ವಿಜಯಪುರದಲ್ಲಿ ವಚನಗಳ ಭವ್ಯ ಮೆರವಣಿಗೆ: ಬಸವ ಜಯಂತಿ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ

ವಿಜಯಪುರ :

ವಿಶ್ವಗುರು ಬಸವಣ್ಣ ಅವರ ಜಯಂತಿ ಅಂಗವಾಗಿ ನಗರದಲ್ಲಿ “ಬಸವ ವಚನಗಳ ಭವ್ಯ ಶೋಭಾಯಾತ್ರೆ” ಸೋಮವಾರ ಸಂಭ್ರಮದಿಂದ ನೆರವೇರಿತು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ, ಬಸವೇಶ್ವರ ವೃತ್ತ ಮಾರ್ಗವಾಗಿ ಸಂಚರಿಸಿ, ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಮಾರೋಪಗೊಂಡಿತು.

ಈ ಭವ್ಯ ಶೋಭಾಯಾತ್ರೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಸಹೋದರಿಯರು ಹಳದಿ ಸೀರೆ ಧರಿಸಿ ಬಸವ ವಚನಗಳನ್ನು ಹೊತ್ತು ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಅವರೊಂದಿಗೆ ಬಿಳಿ ಉಡುಗೆ ಧರಿಸಿದ ಸಹೋದರರು ಹಾಗೂ ಸಾವಿರಾರು ಬಸವಭಕ್ತ ಶರಣ-ಶರಣೆಯರು ಭಾಗವಹಿಸಿ ಮೆರವಣಿಗೆಗೆ ಮೆರುಗು ತಂದರು.

ಮೆರವಣಿಗೆಯುದ್ದಕ್ಕೂ ಬಸವಣ್ಣನವರ ತತ್ವ-ಆದರ್ಶಗಳ ಘೋಷಣೆಗಳು ಮೊಳಗಿದವು. ಬಸವ ಜಯಂತಿ ಕೇವಲ ರಜೆ ದಿನವಾಗದೆ, ಬಸವಾದಿ ಶರಣರ ವಿಚಾರಧಾರೆ ಮನೆಮನೆಗೆ ತಲುಪಬೇಕು ಎಂಬ ಸಂದೇಶ ಪ್ರತಿಧ್ವನಿಸಿತು.

ಬಸವ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಬೆಳಿಗ್ಗೆ ಬಸವೇಶ್ವರ ವೃತ್ತದಲ್ಲಿರುವ ವಿಶ್ವಗುರು ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಸವಣ್ಣ ಜನಿಸಿದ ವಿಜಯಪುರ ಜಿಲ್ಲೆಯಲ್ಲಿ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಎಲ್ಲ ಸಮುದಾಯದವರು ಪಾಲ್ಗೊಂಡು ಸಂಭ್ರಮದಿಂದ ಬಸವ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಮೆರವಣಿಗೆಯಲ್ಲಿ ಸಚಿವರು ಸ್ವತಃ ಪಾಲ್ಗೊಂಡು ಶರಣರ ಮಾದರಿಯಲ್ಲಿ ಹೆಜ್ಜೆ ಹಾಕಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಶರಣರ ಸ್ತಬ್ಧಚಿತ್ರಗಳು, ವಚನ ಕಟ್ಟುಗಳು, ಜಾನಪದ ಕಲಾತಂಡಗಳು, ನಾನಾ ಕಲಾ ವೈಭವಗಳು ಮೆರವಣಿಗೆಯ ವಿಶೇಷತೆಗಳಾಗಿದ್ದವು.

ಕಾರ್ಯಕ್ರಮದಲ್ಲಿ ಶಾಸಕರಾದ ವಿಠ್ಠಲ ಕಟಕದೊಂಡ, ಮಾಜಿ ಶಾಸಕ ರಾಜು ಆಲಗೂರ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ವಿವಿಧ ಬಸವಪರ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ವಿ.ಸಿ. ನಾಗಠಾಣ, ಎಸ್.ಎಚ್. ನಾಡಗೌಡ, ಜೆ.ಎಸ್. ಪಾಟೀಲ, ಮ.ಗು. ಯಾದವಾಡ, ಪ್ರಭುಗೌಡ ಪಾಟೀಲ, ಬಸನಗೌಡ ಹರನಾಳ, ಚಂದ್ರಶೇಖರ ಗಂಟೆಪ್ಪಗೋಳ, ರವಿಕುಮಾರ ಬಿರಾದಾರ, ಶರಣು ಕಿರಣಗಿ, ಕಲ್ಲಪ್ಪ ಶಿವಶರಣ, ಲಾಯಪ್ಪ ಇಂಗಳೆ, ದಾನೇಶ ಅವಟಿ, ಜಗದೇವ ಸೂರ್ಯವಂಶಿ, ಶಾಂತವೀರ ಥಾಲಬಾವಡಿ, ವೈ.ಎಚ್. ಲಂಬು, ಶಿವಕುಮಾರ ಉಪ್ಪಿನ ಸೇರಿದಂತೆ ಪ್ರಮುಖರು ಭಾಗಿಗಳಾಗಿದ್ದರು.

ಭಾರತಿ ನಾವಿ, ಪ್ರತಿಭಾ ಪಾಟೀಲ, ಶೀಲಾ ಬಿರಾದಾರ, ಶ್ವೇತಾ ಹರನಾಳ, ಭಾರತಿ ಪಾಟೀಲ, ಶಾರದಾ ಕೊಪ್ಪ, ಸಂಗೀತಾ ಪೂಜಾರಿ, ಸುಮಾ ಅಂಗಡಿ, ಶ್ರೀದೇವಿ ಪಾಟೀಲ, ಶ್ವೇತಾ ಅಕ್ಕಲಕೋಟ, ಅನುಸೂಯಾ ಬಿರಾದಾರ, ಶಿವಲೀಲಾ ಮನಗೊಂಡ, ರಾಜೇಶ್ವರಿ ಮನಗೂಳಿ, ಅಕ್ಕಮ್ಮ ಮಠ, ನೀತಾ ಸೂಳಿಭಾವಿ, ಶಕುಂತಲಾ ಬಗಲಿ, ಮಂಗಲಾ ಡೊಮ್ಮನಾಳ, ಅನಿತಾ ಕುಮಾರ್, ಶೈಲಾ ಬಸವಪ್ರಭು, ತ್ರಿವೇಣಿ ಬುರ್ಲಿ, ಜಯಶ್ರೀ ಲದ್ದಾರ, ಅಶ್ವಿನಿ ಮಾನೆ, ಪೂರ್ಣಿಮಾ ಯಾದವಾಡ, ಸುನಿತಾ ಬಿರಾದಾರ, ರೇಖಾ ಬಿರಾದಾರ, ಐಶ್ವರ್ಯ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.

ಬೆಳಿಗ್ಗೆ ಬಸವನಬಾಗೇವಾಡಿಯಿಂದ ಬಂದ ಬಸವಜ್ಯೋತಿ ಯಾತ್ರೆಯನ್ನು ಬಸವೇಶ್ವರ ವೃತ್ತದಲ್ಲಿ ಬರಮಾಡಿಕೊಳ್ಳಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M

Share This Article
Leave a comment

Leave a Reply

Your email address will not be published. Required fields are marked *