‘ನೂರ ಓದಿದಡೇನು? ನೂರ ಕೇಳಿದರೇನು? ಕ್ರಿಯೆ ಇಲ್ಲದಿರೆ’

ಪ್ರೇಮಕ್ಕ ಅಂಗಡಿ
ಪ್ರೇಮಕ್ಕ ಅಂಗಡಿ

ಬೈಲಹೊಂಗಲ:

ಬಸವೇಶ್ವರರ, ಅಕ್ಕಮಹಾದೇವಿ ಅವರ ಜಯಂತಿ ಬರೀ ಮಾತಿಗೆ ಸೀಮಿತವಾಗಬಾರದು ತತ್ವಗಳು ಕೃತಿಯಲ್ಲಿ ಬಂದಾಗ ಮಾತ್ರ ಜಯಂತಿ ಸಾರ್ಥಕವಾಗುತ್ತದೆ.

ಸ್ವಾರ್ಥಕ್ಕಾಗಿ ಧರ್ಮದಿಂದ ವಂಚಿತರಾಗುತ್ತಿರುವ ನಾವು ಬಸವಣ್ಣನವರು ಹೇಳಿದ ‘ನೂರು ಓದಿದಡೇನು ನೂರು ಕೇಳಿದರೇನು ಆಸೆ ಹರಿಯದು ರೋಷ ಬಿಡದು… ‘ ಈ ವಚನ ಅರ್ಥಮಾಡಿಕೊಳ್ಳಬೇಕಾಗಿದೆ.

ಅಂತರಂಗದಲ್ಲಿ  ಅರಿವಾದಡೇನು ಬಹಿರಂಗದಲ್ಲಿ ಕ್ರಿಯೆ ಇಲ್ಲದನಕ್ಕ ಎಂಬ ಅಕ್ಕನ ಪ್ರಶ್ನೆ ಪ್ರಶ್ನೆ ಆಗಿಯೇ ಉಳಿದಿದೆ ಎಂದು ಖ್ಯಾತ ರಂಗ ಕಲಾವಿದ ಸಿ. ಕೆ. ಮೆಕ್ಕೇದ ಅವರು ಪತ್ರಿ ಬಸವೇಶ್ವರ ಅನುಭವ ಮಂಟಪದ ಜಾತ್ರಾ ಮಹೋತ್ಸವ, ಬಸವ ಜಯಂತಿ, ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಹಮ್ಮಿಕೊಂಡ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

115 ವರ್ಷದಿಂದ ಬಸವ ಜಯಂತಿ ಆಚರಿಸುತ್ತಿದ್ದೇವೆ. ಇವನಾರವ ಇವನಾರವ ಬಸವರ ವಾಣಿ ಮಾತಿಗೆ ಮಾತ್ರ ಸೀಮಿತವಾಗಿದೆ ಎಂದರು.

ಶೂನ್ಯ ಸಂಪಾದನೆಯ ಅಲ್ಲಮಪ್ರಭುಗಳು ಕಲ್ಯಾಣಕ್ಕೆ ಬಂದ ಪ್ರಸಂಗ ಕುರಿತು ಪ್ರೇಮಕ್ಕ ಅಂಗಡಿ ಅನುಭಾವ ನೀಡಿದರು. ಬೈಲವಾಡ ವರ್ತಿ ಮಠದ ಪೂಜ್ಯ ಶಂಕರದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಡಪ್ಪ ರಾಮಗುಂಡಿ ಅಧ್ಯಕ್ಷತೆ ವಹಿಸಿದ್ದರು.

ಸೃಷ್ಟಿ ಕಾಡನ್ನವರ, ಮೀನಾಕ್ಷಿ ಅವಳಪ್ಪನವರ ವಚನ ಪಠಿಸಿ ಚಿಂತನೆಗೈದರು. ಸುಹಾಸಿನಿ ಶಿಳ್ಳಿ ಪ್ರಾಸ್ತಾವಿಕ ನುಡಿದರು. ಶಾಸಕ ಮಹಾಂತೇಶ ಕೌಜಲಗಿ ಉಪಸ್ಥಿತಿಯಲ್ಲಿ ಆಗಸಗಿ ದಂಪತಿಗಳು ಧ್ವಜಾರೋಹಣ ನೆರವೇರಿಸಿದರು. ಅಜಗಣ್ಣ ಮುಕ್ತಾಯಕ್ಕ ಬಳಗ, ನಗರದ ನೂರಾರು ಭಕ್ತರು ಉಪಸ್ಥಿತರಿದ್ದರು

ಶಿವಲೀಲಾ ಹುಲಿಕಟ್ಟಿ ಸ್ವಾಗತಿಸಿದರು. ದುಂಡಯ್ಯ ಕುಲಕರ್ಣಿ ವಂದಿಸಿದರು. ರಾಜೇಶ್ವರಿ ದ್ಯಾಮನಗೌಡ, ಗೀತಾ ಅರಳಿಕಟ್ಟಿ  ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *