ಬಸವ ಜಯಂತಿ: ಬಸವನ ಬಾಗೇವಾಡಿಯಿಂದ 50 ಕಿ.ಮೀ ಪಾದಯಾತ್ರೆ, ವಿಶೇಷ ಓಟ

ಬಸವ ಮೀಡಿಯಾ
ಬಸವ ಮೀಡಿಯಾ

“ಬಸವನಬಾಗೇವಾಡಿಯಿಂದ ವಿಜಯಪುರದವರೆಗೆ ಬಸವಜ್ಯೋತಿ ಯಾತ್ರೆ”

ಬೆಂಗಳೂರು :

ಸಮಾನತೆಯ ಹರಿಕಾರ, ಕರ್ನಾಟಕದ ಸಾಂಸ್ಕೃತಿಕ ನಾಯಕ ಮಹಾತ್ಮ ಬಸವೇಶ್ವರ ಅವರ ಜಯಂತಿ ನಿಮಿತ್ತ ಅವರ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಮತ್ತು 50 ಕಿ.ಮೀ ಓಟವನ್ನು ಈ ವರ್ಷ ವಿಶಿಷ್ಟವಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ಬಿ. ಬಿ. ಪಾಟೀಲ ತಿಳಿಸಿದ್ದಾರೆ.

ಸಮಾನತೆಯ ಸಂಕೇತವಾಗಿರುವ ಬಸವಾದಿ ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಎಲ್ಲ ಜೀವಿಗಳ ಮೇಲೆ ದಯೆ ತೋರುವುದು. ‘ಕಾಯಕವೇ ಕೈಲಾಸ’ ಮತ್ತು ‘ದಾಸೋಹ’ ತತ್ವಗಳನ್ನು ಮುನ್ನಡೆಸುವುದೇ ಬಸವ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ.

ವಿಜಯಪುರ ಜಿಲ್ಲೆಯ ಹಂದಿನಗೂರು ಗ್ರಾಮದ ಬಿ.ಬಿ. ಪಾಟೀಲ ಅವರು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ತಂತ್ರಜ್ಞರಾಗಿದ್ದು, ಜೊತೆಗೆ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯದಲ್ಲಿ ತೊಡಗಿದ್ದಾರೆ. 2012 ರಿಂದ ಪ್ರತಿವರ್ಷ ಬಸವ ಜಯಂತಿಯಂದು ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಓಟದ ಮೂಲಕ ‘ಬಸವ ಜ್ಯೋತಿ’ಯನ್ನು ತರುವ ಕಾರ್ಯ ಮಾಡುತ್ತಿದ್ದು, ಈ ಬಾರಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಇವರೊಂದಿಗೆ ಕೈಜೊಡಿಸಿದ್ದು, ಈಗಾಗಲೇ 100ಕ್ಕೂ ಹೆಚ್ಚು ಜನ ಈ ಯಾತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ದಿ.19 ರವಿವಾರ ಸಂ.7ಗಂ. ಬಸವನ ಬಾಗೇವಾಡಿಯಿಂದ ಆರಂಭಗೊಳ್ಳುವ ಈ ಯಾತ್ರೆ ಮಸಬಿನಾಳ, ಉಕ್ಕಲಿ, ಉಕುಮನಾಳ ಮಾರ್ಗವಾಗಿ 20 ಸೋಮವಾರ ಬೆ.7ಗಂ. ಶಿವಗಿರಿ ಮೂಲಕ ಒಟ್ಟು 50 ಕಿ.ಮೀ ಸಂಚರಿಸಿ, ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.

ಈ ಸಂದರ್ಭದಲ್ಲಿ ಬಸವಜ್ಯೋತಿ ಯಾತ್ರೆಗೆ ನಿರಂತರ ಸಹಾಯ ಮತ್ತು ಸಹಕಾರ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕೆ ಸಚಿವ ಡಾ. ಎಂ. ಬಿ. ಪಾಟೀಲ, ಬಸವನ ಬಾಗೇವಾಡಿ ಶಾಸಕ, ಸಚಿವ ಶಿವಾನಂದ ಪಾಟೀಲ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಜಯಪುರದ ನಾಗರಿಕರು, ಬಸವಪರ ಸಂಘಟನೆಗಳು ಈ ಬಸವ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ.

ಈ ಯಾತ್ರೆಯಲ್ಲಿ ಅಲ್ಪೋಪಹಾರ ಹಾಗೂ ಪಾನಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಪಾದಯಾತ್ರೆ ಮತ್ತು ಓಟದಲ್ಲಿ ಪಾಲ್ಗೊಳ್ಳುವವರು ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಮನವಿ ಮಾಡಲಾಗಿದೆ.

https://docs.google.com/forms/d/1oZduLf4uofxSTpr5_4_CTUkfo8qNFWJGUHQCA1Ykjgk/viewform?edit_requested=true

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಶಿವನಗೌಡ ಪಾಟೀಲ-9900536161, ಡಾ.ರಾಜು -8095190218, ಡಾ.ಮಹಾಂತೇಶ ಜಾಲಗೇರಿ- 9480152598.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *