ಕಿರಿಯ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಿದ ಅಕ್ಕ: ಡಾ. ಸಿದ್ದರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಅಕ್ಕಮಹಾದೇವಿ ವೀರವಿರಾಗಿಣಿಯಾಗಿ,12 ನೇ ಶತಮಾನದ ಮಹಾನ್ ಸಾಧಕಿ. ಕಿರಿಯ ವಯಸ್ಸಿನಲ್ಲಿಯೇ ಹಿರಿದಾದ ಸಾಧನೆ ಮಾಡಿದ ಮೊದಲ ವಚನಕಾರ್ತಿ, ಕವಿಯಿತ್ರಿ. ತಮ್ಮ ವಚನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ಅನೇಕ ವಚನಗಳಲ್ಲಿ ಹೇಳಿದ್ದಾರೆ.

ಆಹಾರವ ಕಿರಿದು ಮಾಡಿರಣ್ಣ ಎಂದು ಹೇಳುವ ಮೂಲಕ ಈಗಿನ ಡಯಟ್ ಬಗ್ಗೆ ಅಂದೆ ಹೇಳಿ, ಆರೋಗ್ಯವ ಕಾಪಾಡಿಕೊಳ್ಳಲು ತಿಳಿಸಿದ್ದಾರೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2789ನೆಯ ಶಿವಾನುಭವದ ಸಾನ್ನಿಧ್ಯ ವಹಿಸಿ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಅಕ್ಕಮಹಾದೇವಿ ವಚನಗಳನ್ನು ಬರೆಯುವುದರ ಜೊತೆಗೆ, ಯೋಗಾಂಗ ತ್ರಿವಿಧಿ,ಸ್ವರ ವಚನಗಳನ್ನು ಬರೆದಿದ್ದಾರೆ. ಶರಣರು ಮಾನವ ಮಾನವೀಯತೆಯಿಂದ ಬದುಕಬೇಕು ಎಂದು ಹೇಳುತ್ತಾ, ಹಾವು ಹಿಡಿದು ಅದರ ಹಲ್ಲು ಕಿತ್ತು ಹಾವಾಡಿಗ ಅದನ್ನು ಆಡಿಸುತ್ತಾ ಹೋದರೆ, ಅವನ ಹೊಟ್ಟೆ ತುಂಬುತ್ತದೆ. ಯಾಕೆಂದರೆ ಹಲ್ಲು ತೆಗೆದರೆ ಮೇಲೆ ವಿಷವಿಲ್ಲ, ಆಗದು ಹೂವಂತ ಹಾವು ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಮನುಷ್ಯನಲ್ಲಿರುವ ದುರ್ಗುಣಗಳನ್ನು ತೆಗೆದರೆ ಒಳ್ಳೆಯ ಮನುಷ್ಯನಾಗಿ ಎಲ್ಲರಿಗೂ ಬೇಕಾದವರು ಆಗುತ್ತಾರೆಂದು ತುಂಬಾ ಅರ್ಥಪೂರ್ಣವಾಗಿ ವಚನಗಳನ್ನು ಅರ್ಥೈಸಿದರು.

ಧಾರವಾಡದ ಮೃತ್ಯುಂಜಯ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ವೀಣಾ ಎಲಿಗಾರ ಅವರು ಆತ್ಮಸ್ವಾತಂತ್ರ್ಯದ ಜ್ಯೋತಿ ಅಕ್ಕಮಹಾದೇವಿ ಕುರಿತು ಉಪನ್ಯಾಸ ನೀಡುತ್ತಾ, ಅನುಭವ ಮಂಟಪದಲ್ಲಿ ಅಕ್ಷರ ಕಲಿಯದಿದ್ದರೂ ಅಕ್ಕ ಬಸವಣ್ಣನವರ ಗುರುತ್ವವನ್ನು ಘಂಟಾಘೋಷವಾಗಿ ಹೇಳುತ್ತಾಳೆ. ಅಕ್ಕ ರಚಿಸಿದ ನೇರ, ನೈಜ ವಚನಗಳನ್ನು ಸರಿಯಾಗಿ ಅರ್ಥೈಸುವ ಕೆಲಸವಾಗಬೇಕು.

ದಿವ್ಯಯೋಗಿನಿ ಅಕ್ಕ ಲೌಕಿಕ ಬದುಕನ್ನು ತಿರಸ್ಕರಿಸಿ ಹೋದವಳು. ವೈರಾಗ್ಯದ ತವನಿಧಿಯಾದ ಅಕ್ಕ ರೂಹುಯಿಲ್ಲದ ಕೇಡಿಲ್ಲದ ಚೆಲುವಂಗೆ ಒಲಿದವಳು. ಚೆನ್ನಮಲ್ಲಿಕಾರ್ಜುನನಲ್ಲಿ ನಾನಿಲ್ಲ, ನಾನೇ ಚೆನ್ನಮಲ್ಲಿಕಾರ್ಜುನ ಎಂದು ತಿಳಿದವಳು.

ಹೆಣ್ಣು ಪುರುಷನಿಗೆ ಮಾಯೆಯಾಗಿ ಕಾಣುತ್ತಾಳೆ. ಹಾಗೆಯೇ ಗಂಡು ಹೆಣ್ಣಿಗೆ ಮಾಯೆಯಾಗಿ ಕಾಣುತ್ತಾನೆ. ತನಗೆ ತಿಳಿದಿದ್ದನ್ನು ಕೆಚ್ಚೆದೆಯಿಂದ ಹೇಳುವ ಧೈರ್ಯವೇ ಆಕೆಯ ಸ್ವಾತಂತ್ರ್ಯ. ಅನುಭಾವಿಯಾಗಿ ಭವವನ್ನು ಗೆದ್ದವಳು. ಅಂತರಂಗ ಬಹಿರಂಗವನ್ನು ಗೆದ್ದ ಏಕೈಕ ವಾರಸುದಾರರು ಅಕ್ಕಮಹಾದೇವಿ.

ಸುಮಂಗಲಾ ಹದ್ಲಿ ಇವರಿಂದ ಯೋಗ ಪ್ರದರ್ಶನ ನಡೆಯಿತು. ಅಕ್ಕಮಹಾದೇವಿ ಚಟ್ಟಿ ಹಾಗೂ ತಂಡದವರು ಜಾನಪದ ಹಾಡು ಹಾಡಿದರು. ಸುಮಂಗಲಾ ಹೊಸಂಗಡಿ ಇವರಿಂದ ಗೀತ ಗಾಯನ ನಡೆಯಿತು.

ಉಮಾ ರೆಡ್ಡಿ ಅವರಿಗೆ ಸನ್ಮಾನ ನಡೆಯಿತು. ಶಿವಲೀಲಾ ಅಕ್ಕಿ ಅವರು ಪರಿಚಯಿಸಿದರು. ಅರುಣಾ ಹಳಕಟ್ಟಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಮಾಧುರಿ ಮಾಳೆಕೊಪ್ಪ ಹಾಗೂ ವಚನ ಚಿಂತನವನ್ನು ಸುವರ್ಣ ಹೊಸಂಗಡಿ ನಡೆಸಿದರು. ದಾಸೋಹ ಸೇವೆಯನ್ನು ಸುಶೀಲಾ ಗಂಗಣ್ಣ ಕೋಟಿ, ಸುಜಾತ ಬಸವರಾಜ ಮೈದರಗಿ ಮತ್ತು ಜ್ಯೋತಿ ರಾಮನಗೌಡ ದಾನಪ್ಪಗೌಡ್ರ ಇವರುಗಳು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರ್ಮನ್ ಐ.ಬಿ. ಬೆನಕೊಪ್ಪ, ಸಹಚೇರಮನ್ ಶಿವಾನಂದ ಹೊಂಬಳ ಹಾಗೂ ಅಕ್ಕನ ಬಳಗದ ಪದಾಧಿಕಾರಿಗಳು ಮತ್ತು ಮಠದ ಭಕ್ತರು ಉಪಸ್ಥಿತರಿದ್ದರು. ಶಾಂತಾ ತುಪ್ಪದ ಸ್ವಾಗತಿಸಿದರು, ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/FjCpFjdZ7HXLwuA2LCEhga

Share This Article
Leave a comment

Leave a Reply

Your email address will not be published. Required fields are marked *