ಕೂಡಲಸಂಗಮದಲ್ಲಿ ಯಶಸ್ವಿಯಾಗಿ ನಡೆದ ಬಸವಧರ್ಮ ಜಾಗೃತಿ ಶಿಬಿರ

ಬಸವ ಮೀಡಿಯಾ
ಬಸವ ಮೀಡಿಯಾ

ಕೂಡಲಸಂಗಮ :

ಇಲ್ಲಿನ ಬಸವಧರ್ಮ ಪೀಠದಲ್ಲಿ ಮೇ 1, 2 ಮತ್ತು 3 ಮೂರುದಿನ ಬಸವಧರ್ಮ ಜಾಗೃತಿ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಪೂಜ್ಯ ಲಿಂಗಾನಂದ ಅಪ್ಪಾಜಿ ಮತ್ತು ಪೂಜ್ಯ ಮಾತಾಜಿ ಅವರ ಸ್ಮರಣಾರ್ಥವಾಗಿ, ಪೂಜ್ಯ ಮಾತೆ ಗಂಗಾದೇವಿ ಅವರ ದಿವ್ಯ ಆಶಯದಂತೆ, ಪೂಜ್ಯ ಮಹದೇಶ್ವರ ಸ್ವಾಮೀಜಿ ಮತ್ತು ಪೂಜ್ಯ ಬಸವಯೋಗಿ ಸ್ವಾಮೀಜಿಯವರ ನೇತೃತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಬಸವಾದಿ ಶರಣರ ಚಿಂತನೆಗಳು, ಲಿಂಗಾಯತ ಧರ್ಮದ ತತ್ವಗಳು, ಬಸವ ತತ್ವದ ದರ್ಶನ ಹಾಗೂ ಇಂದಿನ ಸಮಾಜದಲ್ಲಿ ಅವುಗಳ ಪ್ರಾಮುಖ್ಯತೆ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸಗಳು ನಡೆದವು.

ಜೊತೆಗೆ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಹಾಗೂ ಅವಕಾಶ ವಂಚಿತ ಲಿಂಗಾಯತರ ವಿಚಾರಗಳ ಕುರಿತು ಸುದೀರ್ಘ ಚಿಂತನೆ ಮತ್ತು ಚರ್ಚೆಗಳು ನಡೆದವು.

ಅನುಭಾವಿಗಳು, ಚಿಂತಕರು, ವಕ್ತಾರರು ಭಾಗವಹಿಸಿ ಯುವಜನತೆಗೆ ಧರ್ಮದ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳು ಹಾಗೂ ಸಮಕಾಲೀನ ಸವಾಲುಗಳಿಗೆ ಸ್ಪಂದಿಸುವ ಮಾರ್ಗಗಳನ್ನು ಸ್ಪಷ್ಟಪಡಿಸಿದರು.

ಶಿಬಿರದ ಅಂಗವಾಗಿ ದೇವರ ಪರಿಕಲ್ಪನೆ, ಲಿಂಗಾಯತ ಧರ್ಮದ ವೈಶಿಷ್ಟ್ಯತೆ, ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಬಳಕೆ ಹಾಗೂ ಭವಿಷ್ಯದಲ್ಲಿ ಧರ್ಮದ ಬಲವರ್ಧನೆ ಕುರಿತು ವಿಶೇಷ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಯಿತು.

ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಯುವಕರು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶಿಷ್ಟ ಚೈತನ್ಯ ತುಂಬಿದರು.

ಇದರೊಂದಿಗೆ ರಾಷ್ಟ್ರೀಯ ಬಸವ ದಳದ ವತಿಯಿಂದ ಕ್ರೀಡಾ ಸ್ಪರ್ಧೆ, ಕೂಟಗಳನ್ನು ನಡೆಸಲಾಯಿತು. ಯುವಕರಲ್ಲಿ ಒಗ್ಗಟ್ಟು, ನಾಯಕತ್ವ ಹಾಗೂ ಶಾರೀರಿಕ ಚೈತನ್ಯವನ್ನು ಉತ್ತೇಜಿಸುವ ಉದ್ದೇಶದಿಂದ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಕ್ರಿಕೆಟ್ ಸ್ಪರ್ಧೆಯಲ್ಲಿ ಸಿದ್ದಲಿಂಗೇಶ್ವರ ಪಾಟೀಲ ಅವರ ನೇತೃತ್ವದ ಜಹೀರಾಬಾದ್ ರಾಷ್ಟ್ರೀಯ ಬಸವ ದಳ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಪ್ರಕಾಶ ಜೀರ್ಗೆ ಅವರ ನೇತೃತ್ವದ ಬೆಂಗಳೂರು ರಾಷ್ಟ್ರೀಯ ಬಸವ ದಳ ತಂಡ ದ್ವಿತೀಯ ಸ್ಥಾನ ಗಳಿಸಿತು.

ವೈಯಕ್ತಿಕ ಪ್ರಶಸ್ತಿಗಳ ವಿಭಾಗದಲ್ಲಿ ಪ್ರವೀಣ ಕೊಚ್ಚಕ್ಕಿ ಅವರು “ಸರಣಿ ಶ್ರೇಷ್ಠ” ಪ್ರಶಸ್ತಿ ಪಡೆದರು. ಪ್ರಕಾಶ ಜೀರ್ಗೆ ಅವರು “ಆರೇಂಜ್ ಕ್ಯಾಪ್” (Orange Cap) ಹಾಗೂ ಅಶೋಕ ಎಣಕೆಮೂರೆ ಅವರು “ಪರ್ಪಲ್ ಕ್ಯಾಪ್” (Purple Cap) ಪಡೆದು ಗಮನ ಸೆಳೆದರು.

ಮಹಿಳಾ ವಿಭಾಗದಲ್ಲಿ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಬಸವ ಗಂಗೋತ್ರಿ ಆಶ್ರಮದ ಮಕ್ಕಳು ಮಕ್ಕಳ ವಿಭಾಗದಲ್ಲಿ ಗೆದ್ದು ಸಂಭ್ರಮಿಸಿದರು.

ಅಲ್ಲದೆ, ಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲಸಂಗಮದಲ್ಲಿ ಹರಿಯುವ ಮಲಪ್ರಭಾ, ಘಟಪ್ರಭಾ ಮತ್ತು ಕೃಷ್ಣಾ ನದಿಗಳ ಸ್ವಚ್ಛತಾ ಕಾರ್ಯವನ್ನು ರಾಷ್ಟ್ರೀಯ ಬಸವ ದಳದ ಸದಸ್ಯರು ಕೈಗೊಂಡು ಪರಿಸರ ಜಾಗೃತಿ ಮೂಡಿಸಿದರು.

ಶಿಬಿರವು ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಯುವಜನರಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಬದ್ಧತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎನ್ನಬಹುದು.

ಆಯೋಜಕರು, ಸ್ವಯಂಸೇವಕರು ಹಾಗೂ ಭಾಗವಹಿಸಿದ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಬಸವಧರ್ಮ ಪೀಠ, ರಾಷ್ಟ್ರೀಯ ಬಸವದಳ ಕೃತಜ್ಞತೆ ಸಲ್ಲಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
2 Comments
  • ಓಂಶ್ರೀಗುರುಬಸವಲಿಂಗಾಯನಮಃ
    ಶ್ರೀ.ಮ.ನಿ.ಪ್ರ.ಸ್ವ. ಮುರುಘರಾಜೇಂದ್ರಕೋರಣೇಶ್ವರ ಮಹಾಸ್ವಾಮಿಗಳು ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ,ಅಸೂಟಿ, ಹೊಸಕೇರಿಬಸವನಗರ, ಮೆಣಸಗಿ,ಖಜೂರಿ,
    ವಿಶ್ವದರ್ಶನ ಕನ್ನಡ ದಿನ ಪತ್ರಿಕೆ ಹುಬ್ಬಳ್ಳಿ ಅರಹಟ್ಟಿ
    ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ವಚನ ಸಾಹಿತ್ಯ ಅರಿವಿನ ಮಹಾಮಾರ್ಗದರ್ಶನ ಸತಿಪತಿ ಸಂಸ್ಕಾರ ಅಗತ್ಯ ವಿಶ್ವಗುರುಬಸವಣ್ಣನವರ ಧರ್ಮ ಪತ್ನಿಗಂಗಾಂಬಿಕೆಯವರ ಆದರ್ಶ ಜೀವನ ಸ್ವಾರ್ಥಕತೆಯ ಮಂಥನ ವಚನ ಸಂವಿಧಾನ ಸದಾಕಾಲ ಪ್ರಸ್ತುತ ವಿಶ್ವ ದರ್ಶನ ಅಂತರಾತ್ಮ ಚೇತನ
    ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು ? ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ ? ಇವಳ ಲಿಂಗನಿಷ್ಠೆ ಇವಳಿಗೆ, ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ ಗಂಗಾಪ್ರಿಯ ಕೂಡಲಸಂಗಮದೇವಾ. ನಿಜವಾದ ಸತ್ಯ ನಿಷ್ಠೆ, ಇಷ್ಟಲಿಂಗ ಪೂಜಾನಿರತ ಸಾಹಿತ್ಯ
    ನೇತ್ರಮಧ್ಯದಲ್ಲಿ ಸೂಸುವ ತ್ರಿಣೇತ್ರನ
    ರೂಪವೆ ಸಿದ್ಧರಾಮಯ್ಯನಾದ.
    ಜಿಹ್ವೆಯಮಧ್ಯದಲ್ಲಿ ಸೂಸುವ ರುಚಿಯೆ ಸಿದ್ಧರಾಮಯ್ಯನಾದ.
    ಶ್ರೋತ್ರದಲ್ಲಿ ತುಂಬಿ ಪೂರೈಸುವ ಶಬ್ದವೆ ಸಿದ್ಧರಾಮಯ್ಯನಾದ.
    ಘ್ರಾಣದಲ್ಲಿ ತುಂಬಿತುಳುಕುವ ಮೂರ್ತಿಯೆ ಸಿದ್ಧರಾಮಯ್ಯನಾದ.
    ತ್ವಕ್ಕಿನಲ್ಲಿ ಅರಿವ ಮೂರ್ತಿಯೆ ಅಚ್ಚೊತ್ತಿದ ಸಿದ್ಧರಾಮಯ್ಯನಾದ.
    ಇಂತಪ್ಪ ಪರಶಿವಮೂರ್ತಿ ಸಿದ್ಧರಾಮಯ್ಯನ ಪಾದೋದಕವ ಕೊಂಡು
    ಪರವಸ್ತು ನಾನಾದೆ,
    ಗಂಗಾಪ್ರಿಯ ಕೂಡಲಸಂಗಮದೇವಾ. ಕಣ್ಣಿಗೆ ಕಂಡ ಸತ್ಯ ದರ್ಶನ ವಿಶ್ವಬಸವಧರ್ಮಜೀವನವಚನಸಂವಿಧಾನ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಹೃದಯ ಕಮಲ ಸಾಹಿತ್ಯ ಸಂಸ್ಕೃತಿಯ ಪ್ರತೀಕ ಜೀವನ ದರ್ಶನ ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ಸೋಲ್ಲಾಪೂರ ಸಿದ್ದರಾಮೇಶ್ವರ ವಚನ ವಿಶೇಷ ಆಸಕ್ತಿಯಿಂದ ತಿಳಿಸಿದ ವಿಶ್ವಗುರುಬಸವಣ್ಣನವರ ಆದರ್ಶ ಸತಿ ಗಂಗಾಂಬಿಕೆಯವರ ಅನುಭವ ಪ್ರಧಾನ ಕಾರ್ಯ ವಚನಕಾರರ ಮನಸ್ಸಿನಾಳದ ಅಂತಃಕರಣ ಪ್ರಭಾವ ಪರಿಣಾಮ ಲಿಂಗಕುಸುಮಗಳೆನ್ನಾಚಾರಲಿಂಗಕ್ಕಿಡಿಯೆ ಚೆನ್ನ.
    ಲಿಂಗವಸನದಂತರಂಗವಸನ ತರಿಸಿದೆಯೆ ಚೆನ್ನ.
    ಲಿಂಗದರ್ಚನೆಗುದಕವ ತರ ಪೋದೆಯೆ ಚೆನ್ನ.
    ಲಿಂಗನಿಮಿತ್ತ ಕುಸುಮಾರಾಮ ವಿರಚಿಸ ಹೋದೆಯೆ ಚೆನ್ನ.
    ಬಸವಯ್ಯನಾಚರಣೆ ಸೊಗಸಾಗದಾಗಿ ಹೋದೆಯೆ
    ಗಂಗಾಪ್ರಿಯ ಕೂಡಲಸಂಗ ಚೆನ್ನ. ನಿಜವಾದ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡದವರಿಗೆ ಸರಳಭಾಷೆ, ಆಡುನುಡಿ, ದೇವಭಾಷೆ ಮಾಡಿದವರು, ನಮ್ಮ ಬಸವಾದಿಪ್ರಮಥರು,ನಮ್ಮಯ್ಯನ ಮನದಲ್ಲಿ, ಮಾತಿನಲ್ಲಿ ಸೂಸುವ ಮೂರ್ತಿ
    ನೋಡನೋಡುತ್ತ ಬಯಲಾಯಿತ್ತಲ್ಲಾ !
    ಇದು ಅಲ್ಲಮಯ್ಯ ಮಾಡಿದ ಬೇಟ.
    ಹೋದುದು ನಿಶ್ಚಯವಾದಡೆ,ಕರುಳು ಕಳವಳಿಸುತ್ತಿದ್ದವು.
    ಇಂತಪ್ಪ ಕಂದ ಪೋದಡೆಯೂ ಪೋಗಿಲ್ಲ.
    ಗಂಗಾಪ್ರಿಯ ಕೂಡಲಸಂಗನ ಶರಣರ
    ಮೊಲೆಯನುಂಬುದಕ್ಕೆ ಬಾರ, ಕೇಳಾ ಚೆನ್ನಬಸವಣ್ಣಾ. ಅಳಿಯ ಅಕ್ಕನಾಗಮ್ಮನ ಮಗನಾಗಿದ್ದರು ವಿಶ್ವಗುರುಬಸವಣ್ಣನವರ ಪತ್ನಿ ನಿಜ ತ್ಯಾಗ ವೈರಾಗ್ಯ ಚಕ್ರವರ್ತಿಯ ಚನ್ನಬಸವಣ್ಣನವರನ್ನು ಮಾತೃಹೃದಯಿ ಗಂಗಾಂಬಿಕೆಯವರ ಅನುಭವ ಪ್ರಮಾಣ ಕರುಳು ಹೃದಯ ಭಾಷೆ ಅಂತಃಕರಣ ಪ್ರಭಾವ ಬೀರುವ ತಾಯಿ ಮಾತು, ಅಸೂಟಿಶ್ರೀಫಲಹಾರಶಿವಯೋಗಿಗಳವರಮೇಲೆ ವಿಶ್ವಪಥ ವಿಶ್ವ ದರ್ಶನ ಅಂತರಾತ್ಮ ಚೇತನ ನಡೆನುಡಿ ಬೆಳಕು ಚೆಲ್ಲುವ ಪ್ರಯತ್ನ , ಮಾಡಲಗೇರಿಯ ಹಿರೇಮಠಾಧ್ಯಕ್ಷರಾದ ಶ್ರೀಚನ್ನಬಸವಯ್ಯನವರಿಂದ ವಿಶ್ವ ಬಸವ ಧರ್ಮ ಶೂನ್ಯ ಪೀಠ ಭವ್ಯ ಭವಿಷ್ಯ ರೂಪಿಸುವ ಮೂಲಕ ದಿವ್ಯಪಥ ಲೋಕಹಿತ ನಿಜವಿರಕ್ತರ ಮಾರ್ಗ ಗುರೂಪದೇಶವ ಪಡೆಯುತ್ತಿರುವ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ಸಾಗರದ ನೀರು ಅಂತಾ ಹೇಳಲು,ಬರುತ್ತದೆ ಅದರ ಆಳ ಅಗಲ ವಿಸ್ತಾರ ಸಮೀಕ್ಷೆ ಕಾರ್ಯ ಮಾಡಲು ಸಾಧ್ಯವಿಲ್ಲ, ಅಂಗದಿಂದುದಯವಾದಾತ ಮಡಿವಾಳಯ್ಯ.
    ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ.
    ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ.
    ಪಾದೋದಕದಿಂದ ಉದಯವಾದವಳು ಅಕ್ಕಮಹಾದೇವಿ.
    ಮಂತ್ರದಿಂದುದಯವಾದಾತ
    ನಿಮ್ಮ ಸೋದರಮಾವ ಬಸವಯ್ಯ.
    ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ
    ಬಸವಣ್ಣಪ್ರಿಯ ಚೆನ್ನಸಂಗಯ್ಯ. ಹುಟ್ಟಿದ ಕ್ಷಣ ತಾಯಿಗೆ ನೋವು ಮರೆಯಲು ಸಾಧ್ಯ ಮಗನ ಮುಖದರ್ಶನ, ಆದರೆ ಸಮಾನತೆಯ ಸಂದೇಶ ಹೆಣ್ಣು ಗಂಡು ಧಾರ್ಮಿಕ ಸಂಸ್ಕಾರ ಪಡೆಯುವ ವಿಶ್ವದ ಪ್ರಪ್ರಥಮ ಜನಿವಾರ ಮಹಿಳೆಯರಿಗೆ ಧಾರ್ಮಿಕ ಹಕ್ಕಿನ ಕೇಳುವ ಮೂಲಕ ಅಕ್ಕನಾಗಮ್ಮನವರಿಗೆ ಇಲ್ಲದ ಜನಿವಾರ ನನಗೆ ಅವಶ್ಯ ಇಲ್ಲವೆಂದು ,ತಂದೆ ತಾಯಿಯ ಎದುರಿಸುವ ಸಾಮರ್ಥ್ಯ ವಿಶ್ವಗುರುಬಸವಣ್ಣನವರಿಗೆ ಮಾತ್ರ ಸಾಧ್ಯವಾಯಿತು, ಕೂಡಲಸಂಗಮದೇವ ಕೃಪೆಗೆ ಪಾತ್ರವಾಗಲು, ಮನೆಬಿಟ್ಟು, ಅಗ್ರಹಾರ ಸಿರಿ ಸಂಪತ್ತಿನ ಒಡೆಯ ನ್ಯಾಯ ಒದಗಿಸುವ ನ್ಯಾಯ ದರ್ಶನ ವಿಶ್ವಗುರು ಬಸವಣ್ಣನವರ ದಿವ್ಯಪ್ರಕಾಶ ಅನುಗ್ರಹ ನಿತ್ಯ ಬದುಕಿನ ಮಾರ್ಗದರ್ಶನ ಮಾಡುವ ನೇಮ ಮನದೊಡೆಯ ಮಹಾದೇವ ಮನವ ನೋಡಿಹೆನೆಂದು
    ಮನುಜರ ಕೈಯಿಂದ ಒಂದೊಂದ ನುಡಿಸುವನು.
    ಇದಕ್ಕೆ ಕಳವಳಿಸದಿರು ಮನವೆ, ಕಾತರಿಸದಿರು ತನುವೆ,
    ನಿಜವ ಮರೆಯದಿರು ಕಂಡಾ, ನಿಶ್ಚಿಂತನಾಗಿರು ಮನವೆ.
    ಬಸವಣ್ಣಪ್ರಿಯ ಚೆನ್ನಸಂಗಯ್ಯನು ಬೆಟ್ಟದ ನಿತಪರಾಧವನು
    ಒಂದು ಬೊಟ್ಟಿನಲ್ಲಿ ತೊಡೆವನು. ನಿಜ ಸಂದೇಶ ಅಸೂಟಿಶ್ರೀಫಲಹಾರ ಶಿವಯೋಗಿಗಳವರ ಜೀವನ ದರ್ಶನ ವಿಶ್ವಬಸವಧರ್ಮಜೀವನವಚನಸಂವಿಧಾನ ಶ್ರೀ.ಮ.ನಿ.ಪ್ರ.ಸ್ವ.ಜ.ಮುರುಘರಾಜೇಂದ್ರ ಕೋರಣೇಶ್ವರ ಮಹಾಸ್ವಾಮಿಗಳು ,ಶ್ರೀಜಗದ್ಗುರುಮುರುಘರಾಜೇಂದ್ರಕೋರಣೇಶ್ವರವಿರಕ್ತಮಠ ಅರಹಟ್ಟಿ ಅಸೂಟಿ ಹೊಸಕೇರಿಬಸವನಗರ ಮೆಣಸಗಿ ಖಜೂರಿ ವಿಶ್ವದರ್ಶನ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಅರಹಟ್ಟಿ

Leave a Reply

Your email address will not be published. Required fields are marked *