ಗೆದ್ದನಂತರ ಲಿಂಗಾಯತರ ಮರೆಯುವ ರಾಜಕಾರಣಿಗಳು: ಬಸವರಾಜ ಮಾವಿನಹಳ್ಳಿ

(ಬಸವ ಶಕ್ತಿ ಕಾರ್ಯಕ್ರಮದ ಬಗ್ಗೆ ವಿಜಯನಗರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಮಾವಿನಹಳ್ಳಿ ಬಸವ ಮೀಡಿಯಾದ ಸುಜಾತ ಶೆಟ್ಟರ್ ಅವರ ಜೊತೆ ಸಂವಾದದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.)

ವಿಜಯನಗರ

ರಾಜಕೀಯ ಪ್ರಜ್ಞೆ ಖಂಡಿತ ಅವಶ್ಯವಾಗಿದೆ. ಗೆಲುವಿಗಾಗಿ ಲಿಂಗಾಯತರ ಮತಗಳನ್ನು ಬಳಸುವ ರಾಜಕಾರಣಿಗಳು, ಚುನಾವಣೆ ಗೆದ್ದನಂತರ ಲಿಂಗಾಯತರನ್ನ ಮರೆತುಬಿಡುತ್ತಾರೆ. ಹೀಗಾಗಿ ಬಸವಶಕ್ತಿ ಅಭಿಯಾನ ಮಾಡುವುದು ಅವಶ್ಯವಾಗಿದೆ.

ಈ ನಿಟ್ಟಿನಲ್ಲಿ ಬಸವ ಅನುಯಾಯಿಗಳಿಗೆ ಮೊದಲು ಧರ್ಮಜಾಗೃತಿ ನಂತರ ರಾಜಕೀಯವಾಗಿ ತರಬೇತಿ ನೀಡಬೇಕು. ಇಷ್ಟಲಿಂಗ ಪೂಜೆಯ ಮಹತ್ವವನ್ನು ಪ್ರತಿ ಹಳ್ಳಿಗಳಲ್ಲಿ ತಿಳಿಸಬೇಕು ಮತ್ತು ಇದು ನಿರಂತರವಾಗಿ ಕಾರ್ಯವಾಗಿ ಎಲ್ಲರೂ ಕೈಗೂಡುತ್ತಿರಬೇಕು.

ಬಸವ ಶಕ್ತಿ ಸಮಾವೇಶವು ಪಕ್ಷಾತೀತವಾಗಿ ನಡೆಯಬೇಕು. ಮತ್ತು ಅವಶ್ಯವಾಗಿರುವ ವಿಷಯಗಳ ಬಗ್ಗೆ ಚರ್ಚೆಗಳಾಗಲಿ. ಸ್ವಾಮೀಜಿಗಳನ್ನಾಗಲಿ, ರಾಜಕೀಯ ವ್ಯಕ್ತಿಗಳನ್ನಾಗಲಿ ಅವಹೆಳನ ಮಾಡಬಾರದು. ಜಾಗೃತಿ ಕಾರ್ಯಕ್ರಮವನ್ನು ಬಹಳ ಜಾಗರುಕತೆಯಿಂದ ಆಯೋಜಿಸಬೇಕು.

ನಮ್ಮಲ್ಲಿ ಬಸವಪರ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ನಾನು ಸಂಪೂರ್ಣವಾಗಿ ಬೆಂಬಲಿಸುತ್ತೆನೆ. ಬಸವಶಕ್ತಿ ಸಮಾವೇಶದ ಎಲ್ಲಾ ಕಾರ್ಯಗಳಿಗೆ ನಮ್ಮ ಸಹಕಾರ ಮತ್ತು ಸಹಮತವಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *