ಲಿಂಗಾಯತರು ಮಾಡಬೇಕಾದ ತುರ್ತು ಕಾರ್ಯಗಳು

ಹಿಂದೂ ಹೆಸರಿನಲ್ಲಿ ಲಿಂಗಾಯತರು ಹರಿದು ಹಂಚಿಹೋಗುವುದು  ಹೆಚ್ಚಾಗುತ್ತದೆ

1. ಲಿಂಗಾಯತದ ಎಲ್ಲ 101 ಉಪಪಂಗಡದವರೇ ಶೇ. 80% ಕ್ಕೂ ಹೆಚ್ಚಿದ್ದಾರೆ. ಇವರೆಲ್ಲ ಮೀಸಲಾತಿ ಸೌಲಭ್ಯಕ್ಕಾಗಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರು ಲಿಂಗಾಯತರಾಗಿ ಗುರುತಿಸುವಂತೆ ಅಗತ್ಯ ಪ್ರಯತ್ನಗಳನ್ನು ಜಾರಿ ಮಾಡಬೇಕು.

2. ಲಿಂಗಾಯತದ ಎಲ್ಲ 101 ಉಪಪಂಗಡದವರಲ್ಲಿ ಮುಂದುವರೆದ 4-5 ಪಂಗಡದವರನ್ನು ಬಿಟ್ಟರೆ, ಉಳಿದ ಯಾರಲ್ಲೂ ತಾವು “ಲಿಂಗಾಯತ” ಮನಸ್ಥಿತಿಯೇ ಇಲ್ಲ. ಲಿಂಗಾಯತರೆಂದು ಹೇಳಿಕೊಳ್ಳುವುದೇ ಇಲ್ಲ. ಇದಕ್ಕೆ ಲಿಂಗಾಯತದ ತಿಳುವಳಿಕೆ ಕೊರತೆಯೇ ಕಾರಣ. ಇದಕ್ಕೆ ಬೃಹತ್ ಪ್ರಮಾಣದ ಪ್ರಯತ್ನ ಆಗಬೇಕು. ” ಲಿಂಗಾಯತ ತತ್ವದ ಅರಿವು ನೀಡುವ ದೊಡ್ಡ ಆಂದೋಲನವೇ ಆಗಬೇಕು.

3. ಶಿವಾನುಭವಗಳು, ಅರಿವು-ಆಚಾರ-ಅನುಭವ, ಉಪನ್ಯಾಸಗಳು ಮಾತ್ರ ಸಾಲದು. ಲಿಂಗಾಯತರು, ಲಿಂಗಾಯತ ಸಂಘಸಂಸ್ಥೆಗಳು ಮನೆ ಮನೆಗೆ ಹೋಗಿ ಲಿಂಗಾಯತ ಧರ್ಮದ ತಿಳುವಳಿಕೆ ನೀಡಲೇಬೇಕು. ಧರ್ಮ ಪ್ರಸಾರ ಮಾಡಲೇಬೇಕು.

4. ಇಬ್ಬರು ಸಹೋದರಿಯರು ಒಂದು ತಾಲ್ಲೂಕಿನಲ್ಲಿ ನೂರಾರು ಸಾವಿರಾರು ಜನರನ್ನು ಸ್ವಯಂ ಪ್ರೇರಣೆಯಿಂದ ” ಈಶ್ವರೀಯ ವಿಶ್ವವಿದ್ಯಾಲಯದ ಅನುಯಾಯಿಗಳು ಆಗುವಂತೆ ಉತ್ತೇಜಿಸುತ್ತಾರೆ. ಮನೆಮನೆಗೆ ಹೋಗಿ ತಮ್ಮ ಧಾರ್ಮಿಕ ತಿಳುವಳಿಕೆ ನೀಡುತ್ತಾರೆ. ಇಬ್ಬರಿಂದ ಆಗುವ ಕೆಲಸವನ್ನು  ನೂರಾರು ಜನರು ಇರುವ ನಮಗೂ ಸಾಧ್ಯವಾಗುತ್ತದೆ. ಧರ್ಮ ಪ್ರಸಾರದ ನಿಟ್ಟಿನಲ್ಲಿ ಈ ರೀತಿ ಕೆಲಸ ಮಾಡಲೇಬೇಕು.

5. ಇಲ್ಲವಾದರೆ ಈಗ ರಾಮ-ಕೃಷ್ಣರ ಹೆಸರಲ್ಲಿ, ಹನುಮಮಾಲೆ ಹೆಸರಿನಲ್ಲಿ, ಅಯ್ಯಪ್ಪ ಸ್ವಾಮಿ ಮಾಲೆ ಹೆಸರಿನಲ್ಲಿ, ಓಂಶಾಂತಿ ಹೆಸರಿನಲ್ಲಿ, ಹಿಂದೂ ಹೆಸರಿನಲ್ಲಿ ಲಿಂಗಾಯತರು ಹರಿದು ಹಂಚಿಹೋಗುವುದು  ಹೆಚ್ಚಾಗುತ್ತದೆ.

6. ವಚನದರ್ಶನ ಗ್ರಂಥ, ಶರಣಶಕ್ತಿ ಚಲನಚಿತ್ರ , ವೀಣಾ ಬನ್ನಂಜೆ, ಕನ್ನೇರಿ ಸ್ವಾಮಿ ಇತ್ಯಾದಿ ಲಿಂಗಾಯತ ವಿರೋಧಿ ಶಕ್ತಿಗಳ ಆರ್ಭಟದಲ್ಲಿ ಲಿಂಗಾಯತ ಧರ್ಮ ಸೊರಗುತ್ತ ಹೋಗುವುದರಲ್ಲಿ ಅನುಮಾನವೇ ಇಲ್ಲ. ಬಸವತತ್ವದ ಮತ್ತು ಲಿಂಗಾಯತ ಧರ್ಮದ ಪ್ರಸಾರವನ್ನು ಮನೆಮನೆಗೆ ತಲುಪಿಸುವುದೇ ಇದಕ್ಕೆ ಸರಿಯಾದ ಮದ್ದಾಗಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
1 Comment
  • ಉತ್ತಮವಾದ ಸಲಹೆ ನಿಜಕ್ಕೂ ಈ‌ ವಿಚಾರ ಇಂದು ಕ್ರಿಯಾ ರೂಪಕ್ಕೆ ಬರುವುದು ಅತ್ಯವಶ್ಯಕವಾಗಿದೆ. ಇಂದು ಕೇವಲ ಮಾತುಗಳಾಗದೇ ಕ್ರೈಸ್ತ ಮಿಷನರಿ ತರಹ ಕಾರ್ಯವಾಗಬೇಕು. ಇದ್ದೇ ನಾಲ್ಕಾರು ದೊಡ್ಡ ಲಿಂಗಾಯತ ಸಮುದಾಯದ ಎಲ್ಲಾ ರಾಜಕೀಯ ಮುಖಂಡರು, ಮಠಾಧೀಶರು, ಮಾತಾಜಿ ಗಳು, ಸಂಘ ಸಂಸ್ಥೆಯ
    ಮುಖಂಡರು ಒಟ್ಟಾಗಿ ಈ ಕಾರ್ಯ ಮಾಡಿ ಹಿಂದುಳಿದ ಎಲ್ಲಾ ಕಾಯಕ ಸಮುದಾಯದ ಜನರಿಗೆ ಬಸವ ಲಿಂಗಾಯತ ಪ್ರಜ್ಞೆ ಅರಿತು ಆಚರಿಸಿ ಬೆಳೆಸುವುದು
    ಇಂದಿನ ಜರೂರ ಕೆಲಸವಾಗಿದೆ. ಇಂಥ ಸಲಹೆ ನೀಡಿದ್ದಕ್ಕೆ
    ಧನ್ಯವಾದಗಳು. ಲಿಂಗಾಯತ ಧರ್ಮ ಉಳಿಯಬೇಕಾದರೆ
    ಲಿಂಗಾಯತ ಸಮಾಜ ಈ ಕೆಲಸ ಮಾಡಲೇಬೇಕು.

Leave a Reply

Your email address will not be published. Required fields are marked *