ಬಸವಕಲ್ಯಾಣ :
ಇಲ್ಲಿನ ಮಹಾತ್ಮಾ ಬಸವೇಶ್ವರ ದೇವಸ್ಥಾನ ಸಮಿತಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 15 ನಿರ್ದೇಶಕರ ಸ್ಥಾನಗಳಲ್ಲಿ ಅನೀಲಕುಮಾರ ರಗಟೆ ಅವರ ತಂಡಕ್ಕೆ ಭರ್ಜರಿ ಗೆಲುವು ಲಭಿಸಿದೆ.
ದೇವಸ್ಥಾನ ಸಮಿತಿಯಲ್ಲಿ ಒಟ್ಟು 434 ಸದಸ್ಯರಿದ್ದು, ಇವರಲ್ಲಿ 15 ಜನರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಒಬ್ಬ ಮಹಿಳೆಯ ಆಯ್ಕೆ ಕಡ್ಡಾಯವಾಗಿತ್ತು. ಚುನಾವಣೆಯಲ್ಲಿ ಎರಡು ತಂಡಗಳಿಂದ ತಲಾ 15 ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿ 10 ಮಂದಿ ಸೇರಿದಂತೆ ಒಟ್ಟು 40 ಮಂದಿ ಕಣದಲ್ಲಿದ್ದರು. 15ರಂದು ಚುನಾವಣೆ ನಡೆದಿತ್ತು.
ಆಯ್ಕೆಯಾದ ಅಭ್ಯರ್ಥಿಗಳು:
ಬಸವರಾಜ ಕೊರಕೆ (233 ಮತಗಳು), ಪುಷ್ಪಾವತಿ ರಾಜಕುಮಾರ ಮಾಮಾ (231), ಅನೀಲಕುಮಾರ ರಗಟೆ (222), ಈರಣ್ಣಾ ನಾಗಣ್ಣ ಹಲಶೆಟ್ಟೆ (220), ಭದ್ರಿನಾಥ ಶಿವರಾಜ ಪಾಟೀಲ (209), ಮಲ್ಲಿಕಾರ್ಜುನ ಕುರಕೊಟೆ (206), ಸುನೀಲ ಶಿವಶರಣಪ್ಪ ರಾಯವಾಡೆ (202), ವಿವೇಕಾನಂದ ಹೊದಲೂರೆ (196), ಬಸವರಾಜ ಬಾಲಕಿಲೆ (195), ಬಸವರಾಜ ತೊಂಡಾರೆ (192), ಮಲ್ಲಿಕಾರ್ಜುನ ಚಿರಡೆ (177), ಸುನೀಲಕುಮಾರ ಹೊಳಕುಂದೆ (174), ಜಗನ್ನಾಥ (172), ರಾಜಕುಮಾರ ಹೊಳಕುಂದೆ (158), ಅಶೋಕ ನಾಗರಾಳೆ (148).

ಈ ಪೈಕಿ 10 ಮಂದಿ ಅನೀಲಕುಮಾರ ರಗಟೆ ತಂಡದವರು ಹಾಗೂ 5 ಮಂದಿ ಬಸವರಾಜ ಕೊರಕೆ ತಂಡದವರು ಚುನಾಯಿತರಾಗಿದ್ದಾರೆ.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
