ಬ್ರಹ್ಮಕುಮಾರಿ ಬಸವ ಜಯಂತಿಯಲ್ಲಿ ಕರ್ಮ ಸಿದ್ದಾಂತದ ಬಗ್ಗೆ ಭಾಷಣ ಸ್ಪರ್ಧೆ

ಬಸವ ಮೀಡಿಯಾ
ಬಸವ ಮೀಡಿಯಾ

ಮಹಿಳೆಯರಿಗೆ ಕೊಟ್ಟಿರುವ ವಿಷಯ: ‘ಮುಂದಿನ ಜನ್ಮದಲ್ಲಾದರೂ ಕರ್ಮದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ’

ಚಿತ್ರದುರ್ಗ:

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಬಸವ ಜಯಂತಿ ಪ್ರಯುಕ್ತ ‘ಬಸವ ಪ್ರಭೆ’ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಏಪ್ರಿಲ್ 18 ನಡೆಯಲಿರುವ ಭಾಷಣ ಸ್ಪರ್ಧೆಯಲ್ಲಿ ಮಹಿಳೆಯರಿಗೆ ಕರ್ಮ ಸಿದ್ದಾಂತದ ಬಗ್ಗೆ ಮಾತನಾಡಲು ಅವಕಾಶ ನೀಡಲಾಗಿದೆ.

‘ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕರ್ಮದಿಂದ ಈ ಜನ್ಮದಲ್ಲಿ ಇಲ್ಲದಿದ್ದರೆ ಮುಂದಿನ ಜನ್ಮದಲ್ಲಾದರೂ ತನ್ನ ಕರ್ಮದ ಫಲವನ್ನು ಅನುಭವಿಸಲೇ ಬೇಕಾಗುತ್ತದೆ’ – ಇದು ಅವರಿಗೆ ಕೊಟ್ಟಿರುವ ವಿಷಯ.

ನಗರದ ಕೆಳಗೋಟೆ ಪ್ರದೇಶದಲ್ಲಿರುವ ಬ್ರಹ್ಮಕುಮಾರಿ ಸಭಾಂಗಣದಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ:

ಎಲ್‌ಕೆಜಿ ರಿಂದ 1ನೇ ತರಗತಿವರೆಗಿನ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ.

2ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ಶರಣರ ವಚನ ವಾಚನ ಸ್ಪರ್ಧೆ.

5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಬಸವಣ್ಣನವರ ಜೀವನದಿಂದ ಕಲಿಯಬೇಕಾದ ಆದರ್ಶ ಮೌಲ್ಯಗಳು’ ಕುರಿತು ಭಾಷಣ ಸ್ಪರ್ಧೆ.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರರಚನೆ (ಬಸವಣ್ಣನವರ ಜೀವನ ಘಟನೆಗಳು) ಅಥವಾ ‘ಕಾಯಕವೇ ಕೈಲಾಸ’ವಿಷಯದ ಪ್ರಬಂಧ ಸ್ಪರ್ಧೆ.

ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ
‘ಇಂದಿನ ಯುವಕರಿಗೆ ಬಸವಣ್ಣನವರ ಸಂದೇಶ’(ವಚನಗಳ ಆಧಾರದಿಂದ) ವಿಷಯದ ಮೇಲೆ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ.

ಪುರುಷರಿಗಾಗಿ‘ಭಗವಂತನು ಅಶರೀರಿಯಾಗಿದ್ದು, ಏಕ ದೇವೋಪಾಸನೆಯಿಂದ ಜಗತ್ತಿನಲ್ಲಿ ಏಕತೆ’ಎಂಬ ವಿಷಯದ ಮೇಲೆ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಬಸವಣ್ಣ ಅವರ ತತ್ವಗಳು, ವಚನಗಳು ಮತ್ತು ಸಮಾಜಕ್ಕೆ ನೀಡಿದ ಸಂದೇಶಗಳ ಕುರಿತು ವಿಶೇಷವಾಗಿ ಚರ್ಚೆ ನಡೆಯಲಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449266185 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *