇವಿ ಏರಿ, ಲಲಿತಾ ಜೀವಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆರಂಭಕ್ಕೆ ಮತ್ತು ಅಂತ್ಯಕ್ಕೆ ಮಾತೆ ಮಾಹಾದೇವಿಯವರ ಶರಣ ಸಾಹಿತ್ಯದ ಮತ್ತು ವಚನ ಸಾಹಿತ್ಯದ ಗೀತೆಗಳನ್ನು ಹೇಳಲಾಯಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
