ಬಸವನಬಾಗೇವಾಡಿಯಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ಬಸವನಬಾಗೇವಾಡಿ :

ಮಹಾಸಾದ್ವಿ, ಶರಣೆ ಹೇಮರಡ್ಡಿ ಮಲ್ಲಮ್ಮನವರು ಅಪ್ಪಟ ಶಿವಭಕ್ತೆಯಾಗಿ, ತಾಳ್ಮೆ, ಸದ್ಗುಣ ಹಾಗೂ ಧರ್ಮನಿಷ್ಠೆಯ ಪ್ರತೀಕವಾಗಿದ್ದರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ವತಿಯಿಂದ ಆಯೋಜಿಸಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.

“ಸಂಸಾರದಲ್ಲೇ ಇದ್ದುಕೊಂಡು ಪರಮಾತ್ಮನನ್ನು ಕಾಣಬಹುದು ಎಂಬುದನ್ನು ಹೇಮರಡ್ಡಿ ಮಲ್ಲಮ್ಮನವರು ತಮ್ಮ ಜೀವನದ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರ ಜೀವನಾದರ್ಶಗಳು ಮತ್ತು ಅವರ ಶರಣ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ. ಇಂದಿನ ಯುವಪೀಳಿಗೆ, ವಿಶೇಷವಾಗಿ ಯುವತಿಯರು, ಅವರ ಸದ್ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು”ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀಕಾಂತ ಕೊಟ್ರಶೆಟ್ಟಿ, ಮನ್ನಾನ ಶಾಬಾದಿ, ಜಟ್ಟಿಂಗರಾಯ ಮಾಲಗಾರ, ಮಣಿಕಂಠ ಕಲ್ಲೂರ, ಸಂಗಣ್ಣ ಹುಜರತ್ತಿ, ಸಂಗಮೇಶ ಮೈಲೇಶ್ವರ, ವಿಜಯರೆಡ್ಡಿ ಬಿಂಜಲಬಾವಿ, ಶಂಕರ ರಜಪೂತ, ಸಂತೋಷ ಕುಳಗೇರಿ, ವಿಠ್ಠಲ ಲಮಾಣಿ, ರಮೇಶ ಪೆಂಟದ, ಸಂಗಮೇಶ ಜಾಲಗೇರಿ, ಅಶೋಕ ಹುಂಡೇಕಾರ, ಸಂತೋಷ ಲಮಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *