ಭಾಲ್ಕಿ :
ಶ್ರೀ ಚನ್ನಬಸವಾಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಗುರುಬಸವ ಪಟ್ಟದ್ದೇವರು ವಹಿಸಿದರು.
ಪೂಜ್ಯ ಶಿವಯೋಗೇಶ್ವರ ಮಹಾಸ್ವಾಮಿಗಳು, ಪೂಜ್ಯ ಅನೀಲ ಮಹಾರಾಜರು, ಪೂಜ್ಯ ಮೈತ್ರಾದೇವಿತಾಯಿ ಸಮ್ಮುಖ ವಹಿಸಿದರು.

ಸಮಾರಂಭದ ಉದ್ಘಾಟನೆ ವಿಧಾನ ಪರಿಷತ್ತು ಸದಸ್ಯರಾದ ಎಂ.ಜಿ.ಮುಳೆ ಅವರು ಮಾಡಿ, ವಿಶ್ವಗುರು ಬಸವಣ್ಣನವರು ಜಗತ್ತಿಗೆ ಸಮಾನತೆಯ ಪ್ರಜಾತಂತ್ರದ ಮೌಲ್ಯ ನೀಡಿದರು. ಅನುಭವಮಂಟಪ ಸ್ಥಾಪಿಸಿ, ಸರ್ವರನ್ನು ಸಮಾನವಾಗಿ ಕಂಡರು. ಕಾಯಕ ದಾಸೋಹದ ಚಿಂತನೆಗಳು ಜಗತ್ತಿಗೆ ಮಾದರಿಯಾಗಿವೆ.
ಆ ಮೌಲ್ಯಗಳನ್ನು ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದ್ದೇವರು ಕಳೆದ ನಾಲ್ಕು ದಶಕಗಳಿಂದ ಅವಿಶ್ರಾಂತವಾಗಿ ಜನಮನದಲ್ಲಿ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ವಿಶೇಷವಾಗಿ ಇಂದಿನ ಸಭೆಯಲ್ಲಿ ಅನುಭವಮಂಟಪ ಸಂಸ್ಕೃತಿ ವಿದ್ಯಾಲಯದ ಹೆಣ್ಣುಮಕ್ಕಳು ಕನ್ನಡ, ಮರಾಠಿ, ಹಿಂದಿ ಮತ್ತು ಇಂಗ್ಲೀಷ ಭಾಷೆಯಲ್ಲಿ ಬಸವಣ್ಣನವರ ಕುರಿತು ಮಾತನಾಡಿದ್ದನ್ನು ಕೇಳಿದರೆ ನಮಗೆ ಅಪಾರ ಸಂತೋಷವಾಗಿದೆ.

ಪೂಜ್ಯರು ಮಕ್ಕಳಲ್ಲಿ ಬಸವತತ್ವದ ಬೀಜವನ್ನು ಬಿತ್ತುವ ಮೂಲಕ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಅವರ ಸೇವೆ ನಮ್ಮ ಭಾಗಕ್ಕೆ ಬಹುದೊಡ್ಡದಾಗಿದೆ. ಪೂಜ್ಯರು ಶತಾಯುಷಿಗಳಾಗಿ ನಮ್ಮೆಲ್ಲರಿಗೆ ಆಶೀರ್ವದಿಸುತ್ತಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ಡಿ.ಕೆ. ಸಿದ್ರಾಮ ವಹಿಸಿದರು.
ರಾಜಶೇಖರ ಅಷ್ಟೂರೆ ಬಸವ ಗುರುಪೂಜೆ ನೆರವೇರಿಸಿದರು. ಪ್ರಸನ್ನ ಪ್ರಕಾಶ ಖಂಡ್ರೆ, ಚನ್ನಬಸವಣ್ಣ ಬಳತೆ ಅವರು ಮಾತನಾಡಿದರು.
ಶಿವು ಲೋಖಂಡೆ, ಶಂಭುಲಿಂಗ ಕಾಮಣ್ಣ, ಮಲ್ಲಮ್ಮ ಆರ್. ಪಾಟೀಲ, ಮಲ್ಲಮ್ಮ ನಾಗನಕೇರೆ, ಸುಮನಬಾಯಿ ಜಲ್ದೆ, ಗುಂಡಪ್ಪ ಸಂಗಮಕರ, ಜೈರಾಜ ಪಾತ್ರೆ, ಅಮೀತ ಅಷ್ಟೂರೆ, ಯೋಗೇಶ ಅಷ್ಟೂರೆ, ಸಮಾರಂಭದಲ್ಲಿ ಉಪಸ್ಥತರಿದ್ದರು.

ಬೆಳ್ಳಿಗೆ ೬ ಗಂಟೆಗೆ ಸಾಮೂಹಿಕ ವಚನ ಪಾರಾಯಣ ನಡೆಯಿತು. ೭ ಗಂಟೆಗೆ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಲಾಯಿತು. ಪೂಜ್ಯರ ಅಮೃತ ಮಹೋತ್ಸವ ನಿಮಿತ್ಯ ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು ೩೦೦ ಹೆಚ್ಚು ಮಕ್ಕಳಿಗೆ ಪೂಜ್ಯರಿಂದ ಬಹುಮಾನ ವಿತರಣೆ ಮಾಡಲಾಯಿತು.
ದೀಪಕ ಠಮಕೆ ನಿರೂಪಿಸಿದರು. ರಾಜು ಜುಬರೆ ಶರಣು ಸಮರ್ಪಣೆ ಮಾಡಿದರು. ಮಂಜುಳಾ ಮಲ್ಲಯ್ಯ ವಚನ ಸಂಗಿತ ನಡೆಸಿಕೊಟ್ಟರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/J7ms3D54f67LKI9uBwRD0M
